Advertisement

ಅಚ್ಚಡ: ಕಾಂಕ್ರೀಟ್‌ ರಸ್ತೆ ಅಡಿಭಾಗದ ಮಣ್ಣು ಕುಸಿತ

06:25 AM Jul 10, 2018 | Team Udayavani |

ಕಟಪಾಡಿ: ಅಚ್ಚಡ- ಮೂಡಬೆಟ್ಟು ಕುಕ್ರಾಡಿ ಸಂಪರ್ಕ ಕಲ್ಪಿಸುವ ಕಾಂಕ್ರೀಟ್‌ ರಸ್ತೆಯೊಂದರ ಅಡಿ ಭಾಗದಲ್ಲಿ ನೆರೆ ನೀರಿನ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಮಣ್ಣು ಕುಸಿದಿದ್ದು, ಸಂಪರ್ಕ ರಸ್ತೆ ಕಡಿತದ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ.

Advertisement

ಈ ಭಾಗದಲ್ಲಿ ಶಾಲಾ ವಾಹನವೂ ಸಂಚರಿಸುತ್ತಿದ್ದು ಮತ್ತು ಕೂಕ್ರಾಡಿ-ಮೂಡಬೆಟ್ಟು ಭಾಗದ ಸುಮಾರು ಎಪ್ಪತ್ತಕ್ಕೂ ಅಧಿಕ ಮನೆಗಳಿಗೆ ಸಂಪರ್ಕವನ್ನು ಕಲ್ಪಿಸುವ ರಸ್ತೆ ಇದಾಗಿದೆ.ಬಹು ಬೇಡಿಕೆಯುಳ್ಳ ಈ ರಸ್ತೆಯನ್ನು ಸುಸ್ಥಿತಿಯಲ್ಲಿರಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದು, ಜನ ಪ್ರತಿನಿಧಿಗಳು, ಅಧಿಕಾರಿಗಳು ಇದನ್ನು ಪರಿಶೀಲಿಸಿದ್ದಾರೆ.

ಈ ಸಂದರ್ಭ ಪಿ.ಡಿ.ಒ. ಇನಾಯತುಲ್ಲಾ ಬೇಗ್‌, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಪಂಚಾಯತ್‌ ಸದಸ್ಯ ರಾಜೇಶ್‌ ಪೂಜಾರಿ, ಸ್ಥಳೀಯರಾದ ವಸಂತ ಶೇರಿಗಾರ್‌, ವಸಂತ ಶೆಟ್ಟಿ, ಚಂದ್ರಶೇಖರ ಆಚಾರ್ಯ, ಕೃಷ್ಣ ಸೇರಿಗಾರ, ಶೇಖರ ಪೂಜಾರಿ ಉಪಸ್ಥಿತರಿದ್ದರು.

ಘನವಾಹನ ನಿಲುಗಡೆಗೊಳಿಸ ಬೇಕಾಗಿದೆ 
ಪಂಚಾಯತ್‌ ರಸ್ತೆ ಇದಾಗಿದೆ. ಕೆಳಗಿನಿಂದ ಫಿಲ್‌ ಮಾಡಿ, ಬದಿಗೆ ದಂಡೆ ಕಟ್ಟಿ ರಸ್ತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಗುತ್ತಿಗೆದಾರರಿಗೆ ಈ ಬಗ್ಗೆ ಸೂಚಿಸಲಾಗಿದೆ. ಕೆಲದಿನಗಳ ಕಾಲ ಘನವಾಹನ ಸಂಚಾರವನ್ನು ನಿಲುಗಡೆಗೊಳಿಸಬೇಕಾಗಿದೆ .
– ಇನಾಯತುಲ್ಲಾ ಬೇಗ್‌, ಪಿ.ಡಿ.ಒ. ಕಟಪಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next