Advertisement

23 ಸಾವಿರ ಜನರಿಗೆ 2 ಘಟಕಗಳಷ್ಟೇ ಕಾರ್ಯನಿರ್ವಹಣೆ

09:34 PM Jan 01, 2020 | Team Udayavani |

ಚಿಕ್ಕನಾಯಕನಹಳ್ಳಿ: ಸರ್ಕಾರದ ಜನರಿಗೆ ಶುದ್ಧ ನೀರು ಕೊಡುವ ಸಲುವಾಗಿ ಶುದ್ದ ಕುಡಿಯುವ ನೀರು ಘಟಕ ಸ್ಥಾಪಿಸಿದ್ದರೂ ಜನರಿಗೆ ಸಹಾಯವಾಗುತ್ತಿಲ್ಲ. ಪಟ್ಟಣದಲ್ಲಿನ 23 ಸಾವಿರ ಜನರಿಗೆ ಪಟ್ಟಣದಲ್ಲಿ ಐದು ಘಟಕಗಳಿದ್ದು, 2 ಘಟಕಗಳಲ್ಲಷ್ಟೇ ನೀರು ದೊರೆಯುತ್ತಿದೆ.

Advertisement

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಸಂಸದರ ಅನುದಾನದಲ್ಲಿ ಘಟಕ ಸ್ಥಾಪನೆಯಾಗಿದ್ದು, ಇವೆರಡು ಕೆಟ್ಟು ತಿಂಗಳು ಕಳೆದಿದ್ದರೂ ಸಂಬಂಧಪಟ್ಟವರು ಗಮನ ಹರಿಸಿಲ್ಲ. ಖಾಸಗಿಯವರು ನಡೆಸುತ್ತಿರುವ 2 ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಆರ್‌ಡಿಎಲ್‌ ಸಂಸ್ಥೆಯಡಿರುವ 3 ಘಟಕಗಳು ಕೈಕೊಟ್ಟಿವೆ.

ಪುರಸಭೆ ಹಿಂಭಾಗದ ಪಂಪ್‌ಹೌಸ್‌ ಬಳಿ ಇರುವ ಘಟಕ ದುರಸ್ತಿಗೆ 2ರಿಂದ 3 ಲಕ್ಷ ರೂ. ಖರ್ಚು ಮಾಡಿದ್ದರೂ ಪ್ರಯೋಜನವಾಗಿಲ್ಲ. ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪಟ್ಟಣದಲ್ಲಿ 23 ವಾರ್ಡ್‌ಗಳ ಪೈಕಿ 23 ಸಾವಿರ ಜನ ವಾಸವಾಗಿದ್ದು, ಎರಡು ಘಟಕಗಳಷ್ಟೇ ಕಾರ್ಯನಿರ್ವಹಿಸುತ್ತಿದೆ.

ಪ್ರತಿದಿನ 5ರಿಂದ 8 ಸಾವಿರ ಲೀಟರ್‌ ಶುದ್ಧ ನೀರು ಒದಗಿಸುತ್ತದೆ. ಅಂಕಿ ಅಂಶಗಳ ಪ್ರಕಾರ ಒಬ್ಬ ಮನುಷ್ಯನಿಗೆ ಪ್ರತಿ ದಿನ ಕನಿಷ್ಠ 4ರಿಂದ 5 ಲೀಟರ್‌ ನೀರು ಪೂರೈಸುವುದು ಪುರಸಭೆ ಉದ್ದೇಶ. ಪಟ್ಟಣದಲ್ಲಿ 2ರಿಂದ 3 ಸಾವಿರ ಜನರಷ್ಟೇ ಶುದ್ಧ ನೀರು ಉಪಯೋಗಿಸುತ್ತಿದ್ದಾರೆ.

ತಾಲೂಕಿನಲ್ಲಿ 126 ಘಟಕಗಳು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸುಮಾರು 126 ಘಟಕಗಳು ಸ್ಥಾಪನೆಯಾಗಿದ್ದು. ಇವುಗಳಲ್ಲಿ 30 ಘಟಕಗಳು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿವೆ. ಇನ್ನೂ 4 ಘಟಕಗಳಿಗೆ ನೀರಿನ ಸೌಲಭ್ಯವಿಲ್ಲದೆ ಕಾರ್ಯನಿರ್ವಹಿಸುತ್ತಿಲ್ಲ.

Advertisement

ತಾಲೂಕಿನಲ್ಲಿ 126 ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸಣ್ಣ ಪುಟ್ಟ ತಾಂತ್ರಿಕ ದೋಷ ಬಂದರೂ ಶೀಘ್ರ ರಿಪೇರಿ ಮಾಡಿಸಲಾಗುತ್ತದೆ. ಸರಿಯಾದ ನಿರ್ವಹಣೆ ಮಾಡದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತಿದೆ. ಕೆಲ ಕಡೆ ಘಟಕಗಳ ಕಾಮಗಾರಿ ನಡೆಯುತ್ತಿದೆ.
-ವಿರೂಪಾಕ್ಷ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಕೆಲ ಕಂಪನಿಗಳಿಂದ ನಿರ್ಮಾಣವಾಗಿರುವ ಶುದ್ಧ ನೀರಿನ ಘಟಕಗಳು ಸರಿಯಾಗಿ ನೀರು ಒದಗಿಸುತ್ತಿಲ್ಲ. ಕಂಪನಿಯವರೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ವಿದ್ಯುತ್‌ ಬಿಲ್‌ ಪಾವತಿಸಿಲ್ಲ ಎಂಬ ಕಾರಣಕ್ಕೆ ಕೆಇಬಿಯವರು ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತಾರೆ. ಸಂಬಂಧಪಟ್ಟ ಕಂಪನಿಗಳು ಇಂತಹ ಸಮಸ್ಯೆ ಪರಿಹರಿಸಬೇಕು.
-ಹನುಮಜಯಾ, ಗ್ರಾಪಂ ಸದಸ್ಯ

* ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next