Advertisement

PUC Result; ಅವಳಿ ಜವಳಿಗೆ ಪಿಸಿಎಂಸಿಯಲ್ಲಿ ಅವಳಿ ಅಂಕ ವ್ಯತ್ಯಾಸ!

06:23 PM Apr 10, 2024 | Team Udayavani |

ಸಾಗರ: ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಅವಳಿ ಜವಳಿ ಹೆಣ್ಣು ಮಕ್ಕಳಿಬ್ಬರು ಈ ಬಾರಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಪಿಸಿಎಂಸಿ ವಿಷಯದಲ್ಲಿ ಅವಳಿ ಅಂಕಗಳ ವ್ಯತ್ಯಾಸದೊಂದಿಗೆ ಉತ್ತಮ ಸಾಧನೆ ಮಾಡಿರುವ ಫಲಿತಾಂಶ ಬುಧವಾರ ಲಭ್ಯವಾಗಿದೆ.

Advertisement

ನಗರದ ಹವ್ಯಕ ಹಾಸ್ಟೆಲ್‌ನ ನಿವಾಸಿಗಳಾಗಿ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಮುಕ್ತ ವಿ. ಹೆಬ್ಬಾರ್ ಒಟ್ಟು 570 ಅಂಕ ಗಳಿಸಿ ಡಿಸ್ಟಿಂಗ್ಶನ್‌ನಲ್ಲಿ ಉತ್ತೀರ್ಣಳಾಗಿದ್ದರೆ, ಇನ್ನೋರ್ವ ಸಹೋದರಿ ಮಾನ್ಯ ವಿ. ಹೆಬ್ಬಾರ್ 565 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.

ಎಸ್‌ಎಸ್‌ಎಲ್‌ಸಿ ಸೇರಿದಂತೆ ಈ ಇಬ್ಬರು ಅವಳಿ ಜವಳಿಗಳು ಪರೀಕ್ಷೆಗಳಲ್ಲಿಯೂ ಸಮಾನ ಅಂಕ ಪಡೆಯವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಬಾರಿ ಕೇವಲ ಶೇ. ಒಂದರಷ್ಟು ಅಂಕ ವ್ಯತ್ಯಾಸದಿಂದ ಈ ವಿಶೀಷ್ಟತೆ ಮಸಿ ಆದಂತಾಗಿದೆ. ಇವರು ಸೊರಬದ ತಾಲೂಕು ಆಫೀಸ್‌ನಲ್ಲಿ ಎಫ್‌ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಕ್ರಂ ಹೆಬ್ಬಾರ್ ಶೈಲಜಾ ಅವರ ಪುತ್ರಿಯರು.

ಇದನ್ನೂ ಓದಿ: Raichur: ಮತ‌ ಮಗಳಿದ್ದಂತೆ ಮಾರಿಕೊಳ್ಳಬೇಡಿ; ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜಾಗೃತಿ

Advertisement

Udayavani is now on Telegram. Click here to join our channel and stay updated with the latest news.

Next