Advertisement
ಬಿಜೆಪಿಯ ಆಪರೇಷನ್ ಕಮಲದ ತೀವ್ರತೆಗೆ ಆತಂಕಗೊಂಡಿದ್ದ ಕಾಂಗ್ರೆಸ್ ಹೈಕಮಾಂಡ್ ನೇರವಾಗಿ ಮಧ್ಯ ಪ್ರವೇಶ ಮಾಡಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಬೆಂಗಳೂರಿಗೆ ಕಳುಹಿಸಿ, ತತ್‌ಕ್ಷಣ ಅತೃಪ್ತರನ್ನು ಸಂಪರ್ಕಿಸಿ ಸಮಾಧಾನಪಡಿಸುವ ಕಾರ್ಯದಲ್ಲಿ ಬಹುತೇಕ ಯಶಸ್ವಿಯಾಗಿದೆ.
ಬಿಜೆಪಿ ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದ್ದ ಅರ್ಧದಷ್ಟು ಶಾಸಕರನ್ನು ವಾಪಸ್ ಕರೆಯಿಸಿ ಮನವೊಲಿಸುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಯಶಸ್ವಿ ಯಾಗಿದ್ದು, ಸಮಾಧಾನಗೊಂಡ ಕೆ.ಸಿ. ವೇಣುಗೋಪಾಲ್ ಹೈದರಾಬಾದ್‌ಗೆ ತೆರಳಿದರು. ಅತೃಪ್ತರ ಮನವೊಲಿಕೆ: ಮುಂದುವರಿದ ಪ್ರಯತ್ನ
ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರೊಂದಿಗೆ ಮುಂಬಯಿ ಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾದ ಅತೃಪ್ತ ಶಾಸಕರಾದ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಚಿಂಚೊಳ್ಳಿ ಶಾಸಕ ಡಾ| ಉಮೇಶ್ ಜಾಧವ್, ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಅವರನ್ನೂ ಅವರ ಆಪ್ತರು ಹಾಗೂ ಸಂಬಂಧಿಕರ ಮೂಲಕ ಸಂಪರ್ಕಿಸುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡಿದ್ದು, ಗುರುವಾರ ಸಂಜೆಯೊಳಗೆ ಬಿ. ನಾಗೇಂದ್ರ, ಉಮೇಶ್ ಜಾಧವ್ ಮುಂಬಯಿಯಿಂದ ವಾಪಸ್ ಬರುವ ವಿಶ್ವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ರಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
60 ಕೋಟಿ ರೂ.,ಸಚಿವ ಸ್ಥಾನದ ಆಫರ್!ಹಾಸನ: ಬಿಜೆಪಿಯವರು ಜೆಡಿಎಸ್ ಶಾಸಕರಿಗೂ ಆಮಿಷ ಒಡ್ಡುತ್ತಿದ್ದಾರೆ. ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ಗೂ 60 ಕೋಟಿ ರೂ., ಮಂತ್ರಿಸ್ಥಾನದ ಆಮಿಷವನ್ನು ಜಗದೀಶ್ ಶೆಟ್ಟರ್ ಅವರೇ
ನೀಡಿದ್ದಾರೆ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ. ಬಿಎಸ್‌ವೈ ಬಸ್ ಸ್ಟಾಂಡ್ ಲವ್: ಇಬ್ರಾಹಿಂ
ಯಡಿಯೂರಪ್ಪ ಅವರದು ಬಸ್‌ಸ್ಟಾಂಡ್ ಲವ್. ಅವರು ಪತಿವ್ರತೆ ಯರನ್ನು ಕರೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬಸ್‌ಸ್ಟಾಂಡ್ ಬಸವಿಯರು ಮಾತ್ರ ಅವರ ಜತೆ ಹೋಗುತ್ತಾರೆ ವಿನಾ ಪತಿವ್ರತೆಯರು ಹೋಗುವುದಿಲ್ಲ ಎಂದು ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಕ್ರಾಂತಿಯ ಹೊಸ ವರ್ಷ ರಾಜಕಾರಣದ ಹೆಸರಿಗೆ ದೊಡ್ಡ ಕಳಂಕ. ಹತ್ತಿಪ್ಪತ್ತು ಶಾಸಕರನ್ನು ಕರೆದುಕೊಂಡು ಹೋಗುವುದು ಸಹಜ. ಆದರೆ ಬಿಜೆಪಿಯವರು 104 ಶಾಸಕರನ್ನು ಕೂಡಿ ಹಾಕಿದ್ದಾರೆ. ನಾರ್ಮಲ್ ಡೆಲಿವರಿ ಮಾಡಿ ಎಂದರೆ ಯಡಿಯೂರಪ್ಪ ಆಪರೇಷನ್ ಮಾಡುತ್ತಿದ್ದಾರೆ. ಈಗ ಗರ್ಭಪಾತವಾಗಿದೆ ಎಂದು ಲೇವಡಿ ಮಾಡಿದರು.