ನವದೆಹಲಿ: ಯುದ್ಧ ಪೀಡಿತ ಇಸ್ರೇಲ್‌ನಿಂದ ಭಾರತೀಯರನ್ನು ರಕ್ಷಿಸಲು ಪ್ರಾರಂಭಿಸಲಾದ ‘ಆಪರೇಷನ್ ಅಜಯ್’ ಭಾಗವಾಗಿ, 274 ಭಾರತೀಯ ಪ್ರಜೆಗಳನ್ನು ಹೊತ್ತ ನಾಲ್ಕನೇ ವಿಮಾನವು ಭಾನುವಾರ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು.
ವಿಶೇಷ ಕಾರ್ಯಾಚರಣೆ ಆರಂಭಿಸಿದ ನಂತರ ಇಸ್ರೇಲ್ ನಿಂದ ಭಾರತಕ್ಕೆ ಬಂದ ನಾಲ್ಕನೇ ವಿಮಾನವಾಗಿದೆ. ಇದು ಸ್ಥಳೀಯ ಕಾಲಮಾನ ರಾತ್ರಿ 11.45ಕ್ಕೆ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಿಂದ ಹೊರತು ಇಂದು ಬೆಳಿಗ್ಗೆ ದೆಹಲಿಗೆ ಬಂದಿಳಿದಿದೆ.
‘ಆಪರೇಷನ್ ಅಜಯ್’ ಆರಂಭಿಸಿದ ನಂತರ ಇಸ್ರೇಲ್‌ನಿಂದ ಒಂದೇ ದಿನದಲ್ಲಿ ಹೋರಾಟ ಎರಡನೇ ವಿಮಾನವಾಗಿದೆ. ಇದಕ್ಕೂ ಮುನ್ನ, 197 ಭಾರತೀಯ ಪ್ರಜೆಗಳ ಮೂರನೇ ವಿಮಾನ ಸ್ಥಳೀಯ ಕಾಲಮಾನ ಸಂಜೆ 5.40 ರ ಸುಮಾರಿಗೆ ಇಸ್ರೇಲ್ ನಿಂದ ದೆಹಲಿಗೆ ಹೊರಟಿತ್ತು.
ಇಸ್ರೇಲ್‌ನಿಂದ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನ ದೆಹಲಿ ತಲುಪುತ್ತಿದ್ದಂತೆ ಅವರನ್ನು ಕೇಂದ್ರ ಸಚಿವ ವಿ.ಕೆ ಸಿಂಗ್ ಬರಮಾಡಿಕೊಂಡರು.
ಆಪರೇಷನ್ ಅಜಯ್ ಕಾರ್ಯಾಚರಣೆ ಆರಂಭವಾದಂದಿನಿಂದ ಇಸ್ರೇಲ್‌ನಿಂದ ಮೊದಲ ಚಾರ್ಟರ್ ಫ್ಲೈಟ್ ಗುರುವಾರ 212 ಜನರನ್ನು ಕರೆತಂದ್ದಿತ್ತು. ಎರಡನೇ ವಿಮಾನದಲ್ಲಿ 235 ಭಾರತೀಯ ಪ್ರಜೆಗಳನ್ನು ಶುಕ್ರವಾರ ತಡರಾತ್ರಿ ಕರೆತರಲಾಯಿತು. ಇದರೊಂದಿಗೆ ಇಲ್ಲಿಯವರೆಗೆ ಒಟ್ಟು 918 ಭಾರತೀಯ ಪ್ರಜೆಗಳನ್ನು ಇಸ್ರೇಲ್‌ನಿಂದ ಭಾರತಕ್ಕೆ ಭಾರತೀಯ ಪ್ರಜೆಗಳನ್ನು ಕರೆತಂದಂತಾಗಿದೆ.
ಇದನ್ನೂ ಓದಿ: Elections: ಮಧ್ಯಪ್ರದೇಶ,ತೆಲಂಗಾಣ, ಛತ್ತೀಸ್‌ಗಢ ಚುನಾವಣೆ: ʼಕೈʼ ಮೊದಲ ಪಟ್ಟಿ ಬಿಡುಗಡೆ