Advertisement

Hubli; ಬಿಜೆಪಿ ಮಾತ್ರ ನಿಮ್ಮ ಹಿತ ಕಾಯಲಿದೆ: ಪ್ರಹ್ಲಾದ ಜೋಶಿ

03:54 PM Dec 30, 2023 | Team Udayavani |

ಹುಬ್ಬಳ್ಳಿ: ದೇಶದಲ್ಲಿ ವಂಶವಾದ ಹೊಂದಿರುವವರಿಂದ ಜನರಿಗೆ ಒಳ್ಳೆಯದಾಗಲ್ಲ. ಬಿಜೆಪಿ ಯಾರಿಗೂ ಅನ್ಯಾಯ, ಆತಂಕ ಆಗದಂತೆ ಸಾಮಾಜಿಕ ನ್ಯಾಯ ಒದಗಿಸಲು ಬದ್ಧವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಇಲ್ಲಿನ‌ ದೇಶಪಾಂಡೆ ನಗರದ ಸವಾಯಿ‌ ಗಂಧರ್ವ ಕಲಾ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧಾರವಾಡ ಜಿಲ್ಲಾ ಮಾದಿಗರ ಆತ್ಮಗೌರವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಮಾತ್ರ ನಿಮ್ಮ ಹಿತ ಕಾಯಲಿದೆ. ನೀವು ಆತಂಕಕ್ಕೆ ಒಳಗಾಗಬೇಡಿ, ಕಾಂಗ್ರೆಸ್ ನವರು ಡಾ.ಬಾಬಾ ಸಾಹೇಬ ಅಂಬೇಡ್ಕರ, ಡಾ.ಜಗಜೀವನ ರಾಮರಿಗೆ ಅನ್ಯಾಯ ಮಾಡಿದರು. ಈಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ಅದು‌ ನಾಮಕಾವಾಸ್ಥೆ ಎಂದರು.

ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಖರ್ಗೆ ಪ್ರಧಾನಿ ಆಗಬೇಕೆಂದು ಹೇಳಿದರೆ, ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲರೂ ವಿರೋಧ ಮಾಡುತ್ತಿದ್ದಾರೆ ಎಂದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ಒಳ ಮೀಸಲಾತಿ ಬಗ್ಗೆ ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡುತ್ತಿದೆ. ಎಸ್ ಸಿ, ಎಸ್ ಟಿ ಜನರಿಗೆ ನ್ಯಾಯ ಕೊಡುವ ಬದಲು ಮತ ಬ್ಯಾಂಕ್ ಮಾಡಿಕೊಂಡಿದ್ದಕ್ಕೆ ಸಮಾಜಕ್ಕೆ ಹಿನ್ನೆಡೆಯಾಗಿದೆ ಎಂದರು.

Advertisement

ಯಾರಿಗಾಗಿ ಮೀಸಲಾತಿ ಮಾಡಿದ್ದೇವು ಅವರು ಅರ್ಥ ಮಾಡಿಕೊಳ್ಳಲಿಲ್ಲ. ಹೀಗಾಗಿ ರಾಜ್ಯದಲ್ಲಿ ನಾವು ಸೋತೆವು ಎಂದರು.

ಕಾಂಗ್ರೆಸ್ ನಿಂದ ನಮಗೆ ನ್ಯಾಯ ಸಿಗುವುದಿಲ್ಲ. ದಲಿತರಿಗೆ ಆ ಪಕ್ಷದಲ್ಲಿ ಗೌರವ ಇಲ್ಲ. ಮತ್ತೆ ಮೋಸ ಮಾಡಲು ಮುಂದಾಗಿದ್ದಾರೆ ಅದನ್ನು ನಂಬಬೇಡಿ ಎಂದರು.

ಆದಿ ಜಾಂಬವ ಪೀಠದ ಮುನಿರತ್ನ ಸ್ವಾಮೀಜಿ, ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಇತರರಿದ್ದರು.

ಸಮಾವೇಶದಲ್ಲಿ ಗೊಂದಲ ಸೃಷ್ಟಿ: ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಮಾದಿಗ ಸಮಾಜದವರಿಗೆ ನೀಡಿದ ಆಶ್ವಾಸನೆ ಬಗ್ಗೆ ಪಿಪಿಟಿ ಮೂಲಕ ಪ್ರದರ್ಶಿಸುವಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದಾಗ ಗೊಂದಲವುಂಟಾಗಿ ಒಂದಿಬ್ಬರು ವೇದಿಕೆಯಿಂದ ನಿರ್ಗಮಿಸಿದರು. ಆಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇತರರು ಹೊರಡಲು ಮುಂದಾದರು.

ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಧ್ಯ ಪ್ರವೇಶಿಸಿ ತಿಳಿಗೊಳಿಸಿದರು. ನಂತರ ಕಾರ್ಯಕ್ರಮ ಮುಂದುವರೆಯಿತು.

Advertisement

Udayavani is now on Telegram. Click here to join our channel and stay updated with the latest news.

Next