Advertisement

ಸೋತ ಮಾತ್ರಕ್ಕೆ ಕ್ಷೇತ್ರದಿಂದ ಹೊರಗುಳಿಯಲ್ಲ

12:31 PM May 27, 2018 | |

ಮೈಸೂರು: ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ರಾಜಕೀಯದಿಂದ ನಿವೃತ್ತಿ ಹೊಂದದೆ, ನನಗೆ ಶಕ್ತಿ ಇರುವವರೆಗೂ ರಾಜಕೀಯದಲ್ಲಿ ಉಳಿಯುತ್ತೇನೆ, ಆ ಮೂಲಕ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಳೀಯ ಶಾಸಕರಿಗೆ ಸಹಕಾರ ನೀಡುತ್ತೇನೆ ಎಂದು ಚಾಮರಾಜ ಕ್ಷೇತ್ರದ ಕಾಂಗ್ರೆಸ್‌ ಮಾಜಿ ಶಾಸಕ ವಾಸು ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ. ಸೋಲಿನ ಬಗ್ಗೆ ಯಾವುದೇ ನನಗೆ ಯಾವುದೇ ಬೇಸರವಿಲ್ಲ. ಕಳೆದ ಬಾರಿ ನಾನು ಶಂಕರಲಿಂಗೇಗೌಡರ ವಿರುದ್ಧ ಸ್ಪರ್ಧಿಸಿದ್ದಾಗ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದ್ದರು.

ಈ ಸಂದರ್ಭದಲ್ಲಿ ಎಲ್ಲಾ ವರ್ಗದವರು ಸಹಕಾರ ನೀಡಿದ್ದರಿಂದ ನನಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಯಿತು. ಅಲ್ಲದೆ ನನಗೆ ಕ್ಷೇತ್ರದ ಕೆಲಸ ಮಾತ್ರವೇ ಮುಖ್ಯವಾದ್ದರಿಂದ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಅಥವಾ ಸಭೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಬದಲಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ ಹೆಚ್ಚಿನ ಆದ್ಯತೆ ನೀಡಿ  ಶ್ರಮಿಸಿದ್ದೆ ಎಂದು ತಿಳಿಸಿದರು.

ಒಳ್ಳೆ ಸಹಕಾರ ಸಿಕ್ಕದೆ: ಕ್ಷೇತ್ರದ ಶಾಸಕನಾಗಿ 5 ವರ್ಷದಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. 10 ಸಾವಿರ ಹೆಣ್ಣುಮಕ್ಕಳಿರುವ ರಾಜ್ಯದ ಏಕೈಕ ಕಾಲೇಜು ಎಂದರೆ ಅದು ಮಹಾರಾಣಿ ಕಾಲೇಜು ಮಾತ್ರ. ಮಹಾರಾಣಿ ಕಾಲೇಜಿಗೆ ಸರ್ಕಾರದಿಂದ 270 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ.

ಅಲ್ಲದೆ ಪೀಠೊಪಕರಣಗಳಿಗಾಗಿ 7 ಕೋಟಿ ರೂ.ಗಳನ್ನು ನಮ್ಮ ಸರ್ಕಾರದಲ್ಲಿ ಮಂಜೂರು ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆ ಸಚಿವರು, ಅಧಿಕಾರಿಗಳ ಜತೆಗೆ ವಿರೋಧ ಪಕ್ಷದ ನಾಯಕರಿಂದಲೂ ಸ್ಪಂದನೆ ದೊರೆತಿದೆ. ಇದಕ್ಕಾಗಿ ಕ್ಷೇತ್ರದ ಜನರು, ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

Advertisement

ಅಪಪ್ರಚಾರ ಮಾಡಿದ್ದರು: ಚುನಾವಣೆ ವೇಳೆ ಕೆಲವರು ನಾನು ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಇದ್ದೇನೆ, ಇನ್ನೇನು ಸಾಯುತ್ತಾರೆಂದು ಅಪಪ್ರಚಾರ ಮಾಡಿದ್ದರು. ಈ ವೇಳೆ ಸ್ವತಃ ಮಳೆಯಲ್ಲೇ ಕ್ಷೇತ್ರದ ಪಡುವಾರಳ್ಳಿಗೆ ತೆರಳಿ ಮತಯಾಚನೆ ಮಾಡಿದ್ದೆ. ಆದರೆ ನಾನು ವೆಂಟಿಲೇಟರ್‌ನಲ್ಲಿದ್ದೇನೆ, ಸಾಯುತ್ತೇನೆ ಎಂದವರೇ, ಈಗ ಹೋಗಿ ಬಿಟ್ಟಿದ್ದಾರೆ ಎಂದು ಮಾಜಿ ಶಾಸಕ ವಾಸು ಬೇಸರ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next