ಮುಂಬಯಿ: ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ವಿಜಯದ ಅನಂತರ ರಾಜ್ಯದಲ್ಲಿ ವಿಧಾನಸಭೆ ಚರ್ಚೆ ಆರಂಭವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆಯ ಮೈತ್ರಿಯು ತಮ್ಮ ವರ್ಚಸ್ಸು ಕಾಯ್ದುಕೊಳ್ಳುವ ಮೂಲಕ ಮತ್ತೂಮ್ಮೆ ಮೈತ್ರಿ ಸರಕಾರ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಲೋಕಸಭೆಯ ಚುನಾವಣೆಯಲ್ಲಿ 48 ಸೀಟುಗಳ ಪೈಕಿ 41 ಸೀಟನ್ನು ಪಡೆದ ಅನಂತರ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಈ ಗೆಲುವಿನ ರಥ ಮುಂದುವರಿಸುವ ಮೂಲಕ ಮತ್ತೂಮ್ಮೆ ಫಡ್ನವೀಸ್ ನೇತೃತ್ವದ ಮೈತ್ರಿ ಸರಕಾರ ರಾಜ್ಯದಲ್ಲಿ ರಚನೆಯಾಗಲಿದೆ ಎನ್ನುವ ರಾಜಕೀಯ ಚರ್ಚೆ ಆರಂಭಗೊಂಡಿದೆ. ರಾಜ್ಯದಲ್ಲಿಯ 48 ಲೋಕಸಭೆ ಸೀಟುಗಳ ಪೈಕಿ ಬಿಜೆಪಿ 23 ಹಾಗೂ ಶಿವಸೇನೆ 18 ಸೀಟುಗಳ ಗೆಲುವು ಸಾಧಿಸಿತು. ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ವರೆಗೆ ರಾಜ್ಯದಲ್ಲಿ ಸರಕಾರ ಸುರಕ್ಷಿತ ಆಡಳಿತ ನಡೆದರೆ ಮತ್ತೂಮ್ಮೆ ಮೈತ್ರಿ ಸರಕಾರ ರಚನೆ ಆಗುವುದು ಎಂದು ಹೇಳಲಾಗಿದೆ.
2019ರ ಲೋಕಸಭೆ ಚುನಾವಣೆ ಯಲ್ಲಿ ಬಿಜೆಪಿ ಶಿವಸೇನೆ ಮೈತ್ರಿಗೆ ದೊರೆತ ಮತಗಳ ಕಡೆಗೆ ಗಮನ ಹರಿಸಿದಾಗ 288 ಸದಸ್ಯತ್ವದ ವಿಧಾನಸಭೆಯಲ್ಲಿ ಮೈತ್ರಿಯು 226 ಸೀಟುಗಳಲ್ಲಿ ಸಫಲತೆ ದೊರೆಯಬಹುದು. ಇದರಿಂದ ಮತ್ತೂಮ್ಮೆ ಫಡ್ನವೀಸ್ ನೇತೃತ್ವದ ಸರಕಾರ ರಚನೆ ಆಗಲಿದೆ ಎನ್ನಲಾಗುತ್ತಿದೆ. ಅದೇ ಲೋಕಸಭೆ ಚುನಾವಣೆಯಲ್ಲಿ ಒಂದು ಸೀಟು ಪಡೆದ ಕಾಂಗ್ರೆಸ್, 4 ಸೀಟು ಪಡೆದ ಎನ್‌ಸಿಪಿ, ತಲಾ ಒಂದೊಂದು ಸೀಟು ಗೆಲುವುಪಡೆದ ಎಂಐಎಂ ಗಳ ಮಹಾಮೈತ್ರಿಯೂ ವಿಧಾನಸಭೆ ಚುನಾವಣೆಯಲ್ಲಿ 56 ಸೀಟುಗಳಲ್ಲಿ ಗೆಲುವು ಪಡೆಯಬಹುದು. ಅದೇ ಪಕ್ಷೇತರದ ಖಾತೆಗೆ 6 ಸೀಟು ಸಿಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ.
ದೇಶದ ಆರ್ಥಿಕ ರಾಜಧಾನಿ ಮುಂಬಯಿಯ 6 ಲೋಕಸಭೆ ಕ್ಷೇತ್ರಗಳಲ್ಲಿ 2014ರಂತೆ 2019 ರಲ್ಲೂ 6 ಸೀಟುಗಳಲ್ಲಿ ಮೈತ್ರಿ ಗೆಲುವು ಸಾಧಿಸಿದೆ. ಇಲ್ಲಿಯ 36 ವಿಧಾನಸಭೆ ಕ್ಷೇತ್ರಗಳ ಪೈಕಿ 31ಸೀಟುಗಳನ್ನು ಮೈತ್ರಿಯು ಪಡೆದಿದೆ. ಅದೇ, ಮಹಾಮೈತ್ರಿ ಕೇವಲ 5 ಸೀಟುಗಳನ್ನು ಪಡೆದಿತ್ತು. ಲೋಕಸಭೆ ಚುನಾವಣೆಯಲ್ಲಿ ದೊರೆತ ಮತಗಳಿಂದ ಮೈತ್ರಿಯು ಪ್ರಬಲ್ಯ ಸಾಧಿಸಿದೆ.
2014ರ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿಗೆ 122 ಹಾಗೂ ಶಿವಸೇನೆಗೆ 63 ಸೀಟುಗಳನ್ನು ಪಡೆ ದಿತ್ತು, ಅದೇ ಕಾಂಗ್ರೆಸ್ 42 ಹಾಗೂ ಎನ್‌ಸಿಪಿ 41, ಪಕ್ಷೇತರ 7 ಹಾಗೂ ಸಣ್ಣ ಪಕ್ಷಗಳು ಒಟ್ಟು 13 ಸ್ಥಾನಗಳನ್ನು ಪಡೆದಿತ್ತು ಜಯ ಗಳಿಸಿತ್ತು.