Advertisement

ಕಾರ್ಕಳದ ಮಹಿಳೆಯ ಕಣ್ಣೀರ ಕಥೆಗೆ ಸ್ಪಂದನೆ: ಗೋಪಾಲಕರ ರಕ್ಷಣೆಗೆ ಸರಕಾರ ಬದ್ಧ: ಸಚಿವ ಸುನಿಲ್‌

01:07 AM Jan 12, 2022 | Team Udayavani |

ಕಾರ್ಕಳ:ಬದುಕಿಗೆ ಗೋವುಗಳನ್ನೇ ನಂಬಿರುವ ಕರಿಯಕಲ್ಲು ಕಜೆ ನಿವಾಸಿ ಯಶೋದಾ ಆಚಾರ್ಯ ಅವರ 16 ಗೋವುಗಳನ್ನು ಒಂದೂವರೆ ವರ್ಷದ ಅಂತರದಲ್ಲಿ ಕದ್ದೊಯ್ದ ಘಟನೆ ಬಗ್ಗೆ ಉದಯವಾಣಿಯಲ್ಲಿ ಪ್ರಕಟವಾದ ವರದಿ ನನ್ನ ಕಣ್ತೆರೆಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಯಶೋದಾ ನಿವಾಸಕ್ಕೆ ಮಂಗಳ ವಾರ ಭೇಟಿ ನೀಡಿ ಸಾಂತ್ವನ ಹೇಳಿ ಅವರು ಮಾತನಾಡಿದರು. ಕೃತ್ಯದಲ್ಲಿ ಸ್ಥಳೀಯರು ಶಾಮೀಲಾಗಿರುವ ಶಂಕೆ ಇದ್ದು ಶೀಘ್ರವೇ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

ಕಾನೂನು ಕ್ರಮಕ್ಕೆ ಸೂಚನೆ
ಯಾರು ಜೀವನೋಪಾಯಕ್ಕಾಗಿ ಗೋವುಗಳನ್ನು ಸಾಕಿಕೊಂಡಿದ್ದಾರೋ ಅವರೆಲ್ಲರ ರಕ್ಷಣೆಗೆ ಸರಕಾರವಿದೆ. ಗೋಕಳವಿನ ಪ್ರಕರಣಗಳನ್ನು ಗಂಭೀ ರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಾನೂ ನಿನಡಿ ಶಿಕ್ಷೆ ವಿಧಿಸಲು ಪೊಲೀಸರಿಗೆ ಸೂಚಿಸಿರುವೆ ಎಂದು ಹೇಳಿದರು.

ಕಟ್ಟುನಿಟ್ಟಿನ ಜಾರಿಗೆ ತೊಡಕು
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿದ್ದರೂ ಕೋರ್ಟ್‌ ತಡೆ ಇರುವ ಕಾರಣ ಕಟ್ಟುನಿಟ್ಟಿನ ಜಾರಿ ಸಾಧ್ಯವಾಗುತ್ತಿಲ್ಲ. ಮುಂದೆ ಸರಿಯಾಗಲಿದೆ ಎಂದರು.

ಹಲವರಿಂದ ನೆರವಿನ ಭರವಸೆ
ಯಶೋದಾಗೆ ನೆರವು ನೀಡಲು ಪಕ್ಷ ಭೇದ ಮರೆತು ಹಲವರು ಮುಂದೆ ಬಂದಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಉದಯ ಆಚಾರ್‌, ಸಾಮಾಜಿಕ ಕಾರ್ಯಕರ್ತ ಸುನಿಲ್‌ ಬಜಿಲಕೇರಿ ಸೇರಿದಂತೆ ಹಲವರು ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದರು. ವಿವಿಧ ಸಂಘಟನೆಗಳ ಮುಖಂಡರು ಭೇಟಿ ನೀಡಿ ವಿವಿಧ ರೂಪದಲ್ಲಿ ನೆರವಿನ ಭರವಸೆ ನೀಡಿದ್ದಾರೆ.

Advertisement

ಇದನ್ನೂ ಓದಿ:ರಾಜ್ಯದಲ್ಲಿಂದು 14,473 ಕೋವಿಡ್ ಪ್ರಕರಣ ಪತ್ತೆ, 5 ಸಾವು: ಪಾಸಿಟಿವಿಟಿ ದರ ಶೇ.10.30

ಗೋಪ್ರೇಮಿಗಳಿಂದ ಒಂದೇ ದಿನ 4 ಹಸು ಕೊಡುಗೆ
ಯಶೋದಾ ಸಂಕಷ್ಟಕ್ಕೆ ಮರು ಗಿರುವ ಗೋ ಪ್ರೇಮಿಗಳು ಮಂಗಳ ವಾರ ಹಾಲು ನೀಡುವ 3 ಜೊತೆ ಹಸು-ಕರುಗಳು ಮತ್ತು 1 ಹಸುವನ್ನು ಕೊಡುಗೆಯಾಗಿ ನೀಡಿದ್ದಾರೆ.

ಮೊದಲಿಗೆ ಸಚಿವ ಸುನಿಲ್‌ಕುಮಾರ್‌ ವತಿಯಿಂದ ಮತ್ತು ಮಿಯಾರು ಬಿಜೆಪಿ ಗ್ರಾ. ಸಮಿತಿ ವತಿಯಿಂದ ಹಸು-ಕರು ಗಳನ್ನು ಹಸ್ತಾಂ ತರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಗಿರೀಶ್‌ಅಮೀನ್‌, ಬಿಜೆಪಿ ಅಧ್ಯಕ್ಷ ಪ್ರಶಾಂತ ಪೂಜಾರಿ, ಎಪಿಎಂಸಿ ನಾಮನಿರ್ದೇಶನ ಸದಸ್ಯ ಪ್ರಕಾಶ್‌ ಬಲಿಪ, ಗ್ರಾ.ಪಂ. ಸದಸ್ಯರಾದ ನವೀನ, ಶೇಖರ್‌ ದೇವಾಡಿಗ, ಶೋಭಾ,ಜಿ.ಪಂ. ಮಾಜಿ ಸದಸ್ಯೆ ದಿವ್ಯ ಗಿರೀಶ್‌ ಅಮೀನ್‌, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರಾಜೇಶ್ವರಿ ರಾವ್‌, ಥಾಮರ್‌ ಮೂಲ್ಯ, ಪ್ರಮುಖರಾದ ಸತ್ಯೇಂದ್ರ ನಾಯಕ್‌ ಮಂಜುನಾಥ ನಾಯಕ್‌, ಅರವಿಂದ ಪೈ, ಗಿರೀಶ್‌, ಪೈ ಉಪಸ್ಥಿತರಿದ್ದರು.

ವಿಹಿಂಪ-ಬಜರಂಗದಳ ಕೊಡುಗೆ
ವಿಹಿಂಪ-ಬಜರಂಗದಳ ವತಿ ಯಿಂದ ನೀಡಲಾದ ಹಾಲು ನೀಡುವ ಹಸು-ಕರುವನ್ನು ವಿಹಿಂಪ ತಾಲೂಕು ಅಧ್ಯಕ್ಷ ಭಾಸ್ಕರ ಕೋಟ್ಯಾನ್‌ ಹಸ್ತಾಂತ ರಿಸಿದರು. ಮಿಯಾರು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಕಿಶೋರ್‌ ಶೆಟ್ಟಿ, ನಿರ್ದೇಶಕ ರಾಮಪ್ಪ, ಬಜರಂಗದಳ ರಾಜ್ಯ ಸಂಚಾಲಕ ಸುನಿಲ್‌ ಕೆ.ಆರ್‌., ಆರೆಸ್ಸೆಸ್‌ನ ಅರವಿಂದ, ವಿಹಿಂಪ ಉಪಾಧ್ಯಕ್ಷ ಜಗದೀಶ ಸಾಣೂರು, ಕಾರ್ಯದರ್ಶಿ ಸುಧೀರ್‌, ಸಂಚಾಲಕ ಚೇತನ ಪೇರಲ್ಕೆ, ಜಿಲ್ಲಾ ಉಪಾಧ್ಯಕ್ಷ ಅಶೋಕ ಪಾಲಡ್ಕ ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್‌ ಕೊಡುಗೆ
ಜಿಲ್ಲಾ ಯುವ ಕಾಂಗ್ರೆಸ್‌ ಮತ್ತು ಕಾರ್ಕಳ ಯುವ ಕಾಂಗ್ರೆಸ್‌ ವತಿಯಿಂದ 1 ಹಸುವನ್ನು ನೀಡಲಾ ಗಿದೆ. ಸರಕಾರವು ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆಯೂ ಮುಖಂಡರು ಆಗ್ರಹಿಸಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ದೀಪಕ್‌ ಕೋಟ್ಯಾನ್‌, ತಾಲೂಕು ಅಧ್ಯಕ್ಷ ಯೋಗೀಶ್‌ ಇನ್ನಾ, ಮುಖಂಡರಾದ ಸದಾಶಿವ ದೇವಾಡಿಗ, ಬಿಪಿನ್‌ ಚಂದ್ರಪಾಲ್‌, ಸುಧಾಕರ ಶೆಟ್ಟಿ, ರವಿ ಶಂಕರ್‌ ಶೇರಿಗಾರ್‌, ತಾರಾನಾಥ ಕೋಟ್ಯಾನ್‌, ಪ್ರದೀಪ್‌ ಬೇಲಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next