Advertisement
ಗ್ರಾಹಕರು ತಮ್ಮ ಕಾರ್ಯಾಚರಿಸದ ಫೋನುಗಳನ್ನು ನಾರ್ಡ್ 4 ಫೋನ್ನೊಂದಿಗೆ ಬದಲಿಸಿ, ಒಟ್ಟು ಮೌಲ್ಯದ ಮೇಲೆ ರೂ. 2000 ಗಳ ತಕ್ಷಣದ ರಿಯಾಯಿತಿಯನ್ನು ಪಡೆಯಬಹುದು, ಜೊತೆಗೆ ರೂ. 4,999 ಮೌಲ್ಯದ ಬ್ಯಾಕ್ ಪ್ಯಾಕ್ ಸಹ ಉಚಿತವಾಗಿ ಪಡೆಯಬಹುದು.
Related Articles
Advertisement
ಪಾಪ್-ಅಪ್ ಕಾರ್ಯಕ್ರಮದ ಕುರಿತು ಮಾತನಾಡಿದ ಒನ್ ಪ್ಲಸ್ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕರಾದ ಇಶಿತಾ ಗ್ರೋವರ್, “ನಮ್ಮ ಭಾರತೀಯ ಬಳಗದವರಿಗೆ ಹೊಸ ನಾರ್ಡ್ 4 ಮೊಬೈಲ್ ಅನುಭವಿಸುವ ಅವಕಾಶವನ್ನು ನೀಡುವುದರೊಂದಿಗೆ ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಒನ್ ಪ್ಲಸ್ ಮೆಟಲ್ವರ್ಸ್ ಪಾಪ್-ಅಪ್ ಕಾರ್ಯಕ್ರಮಗಳನ್ನು ನಡೆಸಲು ಬಹಳ ಉತ್ಸುಕರಾಗಿದ್ದೇವೆ. ಈ ಒನ್ ಪ್ಲಸ್ ಮೆಟಲ್ವರ್ಸ್ ನಲ್ಲಿ ನಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಈ ಕಾರ್ಯಕ್ರಮವನ್ನು ಪ್ರತಿಯೊಬ್ಬರಿಗಾಗಿ ಒಂದು ಮರೆಯಲಾದ ಅನುಭವವನ್ನು ನೀಡಲು ನಾವು ಬಹಳ ಕೌತುಕದಿಂದ ಕಾಯುತ್ತಿದ್ದೇವೆ” ಎಂದರು.
ರೂ. 29,999ರಿಂದ ಆರಂಭವಾಗುವ ಒನ್ ಪ್ಲಸ್ ನಾರ್ಡ್ 4 ಆಲ್-ಮೆಟಲ್ ಯುನಿಬಾಡಿ ಹೊಂದಿದ ಮೊದಲ 5ಜಿ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಇದು 8/128GB, 8/256GB ಮತ್ತು 12/256GB ಮೂರು ಮಾದರಿಗಳಲ್ಲಿ ಲಭ್ಯವಿದೆ. ಒಬ್ಸಿಡಿಯನ್ ಮಿಡ್ನೈಟ್, ಮರ್ಕ್ಯುರಿಯಲ್ ಸಿಲ್ವರ್ ಮತ್ತು ಓಯಸಿಸ್ ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ಫೋನ್ ಗಳು ಲಭ್ಯವಿದ್ದು, ಒನ್ ಪ್ಲಸ್ ನಾರ್ಡ್ 4 ಸ್ನಾಪ್ಡ್ರಾಗನ್ 7 ಪ್ಲಸ್ ಜೆನ್ 3 ಪ್ರೊಸೆಸರ್ ಮತ್ತು 100W ಸೂಪರ್ ವೂಕ್ ಚಾರ್ಜಿಂಗ್ ನೊಂದಿಗೆ ದೊಡ್ಡದಾದ 5,500mAh ಬ್ಯಾಟರಿಯನ್ನು ಒಳಗೊಂಡಿದೆ. ಆದ್ದರಿಂದ ಇದು ಕೇವಲ 28 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ನಾರ್ಡ್ 4, ನಾಲ್ಕು ವರ್ಷಗಳ OS ಅಪ್ ಡೇಟ್ ಮತ್ತು 6 ವರ್ಷಗಳ ಸೆಕ್ಯುರಿಟಿ ಅಪ್ ಡೇಟ್ ಅನ್ನು ನೀಡುತ್ತದೆ.
ಕೊಡುಗೆಗಳು ಮತ್ತು ಲಭ್ಯತೆ ಗ್ರಾಹಕರು ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿರುವ ಒನ್ ಪ್ಲಸ್ ಪಾಪ್-ಅಪ್ ಸ್ಟೋರ್ ಗಳಲ್ಲಿ ಹೊಚ್ಚ-ಹೊಸ ಒನ್ ಪ್ಲಸ್ ನಾರ್ಡ್ 4 ಅನ್ನು ಖರೀದಿಸಬಹುದು ಮತ್ತು 8+256GB ಖರೀದಿಸಿದಾಗ ರೂ. 3000ಗಳ ತಕ್ಷಣದ ಬ್ಯಾಂಕ್ ರಿಯಾಯಿತಿಯನ್ನು ಸಹ ಪಡೆಯಬಹುದು. ಒಂದುವೇಳೆ ಗ್ರಾಹಕರು ತಮ್ಮ ಕಾರ್ಯಾಚರಣೆಯಲ್ಲಿಲ್ಲದ ಮೊಬೈಲ್ ಗಳನ್ನು ಒನ್ ಪ್ಲಸ್ ನಾರ್ಡ್ 4 ಖರೀದಿಸಲು ವಿನಿಮಯ ಮಾಡಿಕೊಂಡರೆ ವಿನಿಮಯ ಬೋನಸ್ ಆಗಿ ರೂ. 2000ಗಳನ್ನು ಪಡೆಯಬಹುದು. ಗ್ರಾಹಕರು 6 ತಿಂಗಳುಗಳವರೆಗೆ ಬಡ್ಡಿ ರಹಿತ ಇಎಂಐ ಮೂಲಕ ನಾರ್ಡ್ 4 ಅನ್ನು ಖರೀದಿಸಬಹುದು. ಒನ್ ಪ್ಲಸ್ ನಾರ್ಡ್ 4 ಖರೀದಿಸುವ ಗ್ರಾಹಕರು, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ರೂ. 4999 ಮೌಲ್ಯದ ಒನ್ ಪ್ಲಸ್ ಬ್ಯಾಕ್ ಪ್ಯಾಕ್ ಅನ್ನು ಪಡೆಯುತ್ತಾರೆ, ಆದರೆ ಇದು ಲಭ್ಯತೆಗೆ ಒಳಪಟ್ಟಿರುತ್ತದೆ.