Advertisement

ದಕ್ಷಿಣ ಆಫ್ರಿಕಾಕ್ಕೆ ಏಕದಿನ ಸರಣಿ

01:00 AM Feb 01, 2019 | Team Udayavani |

ಕೇಪ್‌ಟೌನ್‌: ಕೊನೆಯ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ಥಾನವನ್ನು 7 ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ ಏಕದಿನ ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿದೆ.

Advertisement

ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 8 ವಿಕೆಟಿಗೆ 240 ರನ್‌ ಗಳಿಸಿದರೆ, ದಕ್ಷಿಣ ಆಫ್ರಿಕಾ 40 ಓವರ್‌ಗಳಲ್ಲಿ 3 ವಿಕೆಟಿಗೆ 241 ರನ್‌ ಬಾರಿಸಿ ವಿಜಯಿಯಾಯಿತು. ಕ್ವಿ ಂಟನ್‌ ಡಿ ಕಾಕ್‌ 83, ನಾಯಕ ಫಾ ಡು ಪ್ಲೆಸಿಸ್‌ ಅಜೇಯ 50 ರನ್‌ ಬಾರಿಸಿ ತಂಡಕ್ಕೆ ಸುಲಭ ಜಯ ತಂದಿತ್ತರು. ಪಾಕಿಸ್ಥಾನ ಪರ ಫ‌ಕಾರ್‌ ಜಮಾನ್‌ 70 ರನ್‌ ಹೊಡೆದರು. ಕೊನೆಯಲ್ಲಿ ಇಮಾದ್‌ ವಾಸಿಮ್‌ 31 ಎಸೆತಗಳಿಂದ ಅಜೇಯ 47 ರನ್‌ ಬಾರಿಸಿ ಪಾಕಿಸ್ಥಾನದ ಮೊತ್ತವನ್ನು ವಿಸ್ತರಿಸುವಲ್ಲಿ ನೆರವಾದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-50 ಓವರ್‌ಗಳಲ್ಲಿ 240. ದಕ್ಷಿಣ ಆಫ್ರಿಕಾ-40 ಓವರ್‌ಗಳಲ್ಲಿ 3 ವಿಕೆಟಿಗೆ 241.

Advertisement

Udayavani is now on Telegram. Click here to join our channel and stay updated with the latest news.

Next