Advertisement

ಆನ್‌ಲೈನ್‌ ಶಿಕಣ: ಶಿಕ್ಷಕರಿಗೆ ಮಾರ್ಗಸೂಚಿ

12:06 PM Aug 23, 2020 | Suhan S |

ಮುಂಬಯಿ, ಆ. 21: ಮುಂಬಯಿ ಮನಪಾ ಶಿಕ್ಷಣ ವಿಭಾಗವು ಆನ್‌ ಲೈನ್‌ ತರಗತಿ ಕುರಿತಂತೆ ಶಿಕ್ಷಕರಿಗೆ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದು, ಸ್ಪಷ್ಟವಾಗಿ ಮಾತನಾಡಲು, ಸಂಯುಕ್ತ ಮತ್ತು ಸಂಕೀರ್ಣ ವಾಕ್ಯಗಳನ್ನು ತಪ್ಪಿಸಲು ಮತ್ತು ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಬೇಕು ಎಂದು ತಿಳಿಸಿದೆ.

Advertisement

ಕೋವಿಡ್ ಹಿನ್ನೆಲೆ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ಮಾತ್ರ ನಡೆಸುತ್ತಿರುವುದರಿಂದ ಬೋಧನೆ ಗುಣಮಟ್ಟವನ್ನು ಸುಧಾರಿಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕರು ಮಹಾರಾಷ್ಟ್ರ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ಪಠ್ಯಕ್ರಮ ಹಾಗೂ ರಾಜ್ಯ ಶಿಕ್ಷಣ ಇಲಾಖೆಯ ಪಾಠ್ಯ ಯೋಜನೆ ಅನುಸರಿಸುವಂತೆ ಹೇಳಿದೆ. ಕಲಿಕೆಯಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಹಿಂದಿನ ತರಗತಿಗಳಲ್ಲಿ ಕಲಿಸಿದ ವಿಷಯಗಳ ಹಿನ್ನೆಲೆಯ ಮೇಲೆ ಕೇಂದ್ರೀಕರಿಸಲು ಶಿಕ್ಷಕರಿಗೆ ಹೇಳಿದೆ.

ಆರಂಭದಲ್ಲಿ ಅಣಕು ತರಗತಿಗಳನ್ನು ನಡೆಸಬೇಕು ಮತ್ತು ಪಾಠಗಳನ್ನು ಹೆಚ್ಚು ಆಸಕ್ತಿಕರಗೊಳಿಸಲು ಪವರ್‌ ಪಾಯಿಂಟ್‌, ಆನಿಮೇಷನ್‌, ವೀಡಿಯೋ ತುಣುಕುಗಳು ಮುಂತಾದ ಸಂವಾದಾತ್ಮಕ ಸಾಧನಗಳನ್ನು ಬಳಸಲು ಪ್ರಯತ್ನಿಸಬೇಕು. ಮಾತನಾಡುವಾಗ ಅವರು ಸರಿಯಾದ ಧ್ವನಿ, ಆಶ್ಚರ್ಯ, ವಿರಾಮ ಮತ್ತು ವಿಚಾರಣೆಯನ್ನು ಬಳಸಬೇಕು ಎಂದು ಮಾರ್ಗ ಸೂಚಿಯಲ್ಲಿ ಕಟ್ಟುನಿಟ್ಟಾಗಿ ತಿಳಿಸಿವೆ.

ತರಗತಿಗಳು ನಡೆಯುತ್ತಿರುವಾಗ ಯಾವುದೇ ನೆಟ್‌ವರ್ಕ್‌ ಸಮಸ್ಯೆಗಳು ಅಥವಾ ಗೊಂದಲಗಳು ಇಲ್ಲ ಎಂದು ಶಿಕ್ಷಕರು ಖಚಿತಪಡಿಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಹೇಳಿವೆ. ಶಿಕ್ಷಕರಿಗೆ ಸಹಾಯ ಮಾಡಲು ಕೆಲವು ಮಾರ್ಗಸೂಚಿಗಳ ಅಗತ್ಯವಿದೆ ಎಂದು ಬಿಎಂಸಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ. ಆನ್‌ಲೈನ್‌ ಕಲಿಕೆ ಎಂದರೆ ಅದು ಏಕಮುಖ ಪ್ರಕ್ರಿಯೆ ಎಂದಲ್ಲ. ಈ ಪ್ರಕ್ರಿಯೆಯನ್ನು ಸುಲಭ ಮತ್ತು ವಿದ್ಯಾರ್ಥಿ ಸ್ನೇಹಿಯನ್ನಾಗಿ ಮಾಡಲು ಬಿಎಂಸಿ ಪ್ರಯತ್ನಿಸುತ್ತಿರುವುದು ಒಳ್ಳೆಯ ವಿಷಯ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next