Advertisement

BJP ವಿರುದ್ಧ ಸಿದ್ದು ಆಪರೇಷನ್‌ ವಾಗ್ಧಾಳಿ: ಸಾವಿರಾರು ಕೋ.ರೂ. ಎಲ್ಲಿಂದ ಬಂತು?

12:04 AM Apr 05, 2024 | Team Udayavani |

ಚಿತ್ರದುರ್ಗ: “ಪ್ರಧಾನಿ ಮೋದಿಯವರು ತಮ್ಮನ್ನು ತಾವು ಚೌಕಿದಾರ್‌ ಎನ್ನುತ್ತಾರೆ. ಹಾಗಾದರೆ 25-30 ಕೋಟಿ ರೂ. ಕೊಟ್ಟು ನಮ್ಮ ಶಾಸಕರನ್ನು ಆಪರೇಷನ್‌ ಕಮಲ ಮಾಡಲು ಹಣ ಎಲ್ಲಿಂದ ಬಂತು? ಚುನಾವಣ ಖರ್ಚಿಗೆ ಸಾವಿರಾರು ಕೋಟಿ ರೂ. ಎಲ್ಲಿಂದ ಹುಟ್ಟಿತು?ಇದು ಪ್ರಧಾನಿ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿದ ಪ್ರಶ್ನೆ.

Advertisement

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಪರವಾಗಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಮಾತ ನಾಡಿದ ಸಿಎಂ, ಬಿಜೆಪಿ ವಿರುದ್ಧ “ಆಪರೇಷನ್‌’ ವಾಗ್ಧಾಳಿ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಎಂದೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ. 2008 ಮತ್ತು 2018 ಎರಡೂ ಬಾರಿ ಆಪರೇಷನ್‌ ಕಮಲ ಮಾಡಿಯೇ ಅಧಿ ಕಾರ ಹಿಡಿದಿದ್ದಾರೆ.

ಆದರೆ 2013 ಮತ್ತು 2023 ಎರಡೂ ಬಾರಿ ಕಾಂಗ್ರೆಸ್‌ ಅತ್ಯ ಧಿಕ ಸ್ಥಾನಗಳಲ್ಲಿ ಗೆದ್ದು ಅ ಧಿಕಾರ ಹಿಡಿದಿದೆ. ಆಪರೇಷನ್‌ ಕಮಲ ಮಾಡಲು, ಚುನಾವಣೆಗೆ ಖರ್ಚು ಮಾಡಲು ಸಾವಿರಾರು ಕೋಟಿ ರೂ. ಎಲ್ಲಿಂದ ಬಂತು? ಶೇ. 40 ಕಮಿಷನ್‌ ದಂಧೆಯಲ್ಲಿ ಹಣ ಮಾಡಿದ್ದಾರೆ. ಗುತ್ತಿಗೆ ದಾರರ ಸಂಘದ ಅಧ್ಯಕ್ಷರೇ ನೇರವಾಗಿ ಈ ಆರೋಪ ಮಾಡಿ, ತನಿಖೆ ನಡೆಸಿದರೆ ದಾಖಲೆ ಕೊಡುವುದಾಗಿ ತಿಳಿಸಿದ್ದಾರೆ. ಆದರೆ ಆಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ತನಿಖೆ ಮಾಡಿಸಲಿಲ್ಲ. ನಾನು ಇದರ ತನಿಖೆಗೆ ಆಯೋಗ ರಚನೆ ಮಾಡಿದ್ದೇನೆ. ಮುಂದೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.

ಸುಳ್ಳಾದರೆ ಈ ಕ್ಷಣವೇ ರಾಜೀನಾಮೆ
ಕೇಂದ್ರದಿಂದ ಬರ ಪರಿಹಾರಕ್ಕೆ ಅನುದಾನ ನೀಡಲು ಸಿದ್ದರಾಮಯ್ಯ ಮೂರು ತಿಂಗಳು ತಡ ವಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಅಮಿತ್‌ ಶಾ ಹಸಿ ಸುಳ್ಳು ಹೇಳಿದ್ದಾರೆ.

ಶಾ ಸುಳ್ಳಿಗೆ ಆರೆಸ್ಸೆಸ್‌ ತರಬೇತಿ
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಆರೆಸ್ಸೆಸ್‌ನಲ್ಲಿ ಬಿಜೆಪಿ ಯವರಿಗೆ ಸುಳ್ಳು ಹೇಳುವ ತರಬೇತಿ ನೀಡುತ್ತಾರೆ. ಆ ತರಬೇತಿ ಪಡೆದ ಅಮಿತ್‌ ಶಾ ಕೂಡ ಬರ ಪರಿಹಾರ ವಿಚಾರ ದಲ್ಲಿ ಸುಳ್ಳು ಹೇಳಿದ್ದಾರೆ.
-ಸಿದ್ದರಾಮಯ್ಯ, ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next