Advertisement

ಕಾಂಗ್ರೇಸ್ ಸ್ಥಿತಿ ಒಂದು ಮನೆ ನಾಲ್ಕು ಬಾಗಿಲು ಎಂಬಂತಾಗಿದೆ : ಆರ್. ಅಶೋಕ್

07:05 PM Jun 28, 2021 | Team Udayavani |

ಬೆಂಗಳೂರು :  “ನಮ್ಮಲ್ಲಿ ಒಂದೇ ಬಾಗಿಲು ಒಬ್ಬರೇ ನಾಯಕರು, ಕಾಂಗ್ರೆಸ್‍ನಲ್ಲಿ ಒಂದೇ ಮನೆ ನಾಲ್ಕು ಬಾಗಿಲು” ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು , “ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ, ಆದರೆ ಅದನ್ನು ಬಿಟ್ಟು ನಮ್ಮಲ್ಲಿ ಬಿದ್ದಿರುವ ನೊಣದ ಬಗ್ಗೆ ಮಾತನಾಡುತ್ತಾರೆ. ಮೊದಲು ನಿಮ್ಮ ತಟ್ಟೆಯನ್ನು ಗಂಜಲ ಹಾಕಿ ಶುದ್ದಿ ಮಾಡಿ. ಆಮೇಲೆ ಬೇರೆಯವರನ್ನು ಟೀಕೆ ಮಾಡಬಹುದು” ಎಂದು ಗುಡುಗಿದ್ದಾರೆ.

ದಲಿತರು ಸಿಎಂ ಆಗಬೇಕು ಅಂತ ಒಂದು ಬಾಗಿಲು, ಒಕ್ಕಲಿಗರು ಆಗಬೇಕು ಅಂತ ಒಂದು ಬಾಗಿಲು, ಹಿಂದುಳಿದ ವರ್ಗ ಆಗಬೇಕು ಅಂತ ಒಂದು ಬಾಗಿಲು, ಲಿಂಗಾಯತರು ಸಿಎಂ ಆಗಬೇಕು ಅಂತ ಮತ್ತೊಂದು ಬಾಗಿಲು. ಕಾಂಗ್ರೆಸ್‍ನ ಎಲ್ಲ ಗುಂಪುಗಳು ದೆಹಲಿ ತಲುಪುವುದಕ್ಕೆ ಪ್ರಾರಂಭಿಸಿದೆ. ಎರಡು ಗುಂಪುಗಳು ಈಗಾಗಲೇ ದೆಹಲಿಗೆ ಹೋಗಿವೆ, ಉಳಿದ ಎರಡು ಗುಂಪುಗಳು ಬೆಂಗಳೂರಿನಲ್ಲೇ ಇವೆ. ನಮ್ಮಲ್ಲಿ ಎಲ್ಲವೂ ಕ್ಲಿಯರ್ ಇದೆ, ಯಡಿಯೂರಪ್ಪ ನವರೇ ನಮ್ಮ ನಾಯಕರು” ಎಂದು ಹೇಳಿದರು.

ಮೂರನೇ ಕೋವಿಡ್ ಅಲೆ ನಿರ್ವಹಣೆಗೆ ಸಚಿವರ ಪ್ರತ್ಯೇಕ ಸಮಿತಿ ಮಾಡಲಾಗುವುದು. ಈಗ ಇರುವ ಕೋವಿಡ್ ಉಸ್ತುವಾರಿ ಸಚಿವರನ್ನು ಕೈ ಬಿಟ್ಟು ಹೊಸ ಸಮಿತಿ ರಚನೆ ಮಾಡುವಂತೆ ನಾನೇ ಸಿಎಂ ಯಡಿಯೂರಪ್ಪ ಅವರಿಗೆ ವಿನಂತಿ ಮಾಡಿದ್ದೇನೆ. ಈಗ ಇರುವ ಸಮಿತಿಯಲ್ಲಿ ನಾವೆಲ್ಲರೂ ಕೈ ಜೋಡಿಸಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ :ರಾಜ್ಯದಲ್ಲಿ ಅರೋಗ್ಯ ಸೇವೆಗೆ 4,000 ವೈದ್ಯರ ನೇಮಕ : ಸಚಿವ ಸುಧಾಕರ್

Advertisement

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನ್ಯೂಟ್ರಿಷನ್ ಕಿಟ್‍ಗಳು:

ದೇಶದ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಕರ್ನಾಟಕವು ಒಂದು ಮಾದರಿ ರಾಜ್ಯವಾಗಿದೆ ಎಂದು ಶ್ರೀ ಅಶೋಕ ಹೇಳಿದರು. “ಸಂಭವನೀಯ ಮೂರನೇ ಅಲೆಯನ್ನು ನಿಭಾಯಿಸಲು ನಾವು ಈಗಾಗಲೇ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದ್ದೇವೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಮೀಕ್ಷೆಯನ್ನು ನಾವು ಪ್ರಾರಂಭಿಸಿದ್ದೇವೆ.
ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರದ ಕಡೆಯಿಂದಲೇ ಪೌಷ್ಟಿಕ ಆಹಾರ ಒದಗಿಸಲು ಸಿದ್ಧತೆ ನಡೆಸಲಾಗಿದೆ” ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next