Advertisement

ಸ್ವಚ್ಛ ಸುಬ್ರಹ್ಮಣ್ಯ ಕನಸಿನ ಸಾಕಾರಕ್ಕೆ  ಒಂದು ಹೆಜ್ಜೆ 

10:10 AM Aug 05, 2018 | |

ಸುಬ್ರಹ್ಮಣ್ಯ: ಸ್ವಚ್ಛ ಮತ್ತು ಸುಂದರ ಸುಬ್ರಹ್ಮಣ್ಯ ಆಗಬೇಕೆಂಬುದು ದಶಕಗಳ ಕನಸು. ಇದಕ್ಕಾಗಿ ಹಲವು ಪ್ರಯತ್ನಗಳು ನಡೆದರೂ ಅವೆಲ್ಲವೂ ಅರ್ಧಕ್ಕೆ ನಿಂತು ಹೋಗಿ ನಿರಾಶೆ ಮೂಡಿಸಿತ್ತು. ಇದೀಗ ಸ್ವಚ್ಛ ಸುಬ್ರಹ್ಮಣ್ಯ ಕನಸಿನ ಸಾಕಾರಕ್ಕೆ ಸುಬ್ರಹ್ಮಣ್ಯ ಗ್ರಾ.ಪಂ., ದ.ಕ.ಜಿ.ಪಂ. ಸಹಕಾರದೊಂದಿಗೆ ಪರಿಸರ ಸ್ನೇಹಿ ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ.

Advertisement

ಪ್ರವಾಸಿ ತಾಣ ಮತ್ತು ಭಕ್ತರ ಪುಣ್ಯ ಭೂಮಿ ಕುಕ್ಕೆಯಲ್ಲಿ ತ್ಯಾಜ್ಯ ನಿರ್ವಹಣೆಯೊಂದು ಸ್ಥಳೀಯಾಡಳಿತಕ್ಕೆ ಮತ್ತು ದೇಗುಲಕ್ಕೆ ದೊಡ್ಡ ತಲೆನೋವಾಗಿದೆ. ಈ ಸಮಸ್ಯೆಗೆ ಮುಕ್ತಿ ನೀಡುವ ಉದ್ಧೇಶದಿಂದ ಸ್ಥಳೀಯಾಡಳಿತ ಈ ಮಹಣ್ತೀದ ನಿರ್ಧಾರ ಕೈಗೊಂಡಿದೆ. 

ಪರಿಸರ ಸ್ನೇಹಿ
ಘನತ್ಯಾಜ್ಯ ಪರಿಕಲ್ಪನೆಯಡಿ ಹತ್ತು ಸೆಂಟ್ಸ್‌ ಜಾಗದಲ್ಲಿ ವೈಜ್ಞಾನಿಕವಾದ ವಿಲೇವಾರಿ ಘಟಕ ಸ್ಥಾಪನೆಯಾಗಲಿದ್ದು, ಇಂಧನ ಅಥವಾ ವಿದ್ಯುತ್‌ ಬಳಸದೇ, ಬೆಂಕಿ ಬಳಸಲಾಗುತ್ತಿದೆ. ಕಬ್ಬಿಣ ಮತ್ತು ಗ್ಲಾಸು ಹೊರತು ಪಡಿಸಿ ಇತರೆ ಎಲ್ಲ ಕ್ಲಿಷ್ಟ ಘನ ವಸ್ತುಗಳು ಸುಟ್ಟು ಬೂದಿಯಾಗಲಿದ್ದು, ವಾಯು ಮಾಲಿನ್ಯದ ಸಮಸ್ಯೆ ಇರುವುದಿಲ್ಲ. ಉತ್ಪತ್ತಿಯಾಗುವ ವಿಷಾನಿಲ ಗಾಳಿಗೆ ಸೇರದಂತೆ ಪ್ರತ್ಯೇಕಿಸುವ ತಂತ್ರಜ್ಞಾನ ಅಳವಡಿಸಲಾಗಿದೆ.

3 ಕ್ವಿಂಟಾಲ್‌ ಸಾಮರ್ಥ್ಯ
ಘಟಕ್ಕೆ ಬರಲಿರುವ ಈ ಯಂತ್ರ 300 ಕೆ.ಜಿ. ತ್ಯಾಜ್ಯ ಸುಡುವ ಸಾಮರ್ಥ್ಯ ಹೊಂದಿದೆ. ದಿನದಲ್ಲಿ 10 ಬಾರಿ ಯಂತ್ರಕ್ಕೆ ಘನ ತ್ಯಾಜ್ಯವನ್ನು ಲೋಡ್‌ ಮಾಡಲು ಸಾಧ್ಯವಾಗಲಿದೆ. ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿರುವ ಕಾರಣ ಸ್ಥಳೀಯಾಡಳಿತ ಜಿ.ಪಂ. ಸಹಕಾರದಲ್ಲಿ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.

ಘಟಕ ಒಂದು ಯಂತ್ರ ಎರಡು
ಈ ಘಟಕದಲ್ಲಿ ಎರಡು ದಹನ ಚಿಮಿಣಿ ಅಳವಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಒಂದು ಯಂತ್ರ 17 ಲಕ್ಷ ರೂ. ಮೌಲ್ಯ ಹೊಂದಿದ್ದು, 2 ಯಂತ್ರಕ್ಕೆ ಒಟ್ಟು 34 ಲಕ್ಷ ರೂ. ವೆಚ್ಚ ತಗುಲಲಿದೆ. ಗ್ರಾಮ ಪಂಚಾಯತ್‌ನ ಸ್ವಂತ ಅನುದಾನ ಹಾಗೂ 14ನೇ ಹಣಕಾಸು ನಿಧಿ ಮತ್ತು ಸ್ವಚ್ಛ ಭಾರತ್‌ ಯೋಜನೆಯ ಸಹಕಾರದೊಂದಿಗೆ ಘಟಕ ತೆರೆಯಲಾಗುತ್ತದೆ.

Advertisement

ಘಟಕದ ತ್ಯಾಜ್ಯ ಬಳಕೆಗೆ ಲಭ್ಯ
ಘಟಕದ ನಿರ್ವಹಣೆ ಎರಡು ಮಂದಿ ಸಿಬಂದಿ ಅವಶ್ಯಕತೆ ಇದ್ದು, ಗಂಟೆಗೆ 120 ಲೀಟರ್‌ ನೀರು ಖರ್ಚಾಗಲಿದೆ. ಕಾರ್ಬನ್‌ ಡೈ ಆಕ್ಸೈಡ್ ಬೆರೆತ ನೀರನ್ನು ಮರು ಬಳಕೆಗೆ ಸಿದ್ಧಪಡಿಸುವ ತಂತ್ರಜ್ಞಾನವೂ ಇದರಲ್ಲಿ ಸೇರಿದೆ. ಯಂತ್ರದಲ್ಲಿ ಉತ್ಪತ್ತಿಯಾಗುವ ಹಬೆಯನ್ನು ಆಹಾರ ತಯಾರಿಕ ಬಾಯ್ಲರ್‌ಗೆ, ವಿದ್ಯುತ್‌ ಉತ್ಪಾದನೆಗೆ ಬಳಸಬಹುದಾಗಿದೆ. ಒಂದು ಭಾರಿ ಕಸ ಉರಿದಾಗ ಬ್ರಹತ್‌ ಪ್ರಮಾಣದ ಬೂದಿ ಲಭ್ಯವಾಗಲಿದ್ದು, ಇದನ್ನು ಗೊಬ್ಬರವಾಗಿ ಬಳಸಲು ಅವಕಾಶವಿದೆ.

ಮನೆ-ಮನೆ ಕಸ ಸಂಗ್ರಹ 
ಖಾಸಗಿ ಸಹಭಾಗಿತ್ವದಲ್ಲಿ ದತ್ತಿನಿಧಿ ಸ್ಥಾಪಿಸುವುದು. ಹತ್ತು ಮಂದಿ ಪೌರ ಕಾರ್ಮಿಕರ ಬಳಸಿ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಸ್ಥಳೀಯರನ್ನು ಸೇರಿಸಿ ಸ್ವಚ್ಛ ಸಮಿತಿ ರಚಿಸುವ ಪ್ರಸ್ತಾವವೂ ಇದೆ. ಕಾರ್ಯಕ್ರಮಗಳು ನಡೆಯುವ ಸ್ಥಳ ಹಾಗೂ ಅಪೇಕ್ಷಿತರ ಮನೆಗಳಿಗೂ ತೆರಳಿ ಕಸ ಸಂಗ್ರಹಿಸಿ ತರುವ ಕೆಲಸವನ್ನು ಈ ಯೋಜನೆಯಲ್ಲಿ ಅಳವಡಿಕೆಯಾಗಲಿದೆ. ಇದರ ನಿರ್ವಹಣೆಗೆ ಹಣಕಾಸಿನ ಆವಶ್ಯಕತೆ ಇದ್ದು, ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ಕ್ರೋಢೀಕರಿಸಿ ಸುಂದರ ನಗರವನ್ನಾಗಿಸುವ ಚಿಂತನೆ ಈ ಘಟಕ ಲೋಕಾರ್ಪಣೆಯ ಜತೆಗೆ ಸಾಕಾರವಾಗಲಿದೆ.

ಟೆಂಡರ್‌ ಪೂರ್ಣ
ಘಟಕದಲ್ಲಿ ಈ ತಂತ್ರಜ್ಞಾನದ ಅಳವಡಿಕೆಯ ಟೆಂಡರ್‌ ಪ್ರಕ್ರೀಯೆ ಜುಲೆ„ ತಿಂಗಳಲ್ಲಿ ಪೂರ್ಣಗೊಂಡಿದೆ. ಭರತ್‌ರಾಜ್‌ ಕಾರ್ಪೊರೇಶನ್‌ ಶೀತಲ್‌ ಮೆನ್ಸ್‌ ಸಂಸ್ಥೆ ಇದರ ಗುತ್ತಿಗೆ ವಹಿಸಿಕೊಂಡಿದೆ. ಆಗಸ್ಟ್‌ 7ರಂದು ಕಾರ್ಯಾರಂಭದ ಆದೇಶ ಪತ್ರ ನೀಡಲಾಗುತ್ತಿದ್ದು, ಮುಂದಿನ ಒಂದು ತಿಂಗಳ ಅವಧಿಯೊಳಗೆ ಘಟಕವನ್ನು ಬಳಕೆಗೆ ಹಂಸ್ತಾತರಿಸಲಿದ್ದಾರೆ.
– ಯು.ಡಿ. ಶೇಖರ್‌
ಪಂ. ಅಭಿವೃದ್ಧಿ ಅಧಿಕಾರಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next