Advertisement

ಸಮಗ್ರ ಅಭಿವೃದ್ಧಿ ಯೋಜನೆಗೆ ಆನ್‌ಲೈನ್‌ ಪೋರ್ಟಲ್‌ ಆರಂಭ

01:17 AM Jan 24, 2019 | |

ಬೆಂಗಳೂರು: ಕರ್ನಾಟಕ ಪಬ್ಲಿಕ್‌ ಶಾಲೆಯ ಸಮಗ್ರ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆನ್‌ಲೈನ್‌ ಪೋರ್ಟಲ್‌ ಆರಂಭಿಸಿದೆ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಆರಂಭಿಸಿರುವ ತಾಲೂಕುಗಳ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಪೋರ್ಟಲ್‌ ಬಳಸಿ ಮಾಹಿತಿ ಭರ್ತಿ ಮಾಡಲು ನಿರ್ದೇಶಿಸಲಾಗಿದೆ.

Advertisement

1ರಿಂದ 12ನೇ ತರಗತಿಗಳನ್ನು ಆಡಳಿತ ಮತ್ತು ಶೈಕ್ಷಣಿಕವಾಗಿ ಅತ್ಯಂತ ಉತ್ತಮವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ 10 ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸಮಗ್ರ ಅಭಿವೃದ್ಧಿ ಯೋಜನೆಯನ್ನು ಪೋರ್ಟಲ್‌ ಮೂಲಕ ಸಿದ್ಧಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

ಶಾಲೆ ಬಗೆಗಿನ ಮಾಹಿತಿ, ವಿದ್ಯಾರ್ಥಿಗಳ ಮಾಹಿತಿ, ಮೂಲಭೂತ ಸೌಕರ್ಯಗಳು, ಶಾಲಾ ಆವರಣ, ಕಲಿಕಾ ಸಂಪನ್ಮೂಲ, ಶಾಲಾ ನಾಯಕತ್ವ ಮತ್ತು ಆಡಳಿತಾತ್ಮಕ ನಿರ್ವಹಣೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾಹಿತಿ, ಶಿಕ್ಷಕರ ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿ, ಕಲಿಕಾ ಮೌಲ್ಯಮಾಪನ ಹಾಗೂ ಬಜೆಟ್ನ್ನು ಆನ್‌ಲೈನ್‌ ಮೂಲಕವೇ ನಮೂದಿಸಬೇಕು. ಒಂದೊಂದು ವಿಷಯ ಮೇಲೆ ಕ್ಲಿಕ್‌ ಮಾಡಿದಾಗ ಉಪ ವಿಷಯ ತೆರೆದುಕೊಳ್ಳುತ್ತದೆ. ಅದನ್ನು ಭರ್ತಿ ಮಾಡಿ, ಸೇವ್‌ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಯನ್ನು ಉತ್ಕೃಷ್ಟತೆಯ ಕೇಂದ್ರಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಾಸ್ಟರ್‌ ಪ್ಲ್ರಾನ್‌ ಸಿದ್ಧಪಡಿಸಬೇಕು. ಆದಷ್ಟು ಬೇಗ ಅದರ ಹಾರ್ಡ್‌ ಪ್ರತಿಯನ್ನು ಬೆಂಗಳೂರು ಕಚೇರಿಗೆ ತಲುಪಿಸಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next