Advertisement

ದೇಣಿಗೆ ಸಂಗ್ರಹಕ್ಕೆ ಮೇ 2,3 ಕ್ಕೆ ಆನ್ ಲೈನ್ ಚೆಸ್

01:32 PM Apr 28, 2020 | keerthan |

ಬೆಂಗಳೂರು: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮೇ2 ಹಾಗೂ 3ಕ್ಕೆ ಆನ್‌ಲೈನ್‌ ಚೆಸ್‌ ಕೂಟವನ್ನು ಏರ್ಪಡಿಸಲಾಗಿದೆ.

Advertisement

ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆ ಹಾಗೂ ಬೆಂಗಳೂರು ಮೂಲದ ಮೊಬೈಲ್‌ ಪ್ರೀಮಿಯರ್‌ ಲೀಗ್‌ (ಎಂಪಿಎಲ್‌) ಮೊಬೈಲ್‌ ಗೇಮಿಂಗ್‌ ಆ್ಯಪ್‌ ಕೂಟಕ್ಕೆ ಜಂಟಿ ಪ್ರಯೋಜಕತ್ವ ವಹಿಸಿಕೊಂಡಿವೆ ಎಂದು ಸಂಘಟಕರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಕ್ರೀಡಾ ಸಚಿವ ಸಿ.ಟಿ.ರವಿ, “ಎಲ್ಲ ರಾಷ್ಟ್ರೀಯ ಚೆಸ್‌ ಆಟಗಾರರು ಕೂಟದಲ್ಲಿ ಭಾಗವಹಿಸಬೇಕು. ಹೆಚ್ಚಿನ ದೇಣಿಗೆ ಸಂಗ್ರಹಕ್ಕೆ ನೆರವಾಗಬೇಕು, ಸಂಗ್ರಹವಾದ ಹಣವನ್ನು ಕೋವಿಡ್-19 ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲಾಗುತ್ತದೆ. ನಾವೆಲ್ಲರು ಒಟ್ಟಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವ’ ಎಂದು ಮನವಿ ಮಾಡಿದ್ದಾರೆ.

ಒಟ್ಟಾರೆ 10 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಕೂಟದಲ್ಲಿ ಭಾಗವಹಿಸಲು ಇಷ್ಟವಿರುವವರು 50 ರೂ. ಪ್ರವೇಶ ಶುಲ್ಕ  ಪಾವತಿಸಬೇಕು. ಆಸಕ್ತರು ಎಂಪಿಎಲ್‌ ಆ್ಯಪ್‌ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ, ಕೂಟ ಎಂಪಿಎಲ್‌ ಆ್ಯಪ್‌ ಮೂಲಕ ನಡೆಯಲಿದೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next