Advertisement

ಪಟಾಕಿ ಸಿಡಿಸಲು 3 ಗಂಟೆ ಮಾತ್ರ ಅವಕಾಶ

11:08 AM Oct 14, 2017 | Team Udayavani |

ನವದೆಹಲಿ/ಚಂಡೀಗಢ: ನವದೆಹಲಿ  ಪ್ರದೇಶದಲ್ಲಿ ಪಟಾಕಿಗೆ ನಿಷೇಧ ಬೆನ್ನಲ್ಲೇ ಅದಕ್ಕೆ ಪೂರಕವಾಗಿ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌  ಪಂಜಾಬ್‌, ಹರ್ಯಾಣ ಹಾಗೂ ಚಂಡೀಗಢದಲ್ಲಿ ಕೇವಲ 3 ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಅವಕಾಶ ಮಾಡಿಕೊಟ್ಟಿದೆ. ಸಂಜೆ  6.30ರಿಂದ ರಾತ್ರಿ 9.30ರ ವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. 

Advertisement

ಎರಡೂ ರಾಜ್ಯಗಳ ಜಿಲ್ಲಾಧಿಕಾರಿಗಳು, ನಗರ ಪೊಲೀಸ್‌  ಆಯುಕ್ತರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ನ್ಯಾ.ಎ.ಕೆ.ಮಿತ್ತಲ್‌ ಮತ್ತು ನ್ಯಾ.ಅಮಿತ್‌ ರಾವತ್‌ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ. ಪಟಾಕಿ ಸಿಡಿಸುವುದರಿಂದ  ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ ಎಂಬ ಅಂಶದ ಬಗ್ಗೆ ವ್ಯಾಪಾರಸ್ಥರ ವತಿಯಿಂದ ಪ್ರತಿಕ್ರಿಯೆಯನ್ನೂ  ಕೋರ್ಟ್‌ ಬಯಸಿದೆ. 

ಧ್ವನಿವರ್ಧಕ ನಿಷೇಧಕ್ಕೆ ಅರ್ಜಿ: ಮತ್ತೂಂದು ಬೆಳವಣಿಗೆಯಲ್ಲಿ ದೆಹಲಿ ಹೈಕೋರ್ಟ್‌ ನವದೆಹಲಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಧಾರ್ಮಿಕ ಕೇಂದ್ರಗಳ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರುವ ಕುರಿತು ಪ್ರತಿಕ್ರಿಯೆ ಕೋರಿ ಕೇಂದ್ರ, ದೆಹಲಿ ಸರ್ಕಾರಗಳಿಗೆ ನೋಟಿಸ್‌ ಜಾರಿ  ಮಾಡಿದೆ. ಜ.29ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next