Advertisement

ಹಿಂದೂ ಸಮಾಜ ಒಂದಾಗಲಿ : ಶ್ರೀ ಶಶಿಕಾಂತಮಣಿ ಸ್ವಾಮೀಜಿ

03:48 PM Apr 25, 2017 | |

ಮುಡಿಪು: ಧಾರ್ಮಿಕ ಜಾಗೃತಿಯೊಂದಿಗೆ ಸಾಂಘಿಕ ಜೀವನದೊಂದಿಗೆ ಹಿಂದೂ ಸಮಾಜ ಒಂದಾಗಬೇಕು ಎಂದು ಕನ್ಯಾನ ಬಾಳೆಕೋಡಿಯ ಶ್ರೀ ಕಾಶಿ ಕಾಳಭೈರವೇಶ್ವರ ಕ್ಷೇತ್ರದ ಸದ್ಗುರು ಶ್ರೀ ಶಶಿಕಾಂತಮಣಿ ಸ್ವಾಮೀಜಿ ಹೇಳಿದರು.

Advertisement

ಅವರು ಧರ್ಮ ಜಾಗೃತಿ ವೇದಿಕೆ ಮುಡಿಪು  ಆಶ್ರಯದಲ್ಲಿ ರವಿವಾರ ಶ್ರೀ ಮುಡಿಪಿನ್ನಾರ್‌ ಕ್ಷೇತ್ರದ ವಠಾರದಲ್ಲಿ ಜರಗಿದ ಸತ್ಯನಾರಾಯಣ ಪೂಜೆ, ಶಿವಪೂಜೆ, ಸ್ವಯಂವರ ಪಾರ್ವತಿ ಪೂಜೆ, ಸರಳ ಆದರ್ಶ ವಿವಾಹ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೀರ ಯೋಧ ಸಂತೋಷ್‌ ಕುಲಾಲ್‌ ಅವರ ತಾಯಿ ವಿಮಲಾ ಅವರನ್ನು ಸಮ್ಮಾನಿಸಿ ಮಾತನಾಡಿದರು. ಮನುಷ್ಯನಲ್ಲಿ ಧಾರ್ಮಿಕ ಜಾಗೃತಿಯ ಚಿಂತನೆಗಳು ಮೂಡುವುದರೊಂದಿಗೆ, ಎಲ್ಲರಲ್ಲೂ ದಿಟ್ಟತನ, ಗಟ್ಟಿ ತನದ ಮನಸ್ಸು ಇರಬೇಕು. ಇದರೊಂದಿಗೆ ದೇಶ ಕಾಯುವ ಸೈನಿಕರಂತೆ ದೇಶ ಸೇವೆಯಲ್ಲಿ ಎಲ್ಲರೂ ತೊಡಗಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. 

ನ್ಯಾಯವಾದಿ ಆಶಾಪ್ರಸಾದ್‌ ಮಾತನಾಡಿದರು. ಸೋಮಶೇಖರ್‌-ಚಂದ್ರಾವತಿ ಹಾಗೂ ಶಿವಕುಮಾರ್‌-ಪುಷ್ಪಲತಾ ಜೋಡಿ ಹಸೆಮಣೆ ಏರಿದರು. ಕಾರ್ಯಕ್ರಮ ಸಂಘಟಕ ಸಂತೋಷ್‌ ಕುಮಾರ್‌ ಬೋಳಿಯಾರ್‌ ಅವರು ಮದುಮಗಳನ್ನು ಗಂಡನ ಮನೆಗೆ ಕಳುಹಿಸುವ ಕ್ರಮವನ್ನು ಸಾಂಪ್ರದಾಯಿಕ ವಾಗಿ ನೆರವೇರಿಸಿದರು.  ಧರ್ಮಜಾಗೃತಿ ವೇದಿಕೆಯ ಮಾರ್ಗದರ್ಶಕ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಶ್ರೀ ಕಣಂತೂರು ತೋಡಕುಕ್ಕಿನಾರ್‌ ಕ್ಷೇತ್ರದ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ, ಕುಂಟಾಲಗಿರಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸಂಚಾಲಕ ತ್ಯಾಂಪಣ್ಣ ರೈ, ಧರ್ಮಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್‌ ಪಾದಲ್ಪಾಡಿ, ಕುರ್ನಾಡು ಪಂಚಾಯತ್‌ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ ಮೊದಲಾದವರು ಉಪಸ್ಥಿತರಿದ್ದರು.

ಧರ್ಮಜಾಗೃತಿ ವೇದಿಕೆಯ ಗೌರವ ಸಲಹೆಗಾರ ಟಿ.ಜಿ. ರಾಜಾರಾಮ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.  ಅಧ್ಯಕ್ಷ ನವೀನ್‌ ಪಾದಲ್ಪಾಡಿ ವಂದಿಸಿದರು. ಚಂದ್ರ ಬಾಳೆಪುಣಿ ಹಾಗೂ ದಿವ್ಯರಾಜ್‌ ಮುದುಂಗಾರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next