Advertisement

ಆನ್‌ಲೈನ್‌ ಶಿಕ್ಷಣ; ಮಕ್ಕಳಮೇಲೆ ನಿರಂತರ ನಿಗಾ ಇಡಿ

04:46 PM Jul 03, 2021 | Team Udayavani |

ಬಾಗಲಕೋಟೆ: ಶಿಕ್ಷಕರು ಶಾಲೆಯಲ್ಲಿ ಮಕ್ಕಳನ್ನು ಹಂಚಿಕೊಂಡು ಶಿಕ್ಷಣ ನೀಡಲು ಲಿಂಕ್‌ ನಲ್ಲಿರಬೇಕು. ಟೀಚ್‌ ಮೆಂಟ್‌ ಆ್ಯಪ್‌ ಅಥವಾ ಚಂದನ ವಾಹಿನಿ ಮೂಲಕ ಪಾಠ ಕೇಳಲು ಹಾಜರಾಗಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಮೇಲ್ವಿಚಾರಣೆ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌.ಬಿರಾದಾರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಅಗಸ್ತ ಕೋರ್‌ ವಿಜ್ಞಾನ ಕೇಂದ್ರದಲ್ಲಿ ಇಳಕಲ್‌ ಡೈಟ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬಾದಾಮಿ, ಬಾಗಲಕೋಟೆ, ಹುನಗುಂದ ತಾಲೂಕಿನ ಮೇಲ್ವಿಚಾರಣಾ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸೇತುಬಂಧ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಟ್ಟಂತಹ ಗುರಿ ತಲುಪಲು ಪ್ರಯತ್ನಿಸಬೇಕು. ಪ್ರತಿಯೊಂದು ಶಾಲೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿರಬೇಕು. ಪ್ರತಿಯೊಬ್ಬ ಶಿಕ್ಷಕರು ಭಾಗವಹಿಸಬೇಕು. ಶಾಲೆಯಲ್ಲಿ ದಾಖಲಾದ ಪ್ರತಿ ಮಗುವಿನ ಚೈಲ್ಡ್‌ ಪ್ರೊಫೈಲ್‌ ಮಾಡಬೇಕು ಎಂದು ಹೇಳಿದರು. ಉಪನಿರ್ದೇಶಕರ (ಅಭಿವೃದ್ಧಿ) ಡೈಟ್‌ ಪ್ರಾಚಾರ್ಯ ಬಿ.ಕೆ.ನಂದನೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಲಾಕ್‌ಡೌನ್‌ ಅವಧಿಯಲ್ಲಿ ಕಳೆದ ತಿಂಗಳು ಜಿಲ್ಲೆಯ 7500 ಜನ ಶಿಕ್ಷಕರಿಗೆ ಆನ್‌ಲೈನ್‌ ತರಬೇತಿ, ಟೀಚ್‌ ಮೆಂಟ್‌ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನಿರಂತರ ತರಬೇತಿ ನೀಡಲಾಗುತ್ತಿದೆ. ನಿಗದಿತ ಸಾಮರ್ಥಯ ಗಳಿಸಲು ಮಕ್ಕಳಿಗೆ ಸೇತುಬಂಧವನ್ನು ಆನ್‌ಲೈನ್‌-ಆಫ್‌ಲೈನ್‌ ಮೂಲಕ ಮಾಡಬಹುದು. ಯುಧ್ದೋಪಾದಿಯಲ್ಲಿ ಮಕ್ಕಳಿಗೆ ಕಲಿಕೆ ಮಾಡಬೇಕಾಗಿದೆ ಎಂದರು.

ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ(ಗುಣಮಟ್ಟ) ಜಾಸ್ಮಿನ್‌ ಕಿಲ್ಲೆದಾರ ಮಾತನಾಡಿ, ಸೇತುಬಂಧ ಮೂಲಕ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಶಿಕ್ಷಕರು ಮಾಡಬೇಕು. ಸಿಆರ್‌ಪಿಗಳು ಮೇಲ್ವಿಚಾರಣೆ ಮಾಡಬೇಕಿದೆ ಎಂದರು. ಇನ್ನೋರ್ವ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಸಿ.ಆರ್‌.ಓಣಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಹಿರೇಮಠ, ಬೆಳ್ಳೆನ್ನವರ, ಎಚ್‌.ಜಿ. ಮಿರ್ಜಿ, ಎಂ.ಪಿ.ಮಾಗಿ ಹಾಜರಿದ್ದರು. ಎಸ್‌.ಬಿ.ಪಾಟೀಲ ಸ್ವಾಗತಿಸಿದರು. ಎಚ್‌.ಕೆ.ಗುಡೂರ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್‌.ಕಲಗುಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next