Advertisement

14ರಿಂದ ಅವಶ್ಯಕ ವಸ್ತು ಮಾರಾಟಕ್ಕೆ ಮಾತ್ರ ಅವಕಾಶ

04:25 PM Jun 12, 2021 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಜೂ. 14ರಿಂದ 21ರ ವರೆಗೆ ರಾಜ್ಯ ಸರಕಾರ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ವಿನಾಯಿತಿ ನೀಡಿದ್ದು, ಜಿಲ್ಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಅವಶ್ಯಕ ವಸ್ತುಗಳನ್ನು ಮಾರಾಟ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ವಿನಾಯಿತಿ ನೀಡಿದಂತೆ ಸರಕಾರಿ ಕಚೇರಿಯಲ್ಲಿ ಶೇ.50ರಷ್ಟು, ಕಾರ್ಖಾನೆಗಳು ಶೇ.50 ರಷ್ಟು ಹಾಗೂ ಗಾರ್ಮೆಂಟ್ಸ್‌ ಶೇ.30 ರಷ್ಟು ಸಿಬ್ಬಂದಿಯೊಂದಿಗೆ ಆರಂಭಿಸಲು ವಿನಾಯಿತಿ ಇರುತ್ತದೆ. ಅಗತ್ಯ ವಸ್ತುಗಳನ್ನು ಮಾರಾಟ, ಹೋಟೆಲ್‌ ಮತ್ತು ಮದ್ಯ ಮಾರಾಟ (ಪಾರ್ಸಲ್‌ ಮಾತ್ರ), ಸಿಮೆಂಟ್‌ ಮತ್ತು ಕಬ್ಬಿಣ ಮಾರಾಟ, ಬೀದಿ ಬದಿ ವ್ಯಾಪಾರಕ್ಕೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶವಿರುತ್ತದೆ ಎಂದರು. ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ಮಾತನಾಡಿ, ಉದ್ಯಾನವನಗಳಲ್ಲಿ ಜನರು ವಾಯು ವಿಹಾರ ಮಾಡಲು ಅವಕಾಶ ನೀಡಲಾಗಿದೆ. ಸಂಜೆ 7ರಿಂದ ಬೆಳಗ್ಗೆ 5 ಗಂಟೆಯವರೆಗೆ ನಿತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇದರ ಜತೆಗೆ ವಾರದ ಕರ್ಫ್ಯೂ ಯಥಾಸ್ಥಿತಿ ಇರಲಿದೆ ಎಂದ ಅವರು ಚಿನ್ನದ ಅಂಗಡಿ, ಬಟ್ಟೆ ಅಂಗಡಿಗಳನ್ನು ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ. ಹೋಟಲ್‌ ಮಧ್ಯದ ಅಂಗಡಿಗಳು (ಪಾರ್ಸಲ್‌) ಬೆಳಿಗ್ಗೆ 6 ಗಂಟೆಯಿಂದ 2 ಗಂಟೆಯವರೆಗೆ ಆರಂಭ ಮಾಡಬಹುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾತನಾಡಿ ಕಟ್ಟಡ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು, ನೈಟ್‌ ಕರ್ಫ್ಯೂ ವೇಳೆ ಹಿಂದೆ ಇದ್ದಂತೆ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ವಿರುತ್ತದೆ. ವಾರದಲ್ಲಿ ಶನಿವಾರ ಮತ್ತು ರವಿವಾರ ವಿಕೆಂಡ್‌ ಕರ್ಫ್ಯೂ ಜಾರಿಯಲ್ಲಿರಲಿದೆ. ಯಾವುದೇ ಮದುವೆ ಕಾರ್ಯಕ್ರಮಕ್ಕೆ ಅವಕಾಶವಿರುವದಿಲ್ಲ. ಮೊದಲಿನಂತೆ ನಿಷೇಧಾಜ್ಞೆ ಮುಂದುವರೆಯಲಿದೆ. ಜಾತ್ರೆ, ಸಂಜೆ ರದ್ದು ಮಾಡಲಾಗಿದ್ದು, ದೇವಸ್ಥಾನವು ತೆರೆಯುವಂತಿಲ್ಲ. ಕಟ್ಟಡ ಕಾರ್ಮಿಕರು ದ್ವಿಚಕ್ರ ವಾಹನಗಳ ಮೇಲೆ ಓಡಾಡುವಂಗಿಲ್ಲ. ಕೆಲಸಕ್ಕೆ ತೆರಳು ವಾಹನಕ್ಕೆ ಅನುಮತಿ ನೀಡಲಾಗುತ್ತಿದ್ದು, ಅದರಲ್ಲಿಯೇ ತೆರಳಬೇಕು. ಜಿ.ಪಂ ಸಿಇಓ ಟಿ. ಭೂಬಾಲನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್‌ .ದೇಸಾಯಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next