Advertisement

ಇಂದಿನಿಂದ ದ್ವಿ. ಪಿಯು ಆನ್‌ಲೈನ್‌ ತರಗತಿ : ಜು. 20ಕ್ಕೆ ಪಿಯು ಫ‌ಲಿತಾಂಶ ?

03:21 AM Jul 15, 2021 | Team Udayavani |

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ತರಗತಿಗಳು ಆನ್‌ಲೈನ್‌ ಮೂಲಕ ಜು. 15ರಿಂದ ಆರಂಭವಾಗಲಿವೆ. ಸುಮಾರು 5 ತಿಂಗಳ ರಜೆಯ ಬಳಿಕ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲಿದ್ದಾರೆ.

Advertisement

2020-21ನೇ ಸಾಲಿನ ದ್ವಿ. ಪಿಯುಸಿ ಫ‌ಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ. ಪ್ರಸಕ್ತ ಸಾಲಿನ ಭೌತಿಕ ತರಗತಿಗಳ ಬಗ್ಗೆ ಸರಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದರಿಂದ ಆನ್‌ಲೈನ್‌ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಬೇಕು ಎಂದು ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.

ಆನ್‌ಲೈನ್‌ ಪಾಠ
ಈ ಬಾರಿ ಆಯಾ ಕಾಲೇಜುಗಳ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಎಂ.ಎಸ್‌. ಟೀಮ್‌, ಗೂಗಲ್‌ ಮೀಟ್‌, ಝೂಮ್‌ ಆ್ಯಪ್‌ ಅಥವಾ ಜಿಯೋ ಮೀಟ್‌ ಗಳನ್ನು ಉಪಯೋಗಿಸಿಕೊಂಡು ಪಾಠ ಆರಂಭಿಸಬೇಕು. ಆಯಾ ಕಾಲೇಜಿನ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಂತೆ ವೇಳಾಪಟ್ಟಿ ತಯಾರಿಸುವಂತೆ ನಿರ್ದೇಶನ ನೀಡಿದೆ.

ವೇಳಾಪಟ್ಟಿ
ಬೆಳಗ್ಗೆ 10ಕ್ಕೆ ತರಗತಿ ಆರಂಭಿಸಿ 11 ಗಂಟೆ ತನಕ ಮೊದಲ ಅವಧಿ, 11ರಿಂದ 12ರ ವರೆಗೆ ಎರಡನೇ ಅವಧಿ ಅನಂತರ ಅರ್ಧಗಂಟೆ ವಿರಾಮ, ಮಧ್ಯಾಹ್ನ 12.30ರಿಂದ 2.30ರ ವರೆಗೆ ತಲಾ ಒಂದು ಗಂಟೆಯ ಎರಡು ಅವಧಿ ನಡೆಸಲು ತಿಳಿಸಿದೆ.

ಜು. 20ಕ್ಕೆ ಪಿಯು ಫ‌ಲಿತಾಂಶ ?
ಮುಂದಿನ ವಾರದಲ್ಲಿ ದ್ವಿತೀಯ ಪಿಯುಸಿ ಫ‌ಲಿತಾಂಶ ಪ್ರಕಟವಾಗಲಿರುವುದರಿಂದ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಸೇರಿದಂತೆ ಶೈಕ್ಷಣಿಕ ಚಟುವಟಿಕೆ ಇನ್ನಷ್ಟು ಚುರುಕುಗೊಳ್ಳಲಿವೆ. ಜುಲೈ 20ರಂದು ದ್ವಿತೀಯ ಪಿಯುಸಿ ಫ‌ಲಿತಾಂಶ ಪ್ರಕಟಿಸುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next