Advertisement

ಮುಕ್ತ ವಿವಿ: 32 ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ?

06:00 AM Jun 13, 2018 | |

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ 2018-19ನೇ ಶೈಕ್ಷಣಿಕ ಸಾಲಿಗೆ ಮಾನ್ಯತೆ ನೀಡಲು ಯುಜಿಸಿ ಕೊನೆಗೂ ಒಪ್ಪಿಗೆ ಸೂಚಿಸಿದೆ. ಇದರಿಂದ ಮಾನ್ಯತೆ ನವೀಕರಣವಾಗದೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮಸುಕಾಗಿದ್ದ ಮುಕ್ತ ವಿವಿ ಅಂಗಳದಲ್ಲೀಗ ಆಶಾವಾದ ಕಾಣತೊಡಗಿದೆ. ಹೊಸದಿಲ್ಲಿಯ ದೂರ ಶಿಕ್ಷಣ ಪರಿಷತ್‌  2008ರಲ್ಲಿ ಕರ್ನಾಟಕ ರಾಜ್ಯಮುಕ್ತ ವಿವಿಗೆ ನೀಡಿದ್ದ ಮಾನ್ಯತೆಯು 2012-13ನೇ ಸಾಲಿಗೆ ಮುಕ್ತಾಯ ವಾದ ಅನಂತರ 2013-14ನೇ ಸಾಲಿನಿಂದ ಮಾನ್ಯತೆ ನವೀಕರಿಸಿರಲಿಲ್ಲ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮಸುಕಾಗಿ, ನೂರಾರು ಮಂದಿ ಸರಕಾರಿ ನೌಕರಿಯನ್ನೂ ಕಳೆದುಕೊಳ್ಳಬೇಕಾಯಿತು. 

Advertisement

2016ರ ಮಾರ್ಚ್‌ನಲ್ಲಿ ಮುಕ್ತ ವಿವಿಗೆ ಕುಲಪತಿಯಾಗಿ ನೇಮಕವಾದ ಪ್ರೊ| ಡಿ. ಶಿವಲಿಂಗಯ್ಯ  ಸತತ ಪ್ರಯತ್ನ ಮಾಡಿ, ಯುಜಿಸಿಯ ಎಲ್ಲ ನಿಯಮಗಳನ್ನು ಪಾಲನೆ ಮಾಡಿದ್ದಲ್ಲದೆ, ಈ ಸಂಬಂಧ 18 ಬಾರಿ ದಿಲ್ಲಿಗೆ ಹೋಗಿ ಯುಜಿಸಿ ಮುಖ್ಯಸ್ಥರನ್ನು ಖುದ್ದು ಭೇಟಿ ಮಾಡಿದ್ದಲ್ಲದೆ, 25 ಬಾರಿ ಪತ್ರವನ್ನೂ ಬರೆದು ಮಾನ್ಯತೆ ನವೀಕರಣಕ್ಕೆ ಮನವಿ ಮಾಡಿದ್ದಾರೆ. ಈ ಮಧ್ಯೆ 2017-18ನೇ ಶೈಕ್ಷಣಿಕ ಸಾಲಿಗೆ ಮಾನ್ಯತೆ ನೀಡುವಂತೆ ನ್ಯಾಯಾಲಯ ಹೇಳಿದರೂ ಅದನ್ನು ಪಾಲಿಸದ ಯುಜಿಸಿ, ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದೆ. ಆ ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇದೆ. ಆದರೆ ಜೂ.30ಕ್ಕೆ ಈ ಸಾಲಿನ ಶೈಕ್ಷಣಿಕ ವರ್ಷವೇ ಮುಗಿಯಲಿದೆ. ಹೀಗಾಗಿ 2018-19ನೇ ಶೈಕ್ಷಣಿಕ ಸಾಲಿನಲ್ಲಿ ತಾಂತ್ರಿಕೇತರ ಕೋರ್ಸ್‌ ಗಳನ್ನು ಹೊರತುಪಡಿಸಿ ಬಿಎ, ಬಿಕಾಂ, ಎಂ.ಎ., ಎಂಎಸ್ಸಿಯಂತಹ 32 ಕೋರ್ಸ್‌ಗಳಿಗೆ ಮಾನ್ಯತೆ ನೀಡುವಂತೆ ಮುಕ್ತ ವಿವಿಯಿಂದ ಯುಜಿಸಿಗೆ ಮನವಿ ಮಾಡಲಾಗಿದೆ.

ಈ ಮಧ್ಯೆ ಜೂ.4ರಂದು ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಡಾ| ಸತ್ಯನಾರಾಯಣ ಜತಿಯಾ ಅಧ್ಯಕ್ಷತೆಯ ಮಾನವ ಸಂಪನ್ಮೂಲ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಮುಕ್ತ ವಿವಿ ಕುಲಪತಿ ಪ್ರೊ|ಶಿವಲಿಂಗಯ್ಯ ಮಾನ್ಯತೆ ನವೀಕರಣವಾಗದೇ ಇರುವುದರಿಂದ ವಿವಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮನವರಿಕೆ ಮಾಡಿಕೊಟ್ಟಿದ್ದು, ಮನವಿ ಆಲಿಸಿದ 16 ಮಂದಿ ಸಂಸದರನ್ನು ಒಳಗೊಂಡ ಸಂಸದೀಯ ಸ್ಥಾಯಿ ಸಮಿತಿ, ಮಾನ್ಯತೆ ನವೀಕರಿಸಿಕೊಡುವಂತೆ ಯುಜಿಸಿ ಜಂಟಿ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಜೂನ್‌ 6ರಂದು ಮುಕ್ತ ವಿವಿಗೆ ಯುಜಿಸಿಯಿಂದ ಪತ್ರ ಬಂದಿದ್ದು, 2018-19ನೇ ಸಾಲಿಗೆ ಮಾನ್ಯತೆ ನೀಡಲು ಸಿದ್ಧವಿದ್ದು, ಅಗತ್ಯ ದಾಖಲೆಗಳೊಂದಿಗೆ ದಿಲ್ಲಿಗೆ ಬರಲು ಸಿದ್ಧರಿರಿ ಎಂದು ತಿಳಿಸಿದೆ.

ಮುಕ್ತ ವಿವಿ ಕೇಳಿರುವ ಕೋರ್ಸ್‌ಗಳು:
ಬಿಎ, ಬಿಕಾಂ, ಬಿ.ಇಡಿ., ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಎಂ.ಎ. (ಪುರಾತತ್ವ ಇತಿಹಾಸ ಪ್ರಾಚ್ಯವಸ್ತು), ಎಂ.ಎ (ಅರ್ಥಶಾಸ್ತ್ರ), ಎಂ.ಎ. (ಇಂಗ್ಲಿಷ್‌), ಎಂ.ಎ. (ಹಿಂದಿ), ಎಂ.ಎ. (ಇತಿಹಾಸ), ಎಂ.ಎ.. (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ), ಎಂ.ಎ.(ಕನ್ನಡ), ಎಂ.ಎ. (ರಾಜ್ಯಶಾಸ್ತ್ರ ), ಎಂ.ಎ. (ಸಾರ್ವಜನಿಕ ಆಡಳಿತ), ಎಂ.ಎ. (ಸಂಸ್ಕೃತ), ಎಂ.ಎ. (ಸಮಾಜಶಾಸ್ತ್ರ), ಎಂ.ಎ. (ಉರ್ದು), ಮಾಸ್ಟರ್‌ ಆಫ್ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌, ಮಾಸ್ಟರ್‌ ಆಫ್ ಕಾಮರ್ಸ್‌, ಮಾಸ್ಟರ್‌ ಆಫ್ ಲಾ, ಮಾಸ್ಟರ್‌ ಆಫ್ ಲೈಬ್ರರಿ ಅಂಡ್‌ ಇನಾ#ರ್ಮೇಷನ್‌ ಸೈನ್ಸ್‌, ಎಂಎಸ್ಸಿ. (ಬಯೋ ಕೆಮಿಸ್ಟ್ರಿ), ಎಂಎಸ್ಸಿ (ಬಯೋ ಟೆಕ್ನಾಲಜಿ), ಎಂಎಸ್ಸಿ. (ಕೆಮಿಸ್ಟ್ರಿ), ಎಂಎಸ್ಸಿ (ಕ್ಲಿನಿಕಲ್‌ ನ್ಯೂಟ್ರಿಷನ್‌ ಅಂಡ್‌ ಡಯಟೆಟಿಕ್ಸ್‌), ಎಂಎಸ್ಸಿ (ಕಂಪ್ಯೂಟರ್‌ ಸೈನ್ಸ್‌), ಎಂ.ಎಸ್ಸಿ (ಎನ್ವಿರಾನ್‌ಮೆಂಟಲ್‌ ಸೈನ್ಸ್‌), ಎಂಎಸ್ಸಿ (ಜಿಯೋಗ್ರಫಿ), ಎಂಎಸ್ಸಿ (ಇನಾ#ರ್ಮೇಷನ್‌ ಸೈನ್ಸ್‌), ಎಂಎಸ್ಸಿ (ಗಣಿತ), ಎಂಎಸ್ಸಿ (ಮೈಕ್ರೊಬಯೋಲಜಿ), ಎಂಎಸ್ಸಿ  (ಫಿಸಿಕ್ಸ್‌), ಎಂಎಸ್ಸಿ  (ಸೈಕಾಲಜಿ).

Advertisement

Udayavani is now on Telegram. Click here to join our channel and stay updated with the latest news.

Next