Advertisement

ಶ್ರವಣಬೆಳಗೊಳದಲ್ಲಿ 88ನೇ ಮಹಾಮಸ್ತಕಾಭಿಷೇಕಕ್ಕೆ ತೆರೆ

06:00 AM Sep 15, 2018 | Team Udayavani |

ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿ ಭಗವಾನ್‌ ಬಾಹುಬಲಿ ಸ್ವಾಮಿಯ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಶುಕ್ರವಾರ ಅದ್ಧೂರಿಯಾಗಿ ತೆರೆ ಎಳೆಯಲಾಯಿತು.

Advertisement

ಪ್ರಥಮ ಜಲಕಳಶದೊಂದಿಗೆ ಆರಂಭಗೊಂಡು, ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚಾರ್ಯ ವರ್ಧಮಾನ ಸಾಗರ ಮಹಾರಾಜರ ಮಾರ್ಗದರ್ಶನ ಮತ್ತು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ಪೂರ್ಣಗೊಂಡಿತು. ವಿಂಧ್ಯಗಿರಿ ಬೆಟ್ಟದ ಮೇಲೆ ಸ್ವಾಮಿಗೆ ಶಾಂತಿದಾರ ತೊಡಿಸಿ, ಮಹಾಮಂಗಳಾರತಿ ಮಾಡಲಾಯಿತು. ಬಾಹುಬಲಿ ಪಾದದಿಂದ ಹಿಡಿದು ಶಿರದವರೆಗೆ ಬೃಹತ್‌ ಏಲಕ್ಕಿ ಹಾರವನ್ನು ಅರ್ಪಿಸಲಾಯಿತು.

ನಂತರ, ಧಾರ್ಮಿಕ ವಿಧಿಯಂತೆ ಪಾದಪೂಜೆ ಪ್ರಾರಂಭವಾಗಿ ಅಕ್ಷತೆ, ಧೂಪ, ದೀಪ, ಭಸ್ಮ, ಕುಂಭದೊಂದಿಗೆ ಪಂಚವರ್ಣ, ಜಲದೊಂದಿಗೆ ಪುಷ್ಪ ಹಾಗೂ ಶ್ರೀಫ‌ಲಗಳನ್ನು ಬಾಹುಬಲಿಗೆ ಅರ್ಪಿಸಿ ಜಲಾಭಿಷೇಕ, ಎಳನೀರು, ಇಕ್ಷುರಸ, ಕ್ಷೀರ, ಕಲ್ಕಚೂರ್ಣ, ಅರಿಶಿಣ, ಕಷಾಯ, ಚತುಷೊRàನ ಕಳಶ, ಕೇಸರಿ, ಶ್ರೀಗಂಧ, ಚಂದನ, ಅಷ್ಟಗಂಧ, ಪಂಚಾಮೃತ ಅಭಿಷೇಕಗಳನ್ನು ನೇರವೇರಿಸಲಾಯಿತು. 

ನಂತರ, ಧಾರ್ಮಿಕ ವಿಸರ್ಜನಾ ಜಯಮಂಗಲ ಘೋಷಣೆಗಳನ್ನು ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾರಾಜರು ಘೋಷಣೆ ಮಾಡಿ, ಲೋಕಕಲ್ಯಾಣಾರ್ಥ ಎಲ್ಲರಿಗೂ ಸುಖ ಶಾಂತಿ ಆರೋಗ್ಯ ದೊರೆಯಲಿ ಎಂದು ಆಶೀರ್ವದಿಸಿದರು. ನಂತರ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಉಪಸ್ಥಿತರಿರುವ ಎÇÉಾ ಆಚಾರ್ಯರ ಆಶೀರ್ವಾದದಿಂದ ಮಹಾಮಸ್ತಕಾಭಿಷೇಕ ಮಹೋತ್ಸವ ಯಶಸ್ವಿಯಾಗಿದೆ ಎಂದು ಹೇಳಿದರು. 

ವಿಂಧ್ಯಗಿರಿ ಪರ್ವತದ ಮೇಲಿರುವ 24 ತೀರ್ಥಂಕರರ ಮೂರ್ತಿಗಳಿಗೆ ಮತ್ತು ಭಗವಾನ್‌ ಬಾಹುಬಲಿ ಸ್ವಾಮಿಗೆ ಏಕಕಾಲದಲ್ಲಿ 108 ಕಳಶಗಳಿಂದ ಜಲಾಭಿಷೇಕ ಜರುಗಿದ ನಂತರ ಚತ್ರತ್ರಯವಾದ ಕಳಶವನ್ನು ತೆರವುಗೊಳಿಸುವುದರ ಮೂಲಕ ಧಾರ್ಮಿಕ ವಿಸರ್ಜನೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next