Advertisement

Onion Price Hike ಈರುಳ್ಳಿ ಕಣ್ಣೀರು: ಬೆಲೆ-ಏರಿಳಿಕೆ

11:48 PM Nov 07, 2023 | Team Udayavani |

ಉಡುಪಿ: ಈರುಳ್ಳಿ ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ದಿನೆದಿನೇ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದು, ಕೆಜಿಗೆ 30-35 ಇದ್ದ ದರವು 55-60 ರೂ. ಗೆ ತಲುಪಿದೆ.

Advertisement

ಕಳೆದ ತಿಂಗಳಷ್ಟೆ ಕೆ.ಜಿ.ಗೆ 20ರಿಂದ 25 ರೂ.ಗೆ ಮಾರಾಟವಾಗುತ್ತಿದ್ದ ಈರುಳ್ಳಿ ಕೆಲವು ದಿನಗಳ ಹಿಂದೆ 35 ರೂ.ಗೆ ತಲುಪಿ ಅನಂತರ 80 ರೂ.ಗಳ ವರೆಗೆ ಮಾರಾಟವಾಗುತ್ತಿತ್ತು. ಪ್ರಸ್ತುತ ದರವು ಮತ್ತೆ ಇಳಿಕೆಯಾಗಿದ್ದು ಕೆ.ಜಿ.ಗೆ 60 ರೂ.ಗಳಿಂದ 70 ರೂ.ಗಳಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದರ ಮತ್ತೆ ಶತಕ ತಲುಪುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ ಎಂಬುದು ಮಾರಾಟಗಾರರ ಅಭಿಪ್ರಾಯವಾಗಿದೆ.

ಈಗಾಗಲೇ ಬೆಲೆ ಏರಿಕೆ ಆತಂಕ ಉಂಟು ಮಾಡಿದ್ದು, ಈರುಳ್ಳಿಯಿಂದ ಗ್ರಾಹರಕ ಕಣ್ಣೀರು ಹೆಚ್ಚುತ್ತಿದೆ.

ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಈರುಳ್ಳಿ ಕ್ವಿಂಟಾಲ್‌ಗೆ 3,000ದಿಂದ 4,500 ರೂ. ವರೆಗೆ ಮಾರಾಟವಾಗುತ್ತಿದೆ. 15 ದಿನಗಳ ಈಚೆಗೆ ರೇಟು ದುಪ್ಪಟ್ಟಾಗಿದೆ ಎಂದು ಎಪಿಎಂಸಿ ಈರುಳ್ಳಿ ವ್ಯಾಪಾರಿ ಶಮೀಉಲ್ಲಾ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಈರುಳ್ಳಿ
ಜಿಲ್ಲೆಯ ಎಪಿಎಂಸಿ ಮತ್ತು ಚಿಲ್ಲರೆ ಮಾರುಕಟ್ಟೆಗೆ ಸದ್ಯಕ್ಕೆ ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆಯಾಗುತ್ತಿದೆ. ರಾಜ್ಯದಿಂದಲೂ ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು ಗ್ರಾಮೀಣ, ಬೆಳಗಾವಿ ಭಾಗದಿಂದ ಈರುಳ್ಳಿ ಪೂರೈಕೆಯಾಗುತ್ತದೆ. ಕೆಲವು ಕಡೆ ಮಳೆ ಇಲ್ಲದೆ, ಕೆಲವು ಕಡೆ ಮಳೆ ಹೆಚ್ಚಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿರುವುದು ಈರುಳ್ಳಿ ಪೂರೈಕೆ ಕೊರತೆಯಾಗಿದೆ ಎನ್ನುತ್ತಾರೆ ಎಪಿಎಂಸಿ ವ್ಯಾಪಾರಿಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next