Advertisement
ಹೌದು. ಬಿಟ್ಟುಬಿಡದೆ ಕಾಡುತ್ತಿರುವ ಮಹಾಮಾರಿ ಕೋವಿಡ್ ವೈರಸ್‌ನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ 5.0 ನಡುವೆ ಅತೀ ಮುಖ್ಯವಾಗಿ ಕಾಪಾಡಿಕೊಳ್ಳಲೇ ಬೇಕಾಗಿರುವ ಸಾಮಾಜಿಕ ಅಂತರ ಹಾಗೂ ಕೆಲವಾರು ಕಟ್ಟುನಿಟ್ಟಿನ ಮಾರ್ಗಸೂಚಿ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಯೋಗ ದಿನದ ಆಚರಣೆ ನಡೆಸುವ ಆಲೋಚನೆ ಇದೆ.
Related Articles
Advertisement
ಆದರೆ, ಕೋವಿಡ್ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಅವು ಯಾವುದಕ್ಕೂ ಅವಕಾಶವೇ ಇಲ್ಲ. ಆದರೂ, ಯಾವುದೇ ಕಾರಣಕ್ಕೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಲ್ಲಬಾರದು. ನಿರಂತರವಾಗಿ ನಡೆಯುವಂತೆ ಆಗಬೇಕು ಎಂದು ಆನ್‌ಲೈನ್ ಮೂಲಕ ಯೋಗ ದಿನ ಆಚರಿಸುವ ಚಿಂತನೆ ನಡೆಸಲಾಗಿದೆ. ಮೋತಿ ವೀರಪ್ಪ ಕಾಲೇಜು ಮೈದಾನ ಇಲ್ಲವೇ ಬೇರೆಡೆ ಪ್ರಮುಖರು ನಡೆಸಿಕೊಡುವಂತಹ ಯೋಗ ಪ್ರದರ್ಶನವನ್ನ ಸ್ಥಳೀಯ ವಾಹಿನಿ ಒಳಗೊಂಡಂತೆ ಇತರೆ ಸೌಲಭ್ಯಗಳ ಮೂಲಕ ನೇರ ಪ್ರಸಾರ ಮಾಡುವ ಆಲೋಚನೆ ಇದೆ. ಯೋಗ ಒಕ್ಕೂಟದ ಎಲ್ಲಾ ಪ್ರಮುಖರು, ಜಿಲ್ಲಾಡಳಿತ, ಇತರೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಬೇಕಾಗಿದೆ ಎನ್ನುತ್ತಾರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ವಾಸುದೇವ ರಾಯ್ಕರ್.
ನಮ್ಮ ಅತ್ಯಮೂಲ್ಯ ಕೊಡುಗೆಯಾದ ಯೋಗಕ್ಕೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ. ಹಾಗಾಗಿಯೇ ಪ್ರತಿ ವರ್ಷ ಜೂ. 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಜಾರಿಗೆ ಬಂದಿದೆ. ಕೊರೊನಾ ವೈರಸ್ ಹಿಮ್ಮೆಟ್ಟಿಸಲು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಯೋಗವನ್ನೂ ಜನರ ಇನ್ನೂ ಹತ್ತಿರಕ್ಕೆ ತೆಗೆದುಕೊಂಡು ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ವಾಸುದೇವ ರಾಯ್ಕರ್ ಹೇಳುತ್ತಾರೆ.
ಕೋವಿಡ್ ವೈರಸ್ ಹಾವಳಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಬಾರಿಯ ಯೋಗದಿನವನ್ನ ಆನ್‌ಲೈನ್ ಮೂಲಕ, ನೇರ ಪ್ರಸಾರ ಮಾಡುವ ಚಿಂತನೆ ಇನ್ನೂ ಪ್ರಾಥಮಿಕ ಹಂತ. ಕೇಂದ್ರದ ಆಯುಷ್ ಇಲಾಖೆ ಒಳಗೊಂಡಂತೆ ಯಾವುದೇ ಇಲಾಖೆಯಿಂದ ಅಧಿಕೃತ. ಮಾಹಿತಿ ಯಾಗಲಿ, ಆದೇಶವಾಗಲಿ ಬಂದಿಲ್ಲ. ಸರ್ಕಾರದ ಮುಂದಿನ ಆದೇಶದ ಅನ್ವಯವೇ ಯೋಗ ದಿನಾಚರಣೆ ನಿರ್ಧರಿತವಾಗಲಿದೆ ಎಂದು ವಾಸುದೇವ ರಾಯ್ಕರ್ ಅವರು ತಿಳಿಸುತ್ತಾರೆ.
ಮಾರ್ಗಸೂಚಿ ಆದೇಶ ಬಂದಿಲ್ಲ : ಈ ಬಾರಿಯ 6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಬಂಧ ಕೇಂದ್ರ, ರಾಜ್ಯ ಸರ್ಕಾರದ ಆಯುಷ್ ನಿರ್ದೇಶನಾಲಯದಿಂದ ಯಾವುದೇ ಮಾರ್ಗಸೂಚಿ, ಆದೇಶ ಬಂದಿಲ್ಲ. ಮಾರ್ಗಸೂಚಿ, ಆದೇಶ ಅನ್ವಯವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ| ಶಂಕರಗೌಡ ತಿಳಿಸಿದರು.
-ರಾ. ರವಿಬಾಬು