Advertisement

ಹಿಂದುತ್ವದ ಮೇಲೆ ದಾಳಿ; ತರೂರ್‌, ಅಯ್ಯರ್‌, ದಿಗ್ವಿಜಯ್‌ ಗೆ ರಾಹುಲ್‌ ಗಾಂಧಿಯೇ ಗುರು!

11:24 AM Nov 13, 2021 | Team Udayavani |

ನವದೆಹಲಿ: ಕಾಂಗ್ರೆಸಿಗರು ಪದೇ ಪದೆ ಹಿಂದುತ್ವದ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದು ಸರಿಯಾದುದಲ್ಲ ಎಂದು ಬಿಜೆಪಿ ವಕ್ತಾರ ಸಂಭಿತ್‌ ಪಾತ್ರಾ ಆರೋಪಿ ಸಿದ್ದಾರೆ. ಸಿಖ್ಖರನ್ನು ಅಥವಾ ಮುಸ್ಲಿಮರನ್ನು ಹೊಡೆಯುವುದೇ ಹಿಂದುತ್ವ ಹಾಗೂ ಹಿಂದೂ ಧರ್ಮವೇ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕೆಗೆ ತಿರುಗೇಟು ನೀಡಿದ ಅವರು, ಮಾಜಿ ಸಚಿವ ಸಲ್ಮಾನ್‌ ಖುರ್ಷೀದ್‌ ಹಿಂದುತ್ವ ವನ್ನು ಬೊಕೊ ಹರಾಂ ಹಾಗೂ ಐಎಸ್‌ಐಎಸ್‌ ಉಗ್ರ ಸಂಘಟನೆಗಳಿಗೆ ಹೋಲಿಸುತ್ತಾರೆ.

Advertisement

ಇದನ್ನೂ ಓದಿ:ಕುಟುಂಬ ರಾಜಕಾರಣದ ರೆಂಬೆಕೊಂಬೆಗಳು ಎಷ್ಟೊಂದು ಸಮೃದ್ಧ : ಜೆಡಿಎಸ್ ಗೆ ಬಿಜೆಪಿ ಟಾಂಗ್

ಶಶಿ ತರೂರ್‌ ಹಿಂದೂ ತಾಲಿಬಾನ್‌ ಎನ್ನುತ್ತಾರೆ. ದಿಗ್ವಿಜಯ್‌ ಸಿಂಗ್‌, ಮಣಿ ಶಂಕರ್‌ ಅಯ್ಯರ್‌ರವರಂಥವರು ಕೇಸರಿ ಉಗ್ರವಾದ ಎನ್ನುತ್ತಾರೆ. ಇವರೆಲ್ಲರಿಗೂ ರಾಹುಲ್‌ ಗಾಂಧಿಯವರೇ ಗುರುವಾಗಿದ್ದಾರೆ ಎಂದಿದ್ದಾರೆ.

ಇದಕ್ಕೂ ಮೊದಲು ವಾರ್ಧಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್‌ “ಸಿಖ್ಖರನ್ನು ಅಥವಾ ಮುಸ್ಲಿಮರು ಹೊಡೆಯುದೇ ಹಿಂದುತ್ವ ಹಾಗೂ ಹಿಂದೂ ಧರ್ಮವೇ? ಹಿಂಸೆಯೇ ಹಿಂದುತ್ವ ಎಂದು ಯಾವ ಪುಸ್ತಕದಲ್ಲಿ ಬರೆದಿದೆ? ನಾನಂತೂ ಎಲ್ಲೂ ನೋಡಿಲ್ಲ. ನಾನು ಉಪನಿಷತ್‌ಗಳನ್ನು ಓದಿದ್ದೇನೆ. ಅಲ್ಲಿಯೂ ಈ ಕುರಿತ ಮಾಹಿತಿ ಇಲ್ಲ’ ಎಂದು ಹೇಳಿದ್ದರು.

ಅವರು, ಹಿಂದುತ್ವ ಹೆಸರಿನಲ್ಲಿ ಇಂದು ಹಿಂಸೆಗಳು ನಡೆಯುತ್ತಿವೆ. ಹಿಂಸಾ ಮನೋ ಧರ್ಮಕ್ಕೆ ಹಿಂದೂ ಎಂದ ಪದದಿಂದ ಎರವಲು ಪಡೆಯಲಾಗಿರುವ ಹಿಂದುತ್ವ ಏಕೆ, ಬೇರೆ ಹೆಸರನ್ನಿಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.

Advertisement

ಶೀಘ್ರವೇ ಶಾಶ್ವತ ಆಯೋಗ: ಕೇಂದ್ರ
ಸೇನೆಯಲ್ಲಿ ಸೇವೆ ಸಲ್ಲಿಸುವ ಮಹಿಳಾ ಅಧಿಕಾರಿಗಳ ಆಡಳಿತಾತ್ಮಕ ಅಹವಾಲುಗಳನ್ನು ಆಲಿಸುವ ಸಲುವಾಗಿ ಶಾಶ್ವತ ಆಯೋಗವನ್ನು ಸದ್ಯದಲ್ಲೇ ಅಸ್ತಿತ್ವಕ್ಕೆ
ತರಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ವರದಿಯಲ್ಲಿ ಈ ಅಂಶವನ್ನು ಕೇಂದ್ರ ಸರ್ಕಾರ ಅರಿಕೆ ಮಾಡಿದೆ. ಈ ಕುರಿತಂತೆ 10 ದಿನಗಳೊಳಗಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next