Advertisement

Onion Manchurian ಅಬ್ಬಬ್ಬಾ ಎಂಥಾ ರುಚಿ ತಪ್ಪದೇ ಈ ರೆಸಿಪಿ ಟ್ರೈ ಮಾಡಿ…

11:14 AM Jul 20, 2024 | ಶ್ರೀರಾಮ್ ನಾಯಕ್ |

ಗೋಬಿ, ಪನ್ನೀರ್‌, ಮಶ್ರೂಮ್‌ ಮಂಚೂರಿಯನ್ನು ನೀವು ಸವಿದಿರುತ್ತೀರಿ ಆದರೆ ನೀವೆಂದಾದರೂ ಈರುಳ್ಳಿ ಮಂಚೂರಿಯನ್ ತಿಂದಿದ್ದೀರಾ ಇಲ್ಲವಾದರೆ ರುಚಿ-ರುಚಿಯಾದ ಈರುಳ್ಳಿ ಮಂಚೂರಿಯನ್ನು ಮನೆಯಲ್ಲೇ ಮಾಡಬಹುದಾಗಿದ್ದು, ವಿಭಿನ್ನ ರುಚಿಯನ್ನು ಸವಿಯಬಹುದು.

Advertisement

ಈರುಳ್ಳಿ ಮಂಚೂರಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ. ಹಾಗಾದ್ರೆ ಇನ್ನೇಕೆ ತಡ, ಬೇಕಾಗಿರುವ ಸಾಮಗ್ರಿಗಳ ಪಟ್ಟಿ, ಮಾಡುವ ವಿಧಾನವು ಈ ಕೆಳಗಿನಂತಿದೆ. ಇಂದು ನಾವು ಈರುಳ್ಳಿ ಮಂಚೂರಿ ಮಾಡುವ ಬನ್ನಿ….

ಬೇಕಾಗುವ ಸಾಮಗ್ರಿಗಳು
ಈರುಳ್ಳಿ-5 (ಸಣ್ಣಗೆ -ಉದ್ದಕ್ಕೆ ಹೆಚ್ಚಿದ್ದು), ಶುಂಠಿ-ಬೆಳ್ಳುಳ್ಳಿ ಪೇಸ್ಟ್‌-2ಚಮಚ, ಅಚ್ಚಖಾರದ ಪುಡಿ-2ಚಮಚ, ಮೈದಾ ಹಿಟ್ಟು-2 ಚಮಚ, ಕಾರ್ನ್ ಫ್ಲೋರ್-2ಚಮಚ, ಹಸಿಮೆಣಸು-1 (ಸಣ್ಣಗೆ ಹೆಚ್ಚಿದ್ದು), ಟೊಮೆಟೋ ಸಾಸ್‌-2ಚಮಚ,ಸೋಯಾ ಸಾಸ್‌-1 ಚಮಚ, ಚಿಲ್ಲಿ ಸಾಸ್‌-1ಚಮಚ, ವಿನೆಗರ್‌-1ಚಮಚ, ಈರುಳ್ಳಿ-1(ಸಣ್ಣಗೆ ಹೆಚ್ಚಿದ್ದು), ಶುಂಠಿ-ಬೆಳ್ಳುಳ್ಳಿ-ಸಣ್ಣಗೆ ಹೆಚ್ಚಿದ್ದು ಸ್ವಲ್ಪ, ಸ್ಪ್ರಿಂಗ್‌ ಆನಿಯನ್‌-ಸಣ್ಣಗೆ ಹೆಚ್ಚಿದ್ದು ಸ್ವಲ್ಪ, ಕ್ಯಾಪ್ಸಿಕಂ-ಸಣ್ಣಗೆ ಹೆಚ್ಚಿದ್ದು ಸ್ವಲ್ಪ, ಕರಿಯಲು-ಎಣ್ಣೆ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು .

ತಯಾರಿಸುವ ವಿಧಾನ
ಮೊದಲಿಗೆ ಒಂದು ಬೌಲ್‌ ಗೆ ಸಣ್ಣಗೆ ಉದ್ದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಅದಕ್ಕೆ ಅಚ್ಚಖಾರದ ಪುಡಿ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್ ,ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಸ್ವಲ್ಪ ನೀರನ್ನು ಸೇರಿಸಿ ಪುನಃ ಮಿಶ್ರಣ ಮಾಡಿ ಸಣ್ಣ-ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.


ತದನಂತರ ಒಲೆಯ ಮೇಲೆ ಒಂದು ಬಾಣಲೆಯಿಟ್ಟು ಎಣ್ಣೆ ಹಾಕಿ, ಕಾದನಂತರ ಮಾಡಿಟ್ಟ ಉಂಡೆಗಳನ್ನು ಹಾಕಿ ಸರಿಯಾಗಿ ಫ್ರೈ ಮಾಡಿರಿ.ಆ ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ, ಹಸಿಮೆಣಸು,ಕ್ಯಾಪ್ಸಿಕಂ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಇದಕ್ಕೆ ಟೊಮೆಟೋ ಸಾಸ್‌, ಚಿಲ್ಲಿ ಸಾಸ್‌, ಸೋಯಾ ಸಾಸ್‌, ವಿನೆಗರ್‌ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ.

ನಂತರ ಸ್ವಲ್ಪ ನೀರಿಗೆ ಕಾರ್ನ್ ಫ್ಲೋರ್ ಹಾಕಿ ಈ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ತದನಂತರ ಫ್ರೈ ಮಾಡಿಟ್ಟ ಈರುಳ್ಳಿ ಉಂಡೆಗಳನ್ನು ಹಾಕಿ ಮಿಶ್ರಣ ಮಾಡಿ ಇದಕ್ಕೆ ಸ್ಪ್ರಿಂಗ್‌ ಆನಿಯನ್‌ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ ಈರುಳ್ಳಿ ಮಂಚೂರಿಯನ್‌ ಸವಿಯಲು ಸಿದ್ಧ.

Advertisement

-ಶ್ರೀರಾಮ್ ಜಿ.ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next