ಬೆಂಗಳೂರು: ಕೈ ಶಾಸಕರ ರೆಸಾರ್ಟ್ ರಾದ್ಧಾಂತ ಮುಂದುವರಿದಿರುವ ನಡುವೆ ಇದೀಗ ಮತ್ತೆ ಆಪರೇಷನ್ ಕಮಲದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ವೊಂದನ್ನು ಹಾಕಿದ್ದಾರೆ!
ಆಪರೇಷನ್ ಕಮಲ ಇನ್ನೂ ನಿಂತಿಲ್ಲ..ನಿನ್ನೆ ರಾತ್ರಿ ಕೂಡಾ ಬಿಜೆಪಿಯವರು ಕಾಂಗ್ರೆಸ್ ಶಾಸಕರೊಬ್ಬರನ್ನು ಸಂಪರ್ಕಿಸಿದ್ದಾರೆ. ಬಿಜೆಪಿ ಗಿಫ್ಟ್ ಮೊತ್ತ ಕೇಳಿದರೆ ಅಚ್ಚರಿಯಾಗುತ್ತೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ನಿಮಗೆ ಗಿಫ್ಟ್ ಕಳುಹಿಸಬೇಕು, ಯಾವಾಗ ಜಾಗಕ್ಕೆ ಕಳುಹಿಸಲಿ ಎಂದು ಕಾಂಗ್ರೆಸ್ ಶಾಸಕರನ್ನು ಕೇಳಿದ್ದರು. ಆದರೆ ಆ ಶಾಸಕರು ಗಿಫ್ಟ್ ಅನ್ನು ನಿರಾಕರಿಸಿ, ನಮ್ಮನ್ನು ನಮ್ಮ ಪಾಡಿಗೆ ಇರಲು ಬಿಡಿ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.