Advertisement

ಆನ್ಲೈನ್‌ ಮೂಲಕ ವಂಚನೆ: ಆರೋಪಿ ಸೆರೆ

02:19 PM Jun 11, 2022 | Team Udayavani |

ಮೈಸೂರು: ಲೋಕ್ಯಾಂಟೋ ಡೇಟಿಂಗ್‌ ಎಂಬ ಆ್ಯಪ್‌ ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದ ಆರೋಪಿಯನ್ನು ಮೈಸೂರಿನ ಸೆನ್‌ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Advertisement

ಆನ್ಲೈನ್‌ನಲ್ಲಿ ಲೋಕ್ಯಾಂಟೋ ಡೇಟಿಂಗ್‌ ಮೂಲಕ ಜಾಹೀರಾತು ಹಾಕಿ, ಗ್ರಾಹಕರಿಗೆ ಸ್ಪಾ ಸೇವೆ ನೀಡುವುದಾಗಿ ನಂಬಿಸಿ ಆನ್ಲೈನ್‌ ನಗದು ವರ್ಗಾವಣೆ ಮೂಲಕ ವಿವಿಧ ಹಂತಗಳಲ್ಲಿ ಒಟ್ಟು 3 ಸಾವಿರ ರೂ. ಪಡೆದು ಮೋಸ ಮಾಡಿರುವುದಾಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಸೆನ್‌ ಕ್ರೈಂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಲ್ಯಾಪ್‌ಟಾಪ್‌ ಹಾಗೂ 4 ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಲೋಕ್ಯಾಂಟೋ ಡೇಟಿಂಗ್‌ ಆ್ಯಪ್‌ ನಲ್ಲಿ ಆ್ಯಡ್‌ ಮೂಲಕ ಸುಂದರವಾದ ಹುಡುಗಿಯರ ಫೋಟೋ ಹಾಕಿ, ಸಿಂಗಲ್‌ ಹುಡುಗಿಯರು ಇದ್ದಾರೆ ಮತ್ತು ಕಾಲೇಜು ಹುಡುಗಿಯರ ನಗ್ನ ವಿಡಿಯೋ ಕಾಲ್‌ ಸರ್ವಿಸ್‌ ಇದೆ ಹಾಗೂ ಹುಡುಗಿಯರೇ ನೇರವಾಗಿ ಮೀಟ್‌ ಮಾಡುತ್ತಾರೆ ಎಂಬುದಾಗಿ ಆ್ಯಡ್‌ ಹಾಕಿ ಕಸ್ಟಮರ್‌ಗೆ ಸರ್ವಿಸ್‌ ನೀಡುವ ಮೊದಲು ಶೇ.50 ಪಾವತಿಸಬೇಕೆಂದು ಕೇಳಿ, ಆನ್‌ ಲೈನ್‌ ಪೇಮೆಂಟ್‌ ಮೂಲಕ ತನ್ನ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದನು. ಇದುವರೆಗೆ 80- 100 ಜನರಿಂದ ಅಂದಾಜು ಸುಮಾರು 8 ಲಕ್ಷ ರೂ. ವರೆಗೆ ಹಣ ಪಡೆದು ವಂಚಿಸಿರುವ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ.

ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಪ್ರದೀಪ್‌ ಗುಂಟಿ, ದೇವರಾಜ ವಿಭಾಗದ ಎಸಿಪಿ ಎಂ.ಎನ್‌. ಶಶಿಧರ್‌ ಅವರ ಮಾರ್ಗದರ್ಶನದಲ್ಲಿ ಸೆನ್‌ ಕ್ರೈಂ ಠಾಣೆಯ ಇನ್ಸ್‌ ಪೆಕ್ಟರ್‌ ಎನ್‌. ಜಯಕುಮಾರ್‌, ಎಸ್‌ಐ ಸಿದ್ದೇಶ್‌ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next