Advertisement
ನೀರಿನ ಸಮಸ್ಯೆಗೆ ಕೊಳವೆ ಬಾವಿಯೊಂದೇ ಪರಿಹಾರ ಎನ್ನುವ ಕಾಲಘಟ್ಟದಲ್ಲಿ ಮುಂಡ್ಕೂರು ಗ್ರಾ. ಪಂ. ಅದಕ್ಕೆ ಪರ್ಯಾಯವಾಗಿ ನದಿ ತಟದಲ್ಲಿ ತೆರೆದ ಬಾವಿ ತೋಡಿ ಇಡೀ ಗ್ರಾಮಕ್ಕೆ ನೀರೊದಗಿಸುವ ಪ್ರಯತ್ನಕ್ಕೆ ಕೈ ಹಾಕಿದೆ.ಈಗಾಗಲೇ ಮುಂಡ್ಕೂರು ಅಲಂಗಾರು ಬಳಿ ಶಾಂಭವಿ ನದಿ ಪಕ್ಕ ಬೃಹತ್ ಬಾವಿ ತೋಡಿ ಪಂಚಾಯತ್‌ನ ಬಹುತೇಕ ಮನೆಗಳಿಗೆ ನೀರೊದಗಿಸಿ ಮನೆ ಮಾತಾಗಿದ್ದರೆ ಇದೀಗ ಪೊಸ್ರಾಲುವಿನ ಬಾವಿ ಸಚ್ಚೇರಿಪೇಟೆ, ಪೊಸ್ರಾಲು, ಬೆನೊìಟ್ಟು, ಆಲಂಗಾರುಗುಡ್ಡೆ, ಬೊಮ್ಮಯ ಲಚ್ಚಿಲ್, ಸನಿಲ್ ನಗರ, ಆಳಗುಂಡಿ, ಸಚ್ಚೇರಿಪೇಟೆ, ಕುದ್ರಬೆಟ್ಟು, ಪೊಣ್ಣೆದು ಹಾಗೂ ಕಜೆ ಮಾರಿಗುಡಿ ಗಾಂದಡು³ ಭಾಗದ ಜನರ ನೀರಿನ ಬವಣೆ ನೀಗಿಸಲಿದೆ.
ಪೊಸ್ರಾಲು ಶಾಂಭವಿ ನದಿಯ ಸಮೀಪ ಈ ಬಾವಿಯು ಸುಮಾರು 12.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಪಂಚಾಯತ್‌ನ ಹದಿನಾಲ್ಕನೇಯ ಹಣಕಾಸು ಯೋಜನೆಯಲ್ಲಿ ಸುಮಾರು 7.5 ಲಕ್ಷ ರೂ. ಅನುದಾನ ಹಾಗೂ ಉಳಿದ ಮೊತ್ತವನ್ನು ಪಂಚಾಯತ್ ನಿಧಿಯಿಂದ ಬಳಕೆ ಮಾಡಿಕೊಂಡು ಇಡೀ ಗ್ರಾಮಕ್ಕೆ ಅನುಕೂಲಕರವಾಗುವ ಬೃಹತ್ ಬಾವಿ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರನ್ನು ಪಂಚಾಯತ್ ವತಿಯಿಂದ ಮನೆ ಮನೆ ಪೂರೈಸಲಾಗುವುದು ಎಂದು ಯೋಜನೆಯ ರೂವಾರಿ ಸತ್ಯಶಂಕರ ಶೆಟ್ಟಿ ತಿಳಿಸಿದ್ದಾರೆ. ತೆರೆದ ಬಾವಿ
17 ಅಡಿಯ ಬಾವಿ ಈಗಾಗಲೇ ನಿರ್ಮಾಣಗೊಂಡಿದ್ದು ಬಾವಿಯಲ್ಲಿ ನೀರು ಒರತೆ ತುಂಬಿ ತುಳುಕುತ್ತಿದೆ.
ಇನ್ನೂ ಆಳವಾಗಿ ಈ ಬಾವಿಯನ್ನು ನಿರ್ಮಿಸಿದಲ್ಲಿ ಸುಮಾರು 4 ಪಂಪ್ ಸೆಟ್ ಇಟ್ಟು ಇಡೀ ಗ್ರಾಮಕ್ಕೆ ನೀರು ನೀಡಬಹುದು ಎನ್ನುವುದು ಇಲ್ಲಿನ ಜನರ ಅನಿಸಿಕೆ. ಪರಿಸರಕ್ಕೆ ಪೂರೈಕೆಯನ್ನು ನೀಡಲಿದೆ.
Related Articles
ಪೊಸ್ರಾಲು ಶಾಂಭವಿ ನದಿಯ ತಟದಲ್ಲಿ ಬಾವಿಯೊಂದನ್ನು ನಿರ್ಮಿಸಲು ಇಲ್ಲಿನ ಪ್ರಗತಿಪರ ಕೃಷಿಕ ಹಾಗೂ ಸಮಾಜಸೇವಕ ಕಡಪುಕರಿಯ ಜಯರಾಮ ಶೆಟ್ಟಿಯವರು ತಮ್ಮ ಸ್ವಂತ ಜಮೀನಿನಲ್ಲಿ ಜಾಗ ನೀಡಿದ್ದಾರೆ.
Advertisement
ನೀರಿನ ಸಮಸ್ಯೆಗೆ ಮುಕ್ತಿ24×7 ನೀರು ಪೂರೈಕೆ ಮುಂಡ್ಕೂರು ಗ್ರಾ.ಪಂ.ನ ಮೂಲ ಮಂತ್ರ. ತೆರೆದ ಬಾವಿಯ ಮೂಲಕ ಇಡೀ ಗ್ರಾ. ಪಂ.ಗೆ ನೀರುಣಿಸಬೇಕೆಂಬುದೇ ನಮ್ಮ ಮೂಲ ಉದ್ದೇಶ. ಈ ಸದುದ್ದೇಶಕ್ಕೆ ಜಯರಾಮ ಶೆಟ್ಟಿಯಂತವರು ಸಹಕರಿಸಿದ ಪರಿಣಾಮ ಯಶಸ್ಸು ಕಂಡಿದ್ದೇವೆ. ಈ ಬಾವಿಯಿಂದ ಮುಂಡ್ಕೂರಿನ ಸಾಕಷ್ಟು ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕಲಿದೆ. -ಸತ್ಯಶಂಕರ ಶೆಟ್ಟಿ,, ಮುಂಡ್ಕೂರು ಗ್ರಾಮ ಪಂಚಾಯತ್‌ನ ಸದಸ್ಯ ಸದುದ್ದೇಶ ಯೋಜನೆಗೆ ಸಹಾಯ
ಇಡೀ ಊರಿನ ಜನರಿಗೆ ಉಪಯೋಗವಾಗುವ ಯೋಜನೆಯಾದ್ದರಿಂದ ನಮ್ಮ ಸ್ವಂತ ಜಾಗದಲ್ಲಿ ಬಾವಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಪಂಚಾಯತ್‌ನ ಸದುದ್ದೇಶಿತ ಯೋಜನೆಗೆ ನಾವು ಕೈಜೋಡಿಸಿದ್ದೇವೆ.
-ಪೊಸ್ರಾಲು ಕಡಪುಕರಿಯ ಜಯರಾಮ ಶೆಟ್ಟಿ, ಕೃಷಿಕ