ಬೆಂಗಳೂರು: ಮಂಗಳವಾರ ಒಂದೇ ದಿನ ಲಕ್ಷ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಶೀಘ್ರವೇ ಈ ಪ್ರಮಾಣವನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
Advertisement
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಮಂಗಳವಾರ ಒಂದೇ ದಿನ 1,04,348 ಕೋವಿಡ್ ಟೆಸ್ಟ್ ನಡೆಸುವ ಮೂಲಕ ಈ ಹಿಂದೆ ಹೇಳಿದಂತೆ ನಿಗದಿತ ಗುರಿ ತಲುಪಿದ್ದೇವೆ.
ರಾಜ್ಯಾದ್ಯಂತ ಇರುವ 146 ಲ್ಯಾಬ್‌ಗಳ ಮೂಲಕ 55,690 ಆರ್‌ಟಿಪಿಸಿಆರ್ ಹಾಗೂ 48,658 ರ್ಯಾಪಿಡ್ ಟೆಸ್ಟ್ ನಡೆಸಲಾಗಿದೆ. ಶೀಘ್ರವೇ ಈ ಪ್ರಮಾಣವನ್ನು 1.5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದಿದ್ದಾರೆ