Advertisement

“ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್‌’ಆ್ಯಪ್‌ನಲ್ಲಿ ಕನ್ನಡ

12:48 AM Apr 18, 2021 | Team Udayavani |

ದಾವಣಗೆರೆ: ವಲಸಿಗರಿಗೆ ದೇಶದ ಯಾವುದೇ ಭಾಗದಲ್ಲೂ ಸುಲಭವಾಗಿ ಪಡಿತರ ಆಹಾರಧಾನ್ಯ ಸಿಗುವಂತೆ ಮಾಡಲು ಕೇಂದ್ರ ಸರಕಾರ ಈಗಾಗಲೇ ಜಾರಿಗೆ ತಂದಿರುವ “ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್‌’ ಆ್ಯಪ್‌ನಲ್ಲಿ ಕನ್ನಡ ಭಾಷೆಯನ್ನೂ ಅಳವಡಿಸಲಾಗಿದೆ. ಮೊದಲು ಇಂಗ್ಲಿಷ್‌ ಹಾಗೂ ಹಿಂದಿ ಮಾತ್ರ ಇತ್ತು.

Advertisement

ವ್ಯಕ್ತಿಯ ಭೌತಿಕ ಸ್ಥಳವನ್ನು ಲೆಕ್ಕಿಸದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬರುವ ಎಲ್ಲ ಫಲಾನು
ಭವಿಗಳಿಗೆ ಆಹಾರ ಭದ್ರತೆ ಒದಗಿಸುವ ಏಕೈಕ ಗುರಿಯೊಂದಿಗೆ “ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್‌’ ಆ್ಯಪ್‌ ಅಭಿ ವೃದ್ಧಿಪಡಿಸಲಾಗಿದೆ. ಆದರೆ ಇದರ ಬಳಕೆಗೆ ಭಾಷೆ ಅಡ್ಡಿಯಾಗಿದ್ದು, ಈಗ ಕೇಂದ್ರ ಸರಕಾರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ ಹಾಗೂ ಒರಿಯಾವನ್ನೂ ಸೇರಿಸಿದೆ.

ಕಾರ್ಡ್‌ ರದ್ದಾಗದು
ಕೇವಲ ಆಧಾರ್‌ ನಂಬರ್‌ ಸಹಾಯದಿಂದ ಈ ಆ್ಯಪ್‌ನಿಂದಲೇ ರೇಶನ್‌ ಕಾರ್ಡ್‌ ನಂಬರ್‌, ಪಡಿತರ ವ್ಯವಹಾರ, ಪಡಿತರ ಲಭ್ಯತೆ ಹಾಗೂ ಜಿಪಿಎಸ್‌ ಮೂಲಕ ಹತ್ತಿರದ ಪಡಿತರ ಅಂಗಡಿ ಮುಂತಾದ ಮಾಹಿತಿ ಲಭ್ಯವಾಗಲಿವೆ. ಕೆಲವರು ವಲಸೆ ಬಂದ ಸ್ಥಳದಲ್ಲಿ ಪಡಿತರ ಪಡೆದರೆ ಮೂಲ ಸ್ಥಳದ ಕಾರ್ಡ್‌ ರದ್ದಾಗಬಹುದು ಎಂಬ ಭೀತಿಯಿಂದ ಪಡಿತರ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಎಲ್ಲಿಯೇ ಪಡಿತರ ಪಡೆದರೂ ಕಾರ್ಡ್‌ ರದ್ದಾಗುವುದಿಲ್ಲ.

ವಲಸಿಗರಿಗೆ ಆಹಾರ ಭದ್ರತೆ ಒದಗಿಸುವ ಗುರಿಯೊಂದಿಗೆ “ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್‌’ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಇತ್ತೀಚೆಗೆ ಕನ್ನಡವನ್ನೂ ಅಳವಡಿಸಲಾಗಿದೆ. ಇಂಗ್ಲಿಷ್‌, ಹಿಂದಿ ಓದಲು ಬಾರದ ಕನ್ನಡಿಗರಿಗೆ ಇದು ಹೆಚ್ಚು ಉಪಯುಕ್ತವಾಗಿದೆ.
– ನಾಗರಾಜ ಎಂ.ವಿ., ತಾಂತ್ರಿಕ ಸಹಾಯಕರು, ಆಹಾರ ಇಲಾಖೆ

– ಎಚ್‌.ಕೆ. ನಟರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next