Advertisement
ವಿದೇಶಿಯರ ಸುರಕ್ಷಿತ ಸ್ಥಳಾಂತರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕದನ ವಿರಾಮವನ್ನು 72 ಗಂಟೆಗಳ ಕಾಲ ವಿಸ್ತರಿಸಲು ಎರಡೂ ಕಡೆಯವರು ಒಪ್ಪಿಗೆ ನೀಡಿದ್ದರು. ಆದರೆ, ವಾಸ್ತವದಲ್ಲಿ ಇದು ಜಾರಿಯಾಗಿಲ್ಲ. ಸೇನೆಯು ಯುದ್ಧವಿಮಾನಗಳ ಮೂಲಕ ಬಾಂಬ್‌ಗಳ ಮಳೆಗರೆದಿದ್ದರೆ, ಸೇನಾ ಪ್ರಧಾನ ಕಚೇರಿಯಲ್ಲಿ ಭಾರೀ ಘರ್ಷಣೆ ವರದಿಯಾಗಿದೆ. ಇಂಥ ಸಂಕಷ್ಟದ ನಡುವೆಯೂ ಭಾರತೀಯರ 10ನೇ ತಂಡ ಯುದ್ಧಪೀಡಿತ ದೇಶವನ್ನು ತೊರೆಯುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ 8, 9 ಮತ್ತು 10ನೇ ತಂಡವು ಸುಡಾನ್‌ನಿಂದ ಜೆಡ್ಡಾಗೆ ತಲುಪಿವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.
Related Articles
Advertisement
ಟರ್ಕಿ ವಿಮಾನದ ಮೇಲೆ ಫೈರಿಂಗ್ತನ್ನ ನಾಗರಿಕರನ್ನು ಕರೆದೊಯ್ಯಲೆಂದು ಖಾರ್ತೋಮ್‌ನ ವಾಯುನೆಲೆಗೆ ಬಂದಿಳಿದ ಟರ್ಕಿಯ ರಕ್ಷಣಾ ವಿಮಾನದ ಮೇಲೆ ಶುಕ್ರವಾರ ಗುಂಡಿನ ದಾಳಿಯಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ. ವಿಮಾನವು ವಾಡಿ ಸೇಡ್ನಾದಲ್ಲಿ ಸುರಕ್ಷಿತವಾಗಿ ಕೆಳಗಿಳಿದಿದೆ ಎಂದು ಮೂಲಗಳು ತಿಳಿಸಿವೆ. ಟರ್ಕಿ ವಿಮಾನದ ಮೇಲೆ ಅರೆಸೇನಾಪಡೆಯೇ ಗುಂಡಿನ ದಾಳಿ ನಡೆಸಿ, ಇಂಧನ ವ್ಯವಸ್ಥೆಯನ್ನು ಹಾನಿಗೀಡುಮಾಡಿದೆ ಎಂದು ಸುಡಾನ್ ಸೇನೆ ಆರೋಪಿಸಿದೆ. ಆದರೆ ಆರೋಪ ನಿರಾಕರಿಸಿರುವ ಅರೆಸೇನಾಪಡೆ, ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದೆ. ಸುಡಾನ್ ತೊರೆಯುವಂತೆ ಸೂಚನೆ
ಯಾವುದೇ ಕ್ಷಣದಲ್ಲಾದರೂ ಸುಡಾನ್‌ನಲ್ಲಿ ಪರಿಸ್ಥಿತಿ ಕೈಮೀರಿ ಹೋಗಬಹುದು. ಹೀಗಾಗಿ, ಅಲ್ಲಿರುವ ಎಲ್ಲ ಅಮೆರಿಕನ್ ನಾಗರಿಕರು 24ರಿಂದ 48 ಗಂಟೆಗಳೊಳಗಾಗಿ ಸುಡಾನ್ ತೊರೆಯಬೇಕು ಎಂದು ತನ್ನ ನಾಗರಿಕರಿಗೆ ಶ್ವೇತಭವನ ಸೂಚಿಸಿದೆ. ಜತೆಗೆ, ಸುಡಾನ್‌ನಲ್ಲಿರುವ ಅಮೆರಿಕದ ನಾಗರಿಕರ ರಕ್ಷಣೆಗೆ ಅಗತ್ಯವಾದ ಆಯ್ಕೆಗಳನ್ನು ನಾವು ಸೃಷ್ಟಿಸುತ್ತಿದ್ದೇವೆ ಎಂದು ಶ್ವೇತಭವನದ ವಕ್ತಾರ ಕರೈನ್ ಜೀನ್ ಪೀರ್ ತಿಳಿಸಿದ್ದಾರೆ.