Advertisement

ಎಟಿಎಂಗೆ ತುಂಬಬೇಕಿದ್ದ 43 ಲಕ್ಷ ರೂ.ಕಳವು

05:06 PM Oct 29, 2021 | Team Udayavani |

ಹಾಸನ: ಎಟಿಎಂಗಳಿಗೆ ಹಣ ತುಂಬುವ ವಾಹನದಲ್ಲಿದ್ದ 43 ಲಕ್ಷ ರೂ.ನಗದು ಕಳುವಾಗಿರುವ ಪ್ರಕರಣ ಅರಸೀಕೆರೆ ತಾಲೂಕು ಬಾಣಾವರದಲ್ಲಿ ನಡೆದಿದೆ. ಜಿಲ್ಲಾದ್ಯಂತ ಸಿಎಂಎಸ್‌ ಇನ್ಫೋ ಸಿಸ್ಟಂ ಲಿಮಿಟೆಡ್‌ನ‌ ಹರೀಶ್‌ಕುಮಾರ್‌ ಎಂಬವರು 19 ವರ್ಷಗಳಿಂದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

Advertisement

ಈ ಸಂಸ್ಥೆ ಹಾಸನ ಜಿಲ್ಲಾ ದ್ಯಂತ ಒಟ್ಟು 9 ವಾಹನ ಮತ್ತು ಒಟ್ಟು 60 ಜನ ಸಿಬ್ಬಂದಿಯನ್ನು ಹೊಂದಿದ್ದು, ಬುಧವಾರ ಎಟಿಎಂಗಳಿಗೆ ಹಣ ತುಂಬಲು ಹಾಸನ , ಅರಸೀಕೆರೆಯ ವಿವಿಧ ಬ್ಯಾಂಕುಗಳಿಂದ 1.78 ಲಕ್ಷ ರೂ. ನಗದನ್ನು ಡ್ರಾ ಮಾಡಿತ್ತು. ಬಳಿಕ, ವಾಹನದಲ್ಲಿ ತುಂಬಿಕೊಂಡು ಚಾಲಕ ನಟೇ ಶ್‌, ಕ್ಯಾಷ್‌ ಆμàಸರ್ ರುದ್ರೇಶ ಮತ್ತು ಕೆ.ಎಲ್‌.ಭರತ್‌ ಹಾಗೂ ಗನ್‌ಮ್ಯಾನ್‌ನೊಂ ದಿಗೆ ಅರಸೀಕೆರೆ, ಬಾಣಾವರ ಜಾವಗಲ್‌ ಕರ್ನಾಟಕ ಬ್ಯಾಂಕ್‌ ಎಟಿಎಂಗಳಿಗೆ ಹಣ ತುಂ ಬಲು ಹೊರಟರು.

ಇದನ್ನೂ ಓದಿ:- ಮಳೆಗಾಲದಲ್ಲಿ ಈ ವಿಧಾನವನ್ನು ಅನುಸರಿಸಿ ಭತ್ತವನ್ನು ಸಲೀಸಾಗಿ ಬೆಳೆಯಿರಿ|

ಅರಸೀಕೆರೆ ಬಿ.ಎಚ್‌ ರಸ್ತೆ ಯ ಕರ್ನಾಟಕ ಬ್ರಾಂಚ್‌ ಎಟಿಎಂಗೆ ಒಟ್ಟು 20. 50 ಲಕ್ಷ ರೂ. ಲೋಡ್‌ ಮಾಡಿ ನಂತರ ಜಾಜೂರಿಗೆ ಬಂದು ಕರ್ನಾಟಕ ಬ್ಯಾಂಕಿನ ಎಟಿಎಂಗೆ 12 .50 ಲಕ್ಷ ರೂ., ಲೋಡ್‌ ಮಾಡಿ ಅರಸೀಕೆರೆಯಲ್ಲಿ ಆರ್‌ಎಸ್‌ಎಸ್‌‌ರ ಕಾರ್ಯಕ್ರಮ ಇದ್ದ ಕಾರಣ ಅರ ಸೀಕೆರೆ ಕೆನರಾ ಬ್ಯಾಂಕ್‌ ಎಟಿಎಂಗೆ ತುಂಬ ಬೇಕಾಗಿದ್ದ ಹಣ ತುಂಬದೆ ವಾಪಸ್‌ ವಾಹನದಲ್ಲಿ ಇಟ್ಟು ಕೊಂಡು ಬಾಣಾವರಕ್ಕೆ ಬಂದು ಬಾಣಾವರ ಬಿ.ಎಚ್‌.ರಸ್ತೆಯ ಎಸ್‌ಬಿಐ ಬ್ಯಾಂಕಿನ ಎಟಿಎಂಗೆ ಹಣ ಹಾಕಲು ಚಾಲಕ ನಟೇಶ್‌ ರನ್ನು ವಾಹನದಲ್ಲಿಯೇ ಬಿಟ್ಟು ಎಟಿಎಂಗೆ ಹಣವನ್ನು ತುಂಬುತ್ತಿರುವಾಗ ಚಾಲಕ ನಟೇಶ್‌ಗೆ ಸುಸ್ತಾದ ಕಾರಣ ಸಿಎಂಎಸ್‌ ವಾಹನದಿಂದ ಇಳಿದು ಸುಧಾರಿಸಿ ಕೊಂಡುವಾಹನಕ್ಕೆ ಹತ್ತಿದಾಗ ಎಡಭಾಗದ ಬಾಗಿಲನ್ನು ಯಾರೋ ಕಳ್ಳರು ತೆಗೆದು ವಾಹ ನದ ಮಧ್ಯಭಾಗದ ಸೀಟಿನ ಮೇಲೆ ಇಟ್ಟಿದ್ದ ಕೆನರಾ ಬ್ಯಾಂಕ್‌ ಎಟಿಎಂಗೆ ಸಂಬಂಧಿಸಿದ 43 ಲಕ್ಷ ರೂ. ಇದ್ದ ಬ್ಯಾಗ್‌ ಕಳವು ಮಾಡಿದ್ದಾರೆ ಂದು ಹರೀಶ್‌ಕುಮಾರ್‌ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next