Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಇಲಾಖೆಯ ಚಿತ್ರಣವನ್ನು ಸಂಪೂರ್ಣ ಬದಲು ಮಾಡುವ ಆಲೋಚನೆಯೊಂದಿಗೆ ಕಾರ್ಯ ಪ್ರವೃತ್ತರಾಗಿದ್ದಾರೆ. ತಮ್ಮ ಅಧಿಕಾರಾವಧಿಯ ಮೊದಲ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
Related Articles
ಎಲ್ಲ ಜಿಲ್ಲೆಗಳ ಗಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಕನ್ನಡ ಗೀತೆ ಗಾಯನ ಏರ್ಪಡಿಸುವ ಚಿಂತನೆಯಿದೆ. ಪ್ರತೀ ಜಿಲ್ಲೆಯಿಂದ 5ರಿಂದ 10 ಸಾವಿರ ಜನರಿಗೆ ತರಬೇತಿ ನೀಡಿ, ಬೆಂಗಳೂರಿನಲ್ಲಿ 2ರಿಂದ 2.5 ಲಕ್ಷ ಜನರಿಂದ ಒಂದೇ ವೇದಿಕೆಯಲ್ಲಿ ಈ ಗಾಯನ ಏರ್ಪಡಿಸುವ ಬಗ್ಗೆ ಸಚಿವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಒಂದು ವಾರದ ಕಾರ್ಯಕ್ರಮಗಳನ್ನು ಬೆಂಗಳೂರು ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲು ಇಲಾಖೆ ಆಲೋಚಿಸಿದೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮಗೊಳಿಸಲಾಗುವುದು.-ವಿ. ಸುನಿಲ್ ಕುಮಾರ್,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ. -ಶಂಕರ ಪಾಗೋಜಿ