Advertisement

ಈರುಳ್ಳಿ ಬೆಳೆಗೆ ಕೊಳೆರೋಗದ ಬಾಧೆ

07:42 PM Aug 21, 2021 | Team Udayavani |

ಚಳ್ಳಕೆರೆ: ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿ ತಾಲೂಕಿನ ಬಹುತೇಕ ಎಲ್ಲ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ

Advertisement

ತಾಲೂಕಿನ ವಿಡಪನಕುಂಟೆ ವೀರಣ್ಣ ತನ್ನ 5 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ ಬೆಳೆ ಪ್ರಾರಂಭದ ಹಂತದಲ್ಲಿ ಉತ್ತಮವಾಗಿತ್ತು. ಗೆಡ್ಡೆ ಬಿಡುವ ಸಂದರ್ಭದಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತುಕೊಂಡ ರೈತ ತೋಟಗಾರಿಕೆ ಇಲಾಖೆ ವಿಜ್ಞಾನಿಗಳ ಮಾರ್ಗದರ್ಶನ ದಂತೆ ಕ್ರಿಮಿನಾಶಕ ಸಿಂಪಡಿಸಿದ್ದರು. ಆದರೆ ರೋಗ ನಿಯಂತ್ರಣವಾಗದ ಹಿನ್ನೆಲೆಯಲ್ಲಿ ನೊಂದ ರೈತ ಟ್ರ್ಯಾಕ್ಟರ್ ನಿಂದ ಈರುಳ್ಳಿ ಬೆಳೆ ನಾಶ ಪಡಿಸಿದ್ದಾನೆ. ಈರುಳ್ಳಿ ಬಿತ್ತಲು ಎಕರೆಗೆ 30 ಸಾವಿರದಂತೆ 1.50 ಲಕ್ಷ ಖರ್ಚು ಮಾಡಿದ್ದೇನೆ ಎಂದು ರೈತರ ಅಳಲು ತೋಡಿದ ಕೊಂಡಿದ್ದಾರೆ.

ಇದನ್ನೂ ಓದಿ:ಸಹಕಾರ ಕ್ಷೇತ್ರವನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ : ಎಚ್.ಕೆ. ಪಾಟೀಲ್

ತಾಲೂಕಿನ ಭತ್ತಯ್ಯನಹಟ್ಟಿ ಗ್ರಾಮದಲ್ಲೂ ಸಹ ಪಿ.ಸೂರಯ್ಯ ಎಂಬುವವರು ತಮ್ಮ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೂ ಕೊಳೆರೋಗ ಅಂಟಿಕೊಂಡಿದೆ. ಇಲಾಖೆಯ ಮಾರ್ಗದರ್ಶನದಂತೆ ಔಷಧಿ ಸಿಂಪಡಣೆ ಮಾಡಿದ್ದರೂ ಯಾವುದೂ ಫಲಸದಿದ್ದ ಕಾರಣ ರೈತ ಪಿ.ಸೂರಯ್ಯ ಈರುಳ್ಳಿ ಬೆಳೆ ನಾಶ ಪಡಿಸಿದ್ದು, ಸುಮಾರು 2 ಲಕ್ಷ ನಷ್ಟ ಅನುಭವಿಸಿದ್ದಾರೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈರುಳ್ಳಿ ಬೆಳೆಯ ಕೊಳೆರೋಗ ನಿರ್ಮೂಲನೆಗೆರೈತರಿಗೆ ಹೆಚ್ಚು ಮಾರ್ಗದರ್ಶನ ನೀಡಬೇಕಿದೆ. ಆಗಿರುವ ಬೆಳೆ ನಷ್ಟ ಪರಿಹಾರವನ್ನು ಬರಿಸಿಕೊಡುವಂತೆ ಈರುಳ್ಳಿ ಬೆಳೆಗಾರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next