ಮುಂಬೈ: ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ಯದಿರುವಂತೆ ಮುಂಬೈ ರೈಲ್ವೆ ನಿರ್ಬಂಧ ಹೇರಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್19 ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಹಿಂದೆಯೇ ನಿಯಮವನ್ನು ಜಾರಿಗೆ ತರಲಾಗಿದ್ದು, ಆದರೂ ಮಹಿಳೆಯರು ತಮ್ಮೊಂದಿಗೆ ಮಕ್ಕಳನ್ನು ರೈಲಿನಲ್ಲಿ ಪ್ರಯಾಣಿಸಲು ಕರೆತರುತ್ತಿದ್ದರು. ಇದೀಗ ಮತ್ತೊಮ್ಮೆ ಮಾರ್ಗಸೂಚಿ ಹೊರಡಿಸಲಾಗಿದ್ದು, ರೈಲುಗಳಲ್ಲಿ ಮಕ್ಕಳು ಪ್ರಯಾಣ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿ ರೈಲ್ವೆ ನಿಲ್ದಾಣಗಳ ದ್ವಾರದ ಬಳಿ ಆರ್.ಪಿ.ಎಫ್ (Railway Protection Force) ಅಧಿಕಾರಿಗಳನ್ನು ನೇಮಿಸಲಾಗಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ: ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮತ್ತೆ ಬಂಧನ, ಮಗಳಿಗೆ ಗೃಹಬಂಧನ
ಈ ನಿಯಮಗಳು ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಮಾರ್ಗಗಳೆರಡಕ್ಕೂ ಅನ್ವಯವಾಗಲಿದ್ದು, ಇದಕ್ಕೆ ಡಿ.ಆರ್.ಎಮ್ ಮತ್ತು ಮುಂಬೈ ಸೆಂಟ್ರಲ್ ರೈಲ್ವೆ ಕೂಡಾ ಅನುಮತಿ ನೀಡಿವೆ.
ಮಹಾರಾಷ್ಟ್ರ ಸರ್ಕಾರ ಕಳೆದ ಅಕ್ಟೋಬರ್ ನಲ್ಲಿ ‘ ಬಿಗಿನ್ ಅಗೇನ್’ ಮಿಷನ್ ನ ಅಡಿಯಲ್ಲಿ ತುರ್ತು ಕಾರ್ಯಗಳ ಸಂದರ್ಭದಲ್ಲಿ ಮತ್ತು ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ನಿಗದಿತ ಸಮಯದಲ್ಲಿ ರೈಲು ಪ್ರಯಾಣ ಮಾಡಲು ಅವಕಾಶ ಕಲ್ಪಿಸಿತ್ತು.
ಮಹಾರಾಷ್ಟ್ರದಲ್ಲಿ ನವೆಂಬರ್ 26 ರಂದು ಒಂದೇ ದಿನ ಬರೋಬ್ಬರಿ 6,406 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಪ್ರಮಾಣ 18,02,365 ಕ್ಕೆ ಏರಿಕೆಯಾಗಿದೆ.