ಹೊಸದಿಲ್ಲಿ: ಪ್ರಾದೇಶಿಕ ಭಾಷಾ ಶಿಕ್ಷಣಕ್ಕೆ ಕೇಂದ್ರ ಸರಕಾರ ನೀಡುತ್ತಿರುವ ಆದ್ಯತೆಯು ಉತ್ತಮ ಫಲಿತಾಂಶವನ್ನು ನೀಡಿದೆ. ಈ ಬಾರಿಯ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಯಲ್ಲಿ ಅನೇಕ ಅಭ್ಯರ್ಥಿಗಳು ಪ್ರಾದೇಶಿಕ ಭಾಷೆಗಳನ್ನು ಆಯ್ದುಕೊಂಡಿದ್ದಾರೆ. ಆದರೆ ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಪರೀಕ್ಷೆ ಬರೆದವರ ಸಂಖ್ಯೆ ಬಹಳ ಕಡಿಮೆ.
ಕೇವಲ 1,193 ಅಭ್ಯರ್ಥಿಗಳಷ್ಟೇ ಕನ್ನಡದಲ್ಲಿ ನೀಟ್ ಪರೀಕ್ಷೆ ಬರೆದಿದ್ದಾರೆ. ಇಂಗ್ಲಿಷ್, ಹಿಂದಿ ಹೊರತುಪಡಿಸಿದರೆ ಗುಜರಾತಿ ಭಾಷೆಯನ್ನು ಬಹಳಷ್ಟು ಮಂದಿ ಆಯ್ಕೆ ಮಾಡಿಕೊಂಡಿದ್ದಾರೆ. ಒಟ್ಟು 49,638 ಅಭ್ಯರ್ಥಿಗಳು ಗುಜರಾತಿ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದರೆ, ಬಂಗಾಲಿ ಭಾಷೆಯಲ್ಲಿ 42,663 ಮಂದಿ, ತಮಿಳಿನಲ್ಲಿ 31,965 ಮಂದಿ ಬರೆದಿದ್ದಾರೆ.
ಕನ್ನಡ ಸಹಿತ 13 ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಸಂಖ್ಯೆ ಗಣ ನೀಯವಾಗಿ ಹೆಚ್ಚಿದೆ. ಈ ಬಾರಿ ನೀಟ್‌ಗೆ ಒಟ್ಟಾರೆ ದಾಖಲೆಯ 18.7 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,37,492 ಅಭ್ಯರ್ಥಿಗಳು ಪ್ರಾದೇಶಿಕ ಭಾಷೆ ಯಲ್ಲೇ ಪರೀಕ್ಷೆ ಬರೆದಿದ್ದಾರೆ. 2021ರಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆದವರ ಸಂಖ್ಯೆ 1,20,616 ಆಗಿತ್ತು. ಇದೇ ವೇಳೆ, ಈ ಬಾರಿ 1.47 ಲಕ್ಷ ಮಂದಿ ಇಂಗ್ಲಿಷ್‌ನಲ್ಲಿ, 2.58 ಲಕ್ಷ ಮಂದಿ ಹಿಂದಿಯಲ್ಲಿ ಪರೀಕ್ಷೆ ಬರೆದಿದ್ದಾರೆ.
18.7 ಲಕ್ಷ : ನೀಟ್‌ಗೆ ನೋಂದಣಿ ಮಾಡಿ ಕೊಂಡ ವರ ಸಂಖ್ಯೆ
ಭಾಷೆ / ಪರೀಕ್ಷೆ ಬರೆದವರು
ಪ್ರಾದೇಶಿಕ/ 1,37,492
ಆಂಗ್ಲ / 14,76,024
ಹಿಂದಿ / 2,58,827
ಗುಜರಾತಿ/ 49,638
ಬಂಗಾಲಿ/ 42,663
ತಮಿಳು/ 31965
ಮರಾಠಿ / 2,368
ಉರ್ದು / 1910
ಕನ್ನಡ / 1,193