ಬೆಂಗಳೂರು: ಕೋವಿಡ್-19 ದಿಂದಾಗಿ ಕಳೆದ 3 ತಿಂಗಳ ಕಾಲ ಬೆಂಗಳೂರಿನ “ಸಾಯ್’ ಕೇಂದ್ರದಲ್ಲೇ ಇದ್ದು “ಮನೆ ಚಿಂತೆ’ ಗೊಳಗಾಗಿದ್ದ ಭಾರತದ ಪುರುಷರ ಹಾಗೂ ವನಿತಾ ಹಾಕಿ ಆಟಗಾರರಿಗೆ ಶುಕ್ರವಾರ ಬಿಡುಗಡೆ ಲಭಿಸಿದೆ. ಇವ ರೆಲ್ಲರಿಗೂ ಮನೆಗೆ ತೆರಳಲು ಸಾಯ್ ಅನುಮತಿ ನೀಡಿದ್ದು, ಒಂದು ತಿಂಗಳ ವಿಶ್ರಾಂತಿಯನ್ನೂ ನೀಡಿದೆ.
“ಶುಕ್ರವಾರ ಬೆಳಗ್ಗೆಯೇ ಬಹು ತೇಕ ಹಾಕಿ ಆಟಗಾರರು ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು.
ಆದರೆ ಕೆಲವು ಆಟಗಾರರು ಇಲ್ಲಿಯೇ ಉಳಿದಿದ್ದಾರೆ. ಇವರಲ್ಲಿ ಪ್ರಮುಖರೆಂದರೆ ಗೋಲ್ ಕೀಪರ್ ಸೂರಜ್ ಕರ್ಕೇರ, ವನಿತಾ ತಂಡದ ವಂದನಾ ಕಟಾರಿಯಾ, ಸುಶೀಲಾ ಚಾನು ಮತ್ತು ಲಾಲ್ರೆಮಿಯಾಮಿ. ಇವರ ಊರಿನಲ್ಲಿ ಕೋವಿಡ್-19 ಗಂಭೀರವಾಗಿರುವುದೇ ಇದಕ್ಕೆ ಕಾರಣ.
ಸೂರಜ್ ಕರ್ಕೇರ ಮುಂಬಯಿಯವರಾಗಿದ್ದು, ಅಲ್ಲಿನ್ನೂ ಕೊರೊನಾ ಅಪಾಯದ ಮಟ್ಟದಲ್ಲೇ ಇದೆ.