Advertisement

ಎಚ್‌ಪಿಸಿಎಲ್‌ ಷೇರು ಖರೀದಿಸಿದ ಒಎನ್‌ಜಿಸಿ

11:22 AM Jan 21, 2018 | |

ಹೊಸದಿಲ್ಲಿ:  ಹಿಂದುಸ್ಥಾನ್‌ ಪೆಟ್ರೋಕೆಮಿಕಲ್ಸ್‌ (ಎಚ್‌ಪಿಸಿಎಲ್‌)ನ ತೈಲ ಸಂಸ್ಕರಣಾ ಘಟಕದ ಶೇ.51.11 ಷೇರುಗಳನ್ನು ಸರಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಒಎನ್‌ಜಿಸಿ) ಖರೀದಿ ಮಾಡಿದೆ. ಅದಕ್ಕಾಗಿ ಒಟ್ಟು 36,915 ಕೋಟಿ ರೂ. ಮತ್ತು ಶೇ.10ರಷ್ಟು ಪ್ರೀಮಿಯಂ ಅನ್ನೂ ನೀಡಲಾಗಿದೆ. ಪ್ರತಿ ಷೇರಿಗೆ ಒಎನ್‌ಜಿಸಿ 437.97 ರೂ.ಗಳನ್ನು ನೀಡಿದೆ. ಈ ಖರೀದಿ ಬಗ್ಗೆ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಒಎನ್‌ಜಿಸಿ ಲಿಖೀತ ಮಾಹಿತಿ ನೀಡಿದೆ. ಇದು, ಕೇಂದ್ರ ಸರಕಾರದ ಬಂಡವಾಳ ಹಿಂದೆಗೆತ ಮಿತಿಯ ಗುರಿ ಸಾಧಿಸಲು ಸಾಧ್ಯವಾಗಲಿದೆ. ಮತ್ತೂಂದು ಮಹತ್ವದ ವಿಚಾರವೆಂದರೆ ಮಾರುಕಟ್ಟೆ ಹೊರತಾಗಿ ನಡೆಸಲಾಗಿರುವ ಡೀಲ್‌ ಇದಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next