Advertisement

ಒಂದೇ ಮನೆ ಒಬ್ಬನೇ ಕಲಾವಿದ

11:25 AM Dec 01, 2017 | |

ಈ ಹಿಂದೆ “ಪುಟಾಣಿ ಸಫಾರಿ’ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈಗ ಮತ್ತೂಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಈ ಚಿತ್ರಕ್ಕೆ “ಕೈವಲ್ಯ’ ಎಂಬ ಹೆಸರನ್ನು ಇಟ್ಟಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಮುಗಿಸಲಾಗಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಮಾಧ್ಯಮದವರ ಎದುರು ಚಿತ್ರದ ಕುರಿತು ನಾಲ್ಕು ಮಾತು ಹೇಳ್ಳೋಕೆ ಅವರು ಚಿತ್ರತಂಡದವರೊಂದಿಗೆ ಬಂದಿದ್ದರು.

Advertisement

ಅಂದ ಹಾಗೆ, ಇದೊಂದು ಪ್ರಯೋಗಾತ್ಮಕ ಸಿನಿಮಾ. ಇಡೀ ಚಿತ್ರದಲ್ಲಿ ಒಂದೇ ಒಂದು ಪಾತ್ರವಿದ್ದು 15 ವರ್ಷಗಳ ಅವಧಿಯಲ್ಲಿ ಕಥೆ ನಡೆಯತ್ತದೆ. ಒಂದೇ ಮನೆಯಲ್ಲಿ 15 ವರ್ಷಗಳ ಕಾಲ ಇರಬೇಕೆಂಬ ಸವಾಲನ್ನು ಸ್ವೀಕರಿಸುವ ನಾಯಕ ಆ ಒಂದೇ ಮನೆಯಲ್ಲಿ ಹೇಗೆಲ್ಲಾ ಕಾಲ ಕಳೆಯುತ್ತಾನೆ ಎಂಬುದನ್ನು “ಕೈವಲ್ಯ’ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದಾರೆ ರವೀಂದ್ರ ವಂಶಿ. 1889ನಲ್ಲಿ ರಷ್ಯನ್‌ ಲೇಖಕ ಆ್ಯಂಟನ್‌ ಚೆಕಾವ್‌ ಬರೆದ “ದಿ ಬೆಟ್‌’ ಎಂಬ ಕಥೆಯನ್ನಾಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ನಟ ಕೈಲಾಷ್‌ ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಅವರು 3 ಗೆಟಪ್‌ಗ್ಳನ್ನು ಕೂಡ ಹಾಕಿದ್ದಾರೆ.

“ಕನ್ನಡದಲ್ಲಿ ಈಗಾಗಲೇ “ಶಾಂತಿ’ ತರಹದ ಒಂದೇ ಪಾತ್ರವಿರುವ ಚಿತ್ರ ಬಂದಿದೆ. ಆದರೆ, ಕಮರ್ಷಿಯಲ್‌ ಆಗಿ ಯಾರೂ ಪ್ರಯತ್ನ ಮಾಡಿರಲಿಲ್ಲ. ಇಲ್ಲಿ ಒಂದೇ ಪಾತ್ರವಲ್ಲ, ನಾಯಕನ ಪಾತ್ರದ ಜೊತೆ ಐದಾರು ಪಾತ್ರಗಳು ಬಂದುಹೋಗುತ್ತವೆ. ಆದರೆ, ಪ್ರೇಕ್ಷರ ಕಣ್ಣಿಗೆ ಕಾಣುವುದಿಲ್ಲ. ಅವರ ಧ್ವನಿ ಮಾತ್ರ ಕೇಳುತ್ತದೆ. ಈ ಕಥೆಯು ಈಗಾಗಲೇ ಹಲವಾರು ಭಾಷೆಗಳಲ್ಲಿ ಸಿನಿಮಾ ಆಗಿ ಹೊರಬಂದಿದೆ. ನಾಯಕನಿಗೆ ಮೂರು ಶೇಡ್‌ಗಳು ಇರಲಿದು,ಒಂದೇ ಮನೆಯಲ್ಲಿ ಇಡೀ ಕಥೆ ನಡಯುತ್ತದೆ’ ಎಂದು
ಹೇಳಿದರು.

ನಂತರ ಮಾತನಾಡಿದ್ದು ಕೈಲಾಶ್‌ ನೀನಾಸಂ. “ರವೀಂದ್ರ ಅವರು ಆರಂಭದಲ್ಲಿ ಈ ಕಥೆ ಹೇಳಿದಾಗ ನಾನೇ ಆಕ್ಟ್ ಮಾಡಬೇಕು ಅನ್ನಿಸಿತು. ಅಷ್ಟರಲ್ಲಿ ನಾಯಕನ ಪಾತ್ರಕ್ಕೆ ನಿನ್ನನ್ನೇ ಸೆಲೆಕ್ಟ್ ಮಾಡಿದ್ದೇನೆ ಎಂದು ಹೇಳಿದಾಗ ಖುಷಿ ಆಯ್ತು. ಒಬ್ಬನೇ ನಟನೆ ಮಾಡುವುದು ಸ್ವಲ್ಪ ಸುಸ್ತಾಯಿತು. ಈಗ ಜನ ಮೆಚ್ಚಿದಾಗ ಶ್ರಮ ಸಾರ್ಥಕ ಎನಿಸುತ್ತದೆ’ ಎಂದು ಹೇಳಿದರು. ಚಿತ್ರದಲ್ಲಿ ಮೇಕಪ್‌ ಪ್ರಧಾನ ಪಾತ್ರ ವಹಿಸುತ್ತದೆ ಮತ್ತು ಉಮಾಮಹೇಶ್ವರ್‌ವೆುಕಪ್‌ ಮಾಡಿದ್ದಾರೆ. ವೀರ್‌ ಸಮರ್ಥ್ ಸಂಗೀತ ಸಂಯೋಜಿಸಿದ್ದು, ಪರಂ ಗುಬ್ಬಿ ಎನ್ನುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next