Advertisement

ಉಮ್ಮನ್‌ ಚಾಂಡಿ, ವೇಣುಗೋಪಾಲ್‌ಗೆ ಸಂಕಷ್ಟ

07:43 PM Aug 17, 2021 | Team Udayavani |

ನವದೆಹಲಿ: ಕೇರಳದ ಮಾಜಿ ಸಿಎಂ ಉಮ್ಮನ್‌ ಚಾಂಡಿ, ಕೇಂದ್ರದ ಮಾಜಿ ಸಚಿವ ಕೆ.ಸಿ.ವೇಣುಗೋಪಾಲ್‌ ಮತ್ತು ಇತರೆ ರಾಜಕಾರಣಿಗಳ ವಿರುದ್ಧ ಕೇರಳದ ಸೋಲಾರ್‌ ಹಗರಣ ಪ್ರಕರಣದ ಆರೋಪಿ ಮಹಿಳೆಯು ಹೊರಿಸಿದ್ದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.

Advertisement

2012ರಲ್ಲಿ 6 ಮಂದಿ ಆರೋಪಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮಹಿಳೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದಲ್ಲಿ ಕೇರಳ ಕ್ರೈಂ ಬ್ರಾಂಚ್‌ ತನಿಖೆ ನಡೆಸಿತ್ತು.

ಇದನ್ನೂ ಓದಿ:‘ತಾಲಿಬಾನ್ ಗಳಿಂದ ಹತಳಾಗಲು ಕಾಯುತ್ತಿದ್ದೇನೆ’ : ಅಫ್ಘಾನ್ ಪ್ರಥಮ ಮಹಿಳಾ ಮೇಯರ್  

ಪ್ರಸಕ್ತ ವರ್ಷದ ಆರಂಭದಲ್ಲಿ ಕೇರಳದ ಆಡಳಿತಾರೂಢ ಸಿಪಿಎಂ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಚಾಂಡಿ, ವೇಣುಗೋಪಾಲ್‌ ಮಾತ್ರವಲ್ಲದೇ ಹಿಬಿ ಈಡನ್‌, ಅಡೂರ್‌ ಪ್ರಕಾಶ್‌, ಶಾಸಕ ಎ.ಪಿ.ಅನಿಲ್‌ ಕುಮಾರ್‌, ಬಿಜೆಪಿ ನಾಯಕ ಎ.ಪಿ.ಅಬ್ದುಲ್ಲಾ ಕುಟ್ಟಿ ಕೂಡ ಪ್ರಕರಣದ ಆರೋಪಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next