ಸ್ವಾತಿ ಮಳೆ ತಡವಾಗಿ ಶುರುವಾಗಿದೆ… ನೀವು ತಡ ಮಾಡ್ಬೇಡಿ… ಬೇಗ ಸೇರಿಕೊಳ್ಳಿ! ಬೆಂಗಳೂರಿನ ಬ್ಯುಸಿ ಲೈಫಿನ ಮಧ್ಯೆ ನಿಂತು ಹೀಗೊಂದು ಕರೆಕೊಡುತ್ತಿರೋದು “ಮಣ್ಮಯಿ’ ಎಂಬ ಸಂಸ್ಥೆ. ಅವರು ಕರೆದರು ಅಂತ ನೀವೇನಾದ್ರೂ ಹೋದ್ರೆ, ನಿಮ್ಮ ಕಣ್ಣೆದುರು ಒಂದು ಮಾಯಾಲೋಕವನ್ನು ನೋಡಿಬರಬಹುದು.
ಅಲ್ಲೊಂದು ಸೊಗಸಾದ ಲಾಂಗ್ ಡ್ರೈವ್, ಸ್ವಾತಿ ಮಳೆಯ ಕೆಸರಿನಲ್ಲಾಟ, ರಾತ್ರಿಯ ಚುಮುಚುಮು ಚಳಿಯಲ್ಲಿ ಬೆಳದಿಂಗಳ ಹಬ್ಬದೂಟ, ಒಂದು ಟೆಂಟ್ ಸಿನಿಮಾ, ಸಿರಿಧಾನ್ಯಗಳ ತೋಟದಲ್ಲಿ ಕಾಲ್ನಡಿಗೆ, ಬಗೆಬಗೆಯ ಪಕ್ಷಿಗಳ ಕಲರವ, ರೈತರೊಟ್ಟಿಗೆ ಮಾತುಕತೆ- ಹರಟೆ, ಆ ಹಳ್ಳಿಯ ದೇಸೀ ಬೀಜ ಬ್ಯಾಂಕ್‌ನಲ್ಲಿ ನಿಮ್ಮದೂ ಒಂದು ಖಾತೆ ತೆರೆಯುವ ಯೋಗ, ದೇಸಿ ಹಸುಗಳೊಂದಿಗೆ ಒಂದೊಂದು ಸೆಲ್ಫಿ…
ಆ ಹಸಿರಿನ ಸ್ವರ್ಗದಲ್ಲಿ ಸಂಭ್ರಮಿಸಲು ಇನ್ನೂ ಸಾಕಷ್ಟು ಸಂಗತಿಗಳು ಜತೆಗೂಡುತ್ತವೆ. ಈ ವಿಸ್ಮಯಗಳೆಲ್ಲ ಬಿಳಿಗಿರಿ ರಂಗನ ಬೆಟ್ಟದ ತಪ್ಪಲಿನಲ್ಲಿರುವ “ಅಮೃತಭೂಮಿ’ಯಲ್ಲಿ ಘಟಿಸಲಿವೆ. ಅಲ್ಲಿನ 80 ಎಕರೆ ಕೃಷಿ ಭೂಮಿಯಲ್ಲಿ ನೀವೂ ಒಂದು ದಿನದ ರೈತರಾಗಲು “ಮಣ್ಮಯಿ’ ಅವಕಾಶ ಕಲ್ಪಿಸುತ್ತಿದೆ. ಅಲ್ಲಿ ನಗರದ ಮಂದಿಯನ್ನು, ಹಳ್ಳಿಯ ಮಂದಿಯನ್ನೂ ಸೇರಿಸಿ,
ಪರಸ್ಪರ ಎರಡು ಸಂಸ್ಕೃತಿಯ ಮಿಲನ ಮಾಡಿಸಲು “ಮಣ್ಮಯಿ’ ಹೊರಟಿದೆ. ಒಂದು ದಿನ ಮಟ್ಟಿಗೆ ಬೆಟ್ಟದ ಬುಡದಲ್ಲಿ ಕಳೆದು, ರೈತರೊಂದಿಗೆ ಅನುಭವ ಹಂಚಿಕೊಳ್ಳುವ ಯೋಗ ನಿಮ್ಮದಾಗಲಿದೆ. ಆಸಕ್ತರು, ನವೆಂಬರ್ 4ರ ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ತೆರಳಬೇಕಾಗುತ್ತದೆ. ಮೊದಲ 50 ಮಂದಿಗೆ ಮಾತ್ರ ಪ್ರವೇಶ.
ಎಲ್ಲಿ?: ಅಮೃತಭೂಮಿ, ಹೊಂಡರಬಾಳು, ಚಾಮರಾಜನಗರ
ಯಾವಾಗ?: ನವೆಂಬರ್ 4- 5, ಮಧ್ಯಾಹ್ನ 12.30 ಶುರು
ವೆಬ್‌ಸೈಟ್: manmayeeblr.blogspot.in
ಸಂಪರ್ಕ: 9611105029, 9743731223