Advertisement

Alva’s College;ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 99.8 ವಿದ್ಯಾರ್ಥಿಗಳು ಯಶಸ್ಸು

06:47 PM Apr 12, 2024 | Team Udayavani |

ಮೂಡುಬಿದಿರೆ: ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ ಮೂಡುಬಿದಿರೆ ಆಳ್ವಾಸ್‌ ಪ.ಪೂ. ಕಾಲೇಜಿನ 3500 ಮಂದಿ ವಿದ್ಯಾರ್ಥಿಗಳ ಪೈಕಿ 3493 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 99.8 ಫಲಿತಾಂಶ ಬಂದಿದೆ. ರಾಜ್ಯ ಪ.ಪೂ. ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್‌ ಪ.ಪೂ. ಕಾಲೇಜಿನ 682 ವಿದ್ಯಾರ್ಥಿಗಳು ಶೇ. 95ಕ್ಕಿಂತ ಅಧಿಕ ಅಂಕವನ್ನು ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ.

Advertisement

ರಾಜ್ಯದ ಮೊದಲ ಹತ್ತು ರ್‍ಯಾಂಕ್‌ ಗಳಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳ ಒಟ್ಟು 45 ವಿದ್ಯಾರ್ಥಿಗಳು ಸ್ಥಾನವನ್ನು ಪಡೆದಿರುವುದೂ ದಾಖಲೆ ಎಂದು ಆಳ್ವಾಸ್‌ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರು
ಹರ್ಷ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜ್ಞಾನದಲ್ಲಿ ನೂತನ ಆರ್‌ ಗೌಡ 600 ರಲ್ಲಿ 595 ಅಂಕ ಪಡೆದು
ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು, ವಾಣಿಜ್ಯದಲ್ಲಿ ತರುಣ್‌ ಕುಮಾರ್ ಪಾಟೀಲ್‌ (594) 4ನೇ ಸ್ಥಾನ ಪಡೆದಿದ್ದಾರೆ.
ಆಕಾಶ್‌ ಪಿಎಸ್‌, ಅನಿರುದ್ಧ ಪಿ. ಮೆನನ್‌, ಸುಮಿತ್‌, ಮೂಡುಬಿದಿರೆಯ ಸುಧೀಂದ್ರ ಕಾಮತ್‌ 5ನೇ ರ್‍ಯಾಂಕ್‌,
ಸಹನಾ ಕೆ, ಶಿವಶೇಷ 6ನೇ, ವಾಣಿ ಕೆ, ಮೇಧಾ ವಿ, ಜೀವಿಕಾ ಎಸ್‌, ಹರೀಶ್‌ ಉದಯ್‌, ಭೂ ಮಿ, ಷಾನ್‌ ಪಿಂಟೋ,
ಅಶೋಕ್‌ ಸುತಾರ್‌, ಮಂಜುನಾಥ್‌ ಡಿ. 7ನೇ ರ್‍ಯಾಂಕ್‌ ಪಡೆದಿದ್ದಾರೆ ಎಂದವರು ವಿವರಿಸಿದರು.

ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡೆ, ಕಲೆ, ಪಠ್ಯೇತರ ವಿಭಾಗಗಳಲ್ಲೂ ಆಳ್ವಾಸ್‌ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮುಂಚೂಣಿ ಯಲ್ಲಿರುವುದು ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಇಂಬುಗೊಟ್ಟಿದೆ ಎಂದರು.

ಒಟ್ಟು 29 ವಿದ್ಯಾರ್ಥಿಗಳು ಶೇ. 98.33 ಕ್ಕೂ ಅಧಿಕ, 56 ವಿದ್ಯಾರ್ಥಿಗಳು ಶೇ. 98ಕ್ಕೂ ಅಧಿಕ ಫಲಿತಾಂಶ ಪಡೆದಿದ್ದು 2882 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಪಡೆದಿದ್ದಾರೆ. ಕನ್ನಡದಲ್ಲಿ 22, ಸಂಸ್ಕೃತದಲ್ಲಿ 54, ಭೌತಶಾ ಸ್ತ್ರದಲ್ಲಿ 9,ರಸಾಯನ ಶಾಸ್ತ್ರ ದಲ್ಲಿ 81, ಗಣಿತದಲ್ಲಿ 232, ಜೀವಶಾಸ್ತ್ರದಲ್ಲಿ 290, ಗಣಕ ವಿಜ್ಞಾನದಲ್ಲಿ 39, ಅಕೌಂಟೆನ್ಸಿಯಲ್ಲಿ 53, ಸಂಖ್ಯಾಶಾ ಸ್ತ್ರದಲ್ಲಿ 07, ಇಲೆಕ್ಟ್ರಾನಿಕ್ಸ್‌ ನಲ್ಲಿ 4, ಅರ್ಥಶಾಸ್ತ್ರದಲ್ಲಿ 35, ಬ್ಯುಸಿನೆಸ್‌ ಸ್ಟಡೀಸ್‌ನಲ್ಲಿ 09, ಬೇಸಿಕ್‌ ಮ್ಯಾತ್ಸ್ ನಲ್ಲಿ 27, ಸಮಾಜಶಾ ಸ್ತ್ರ ದಲ್ಲಿ 2, ರಾಜ್ಯಶಾಸ್ತ್ರದಲ್ಲಿ 2 ವಿದ್ಯಾರ್ಥಿಗಳು 100ಕ್ಕೆ
ನೂರು ಅಂಕಗಳನ್ನು ಗಳಿಸಿದ್ದಾರೆ.

Advertisement

45 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್‌ 10 ಸ್ಥಾನ,
682 ವಿದ್ಯಾರ್ಥಿಗಳಿಗೆ ಶೇ. 95 ಕ್ಕಿಂತ ಅಧಿಕ ಅಂಕ
ಕ್ರೀಡೆ, ಕಲೆ, ಪಠ್ಯೇತರ ವಿಭಾಗಗಳಲ್ಲೂ ಅಗ್ರಣಿ
ಪಿಯುಸಿ ಇತಿಹಾಸದಲ್ಲಿ ಆಳ್ವಾಸ್‌ ಸಾರ್ವತ್ರಿಕ ದಾಖಲೆ

100ಕ್ಕೆ ನೂರು
9 ಮಂದಿ 4 ವಿಷಯಗಳಲ್ಲಿ , 38 ಮಂದಿ 3 ವಿಷಯಗಳಲ್ಲಿ, 148 ಮಂದಿ 2 ವಿಷಯಗಳಲ್ಲಿ , 571 ವಿದ್ಯಾರ್ಥಿಗಳು
ಒಂದು ವಿಷಯದಲ್ಲಿ 148 ವಿದ್ಯಾರ್ಥಿ ಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ ಎಂದು ಅವರು ತಿಳಿಸಿದರು.
ಪ್ರಾಂಶುಪಾಲ ಪ್ರೊ | ಎಂ. ಸದಾಕತ್‌, ಕಾಮರ್ಸ್‌ ವಿಭಾಗದ ಡೀನ್‌ ಪ್ರಶಾಂತ್‌ ಎಂ. ಡಿ, ಉಪಸ್ಥಿತರಿದ್ದರು.

ವಿಶೇಷ ಚೇತನ ವಿದ್ಯಾರ್ಥಿಗಳ ಸಾಧನೆ
ಇಬ್ಬರು ಅಂಧರೂ ಸೇರಿದಂತೆ ಆಳ್ವಾಸ್‌ 6 ಜನ ವಿಶೇಷ ಚೇತನ ವಿದ್ಯಾರ್ಥಿಗಳು ದ್ವಿತೀಯ ಉತ್ತಮ ಸಾಧನೆ ತೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next