Advertisement
1. ಎಂಟೆ ಕೇರಳಂಬೆಂಗಳೂರಿನ ಹಳೆ ಕೇರಳ ರೆಸ್ಟೋರೆಂಟುಗಳಲ್ಲಿ ಇದೂ ಒಂದು. ಒಳಕ್ಕೆ ಕಾಲಿಡುತ್ತಿದ್ದಂತೆ ಕೇರಳದ ಸಾಂಪ್ರದಾಯಿಕ ದೊಡ್ಡ ಮನೆಯೊಂದರೊಳಗೆ ಕಾಲಿಟ್ಟ ಅನುಭವವಾಗುತ್ತದೆ. ಗೋಡೆ ಮೇಲೆ ತೂಗು ಹಾಕಿರುವ ಪೇಂಟಿಂಗುಗಳು. ಮಧ್ಯದಲ್ಲಿ ದೊಡ್ಡ ದೀಪದ ಸ್ತಂಭ, ಮರದ ಕೆತ್ತನೆಗಳು ಕೇರಳದ ನೆನಪು ತರಿಸುತ್ತವೆ. ಇನ್ನು ಓಣಂ ಸ್ಪೆಷಲ್ ಮೆನುವಂತೂ ಬಾಯಲ್ಲಿ ನೀರು ತರಿಸುತ್ತದೆ. ಕಡೆಯಲ್ಲಿ ನೀಡುವ ರುಚಿಕರ ಪಾಯಸ ಕುಡಿದಾಗಲೇ ಓಣಂ ಹಬ್ಬದೂಟ ಪೂರ್ತಿಯಾಗುವುದು. ಅಂದ ಹಾಗೆ ಮುಂಚಿತವಾಗಿ ಬುಕ್ಕಿಂಗ್ ಮಾಡಿ ಹೋಗುವುದು ಸೂಕ್ತ.
ಎಲ್ಲಿ?: ಎಂಟೆ ಕೇರಳಂ, ಹಲಸೂರು ರಸ್ತೆ, ಸುಲ್ತಾನ್ ಜುವೆಲರ್ ಬಳಿ
ಸಂಪರ್ಕ: 080- 4113 3707
ನಗರದಲ್ಲಿ ವಾಸಿಸುತ್ತಿರುವ ಕೇರಳ ಕುಟುಂಬಗಳು ಇಷ್ಟಪಡುವ ರೆಸ್ಟೋರೆಂಟಿದು. ಕೀರಳದ ಅಡುಗೆಯನ್ನು ಅಪ್ಪಟ ಕೇರಳೀಯ ಶೈಲಿಯಲ್ಲೇ ಸಾಂಪ್ರದಾಯಿಕವಾಗಿ ತಯಾರಿಸುತ್ತದೆ ಎನ್ನುವುದು ಈ ರೆಸ್ಟೋರೆಂಟಿನ ಹೆಗ್ಗಳಿಕೆ. ಕಣ್ಣಿಗೆ ಹಿತ ನೀಡುವ ಮಂದ ಬೆಳಕಿನಲ್ಲಿ ಆಪ್ತರೊಂದಿಗೆ ಹರಟುತ್ತಾ ಓಣಂ ವಿಶೇಷ ಖಾದ್ಯಗಳನ್ನು ಸವಿಯುವುದು ಒಳ್ಳೆಯ ಅನುಭವ.
ಎಲ್ಲಿ?: ಕುಮಾರಕೋಮ್, 14ನೇ ಮುಖ್ಯರಸ್ತೆ, 4ನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಎದುರು, ಎಚ್‌ಎಸ್‌ಆರ್ ಲೇಔಟ್
ಸಂಪರ್ಕ: 7349272227 3. ಅಂಜೂಸ್ ಕೆಫೆ
ರಂಗಶಂಕರಕ್ಕೆ ನಾಟಕ ನೋಡಲು ಬಂದವರೆಲ್ಲರೂ ತಾವು ನೋಡಿದ ನಾಟಕ ಎಷ್ಟು ಚೆನ್ನಾಗಿತ್ತು ಎಂದು ಹೇಳುವುದರ ಜೊತೆಗೆ ಅಲ್ಲಿನ ಕೆಫೆಯಲ್ಲಿ ಸಿಕ್ಕ ಸಾಬೂದಾನ ವಡೆ, ಟೀಯ ರುಚಿಯನ್ನು ಕೂಡಾ ನೆನಪಿಸಿಕೊಂಡು ಮೆಚ್ಚುಗೆ ಸೂಚಿಸುತ್ತಾರೆ. ರಂಗಶಂಕರದಲ್ಲಿ ಇರುವ ಕೆಪೆಯೇ ಅಂಜೂಸ್ ಕೆಫೆ. ರಂಗಾಸಕ್ತರನ್ನು ಸೆಳೆಯುವ ಜಾಗದಲ್ಲಿ ಯಶಸ್ವಿಯಾಗಿ ಕೆಫೆ ನಡೆಸುವುದು ಸುಲಭದ ಮಾತಲ್ಲ. ಅದರಲ್ಲೂ ಕೇರಳ ಶೈಲಿಯ ಕೆಫೆ! ಓಣಂ ಸಮಯದಲ್ಲಿ ಕೆಫೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟುತ್ತದೆ. ಕೇರಳದ ಸಾಂಪ್ರದಾಯಿಕ ಓಣಂ ಹಬ್ಬದೂಟವನ್ನು ಆಂಜೂಸ್ ಕೆಫೆ ಗ್ರಾಹಕರಿಗೆ ಬಡಿಸುತ್ತದೆ
ಎಲ್ಲಿ?: ಅಂಜೂಸ್ ಕೆಫೆ, ರಂಗಶಂಕರ, 8ನೇ ಕ್ರಾಸ್, 23ನೇ ಮುಖ್ಯರಸ್ತೆ, ಜೆ.ಪಿ.ನಗರ 2ನೇ ಹಂತ
ಸಂಪರ್ಕ:
Related Articles
ಇಲ್ಲಿನ ಕೇರಳದ ಖಾದ್ಯಗಳನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ ನಿಜ, ಅದರಷ್ಟೇ ಮೆಚ್ಚುಗೆಯನ್ನು ಪಡೆದಿವೆ ಇಲ್ಲಿನ ಶರಬತ್ತುಗಳು. ನನ್ನರಿ ಶರಬತ್ತು, ಚುಕ್ ಕಾಪಿಯನ್ನೊಳಗೊಂಡಂತೆ ಹಲವೂ ಬಗೆಗಳ ಶರಬತ್ತುಗಳು ಇಲ್ಲಿ ಸಿಗುತ್ತವೆ. ಕ್ರೈಸ್ಟ್ ಕಾಲೇಜಿನ ಬಳಿಯಿರುವುದರಿಂದ ಈ ರೆಸ್ಟೋರೆಂಟು ಅಲ್ಲಿನ ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ.
ಎಲ್ಲಿ?: ಮಲಬಾರ್ ಬೇ, ನಂ. 43, ಕೃಷ್ಣಾನಗರ, ಎಸ್.ಜಿ. ಪಾಳ್ಯ ರಸ್ತೆ, ಕ್ರೈಸ್ಟ್ ಕಾಲೇಜು ಬಳಿ, ಬಿ.ಟಿ.ಎಂ. ಲೇಔಟ್
ಸಂಪರ್ಕ: 7829999500
Advertisement
5. ಚೇಟಾಸ್ ಕಿಚನ್ ಮಲಯಾಳಂನಲ್ಲಿ “ಚೇಟಾ’ ಎಂದರೆ “ಅಣ್ಣ’. ಅದರ ಸ್ಪಷ್ಟಾರ್ಥಕ್ಕೆ ಹೋಗದೆ ಚೇಟಾ ಎನ್ನುವ ಪದ ಅಲ್ಲಿ ತಮಗೆ ಆತ್ಮೀಯರಾದವರನ್ನು ಕರೆಯಲು ಬಳಸುತ್ತಾರೆ. ಹೆಸರಿಗೆ ತಕ್ಕಂತೆ ಇಲ್ಲಿ ಸಿಬ್ಬಂದಿ ವರ್ಗ ಗ್ರಾಹಕ ಸ್ನೇಹಿಯೆಂದು ಹೆಸರು ಪಡೆದಿದೆ. ಈ ಹೋಟೆಲ್‌ನ ವ್ಯಾಪ್ತಿ ಅಷ್ಟೇನೂ ದೊಡ್ಡದಲ್ಲದಿದ್ದರೂ ಕೇರಳ ಶೈಲಿಯ ಅಡುಗೆಯನ್ನು ಅಲ್ಲಿನದೇ ಆತ್ಮೀಯತೆಯಿಂದ ಬಡಿಸುವುದರಿಂದ ಗ್ರಾಹಕರು ಪದೇ ಪದೆ ಇಲ್ಲಿಗೆ ಭೇಟಿ ನೀಡುತ್ತಾರೆ.
ಎಲ್ಲಿ?: ಚೇಟಾಸ್ ಕಿಚನ್, ನಂ. 12, 1ನೇ ಕ್ರಾಸ್, ಸಪ್ತಗಿರಿ ಲೇಔಟ್, ವಿದ್ಯಾರಣ್ಯಪುರ
ಸಂಪರ್ಕ: 9980137432