Advertisement

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

12:27 AM Dec 28, 2024 | Team Udayavani |

ಬೆಂಗಳೂರು: ಬಹುತೇಕ ಹವ್ಯಕರು ಅವಲಂಬಿಸಿರುವ ಅಡಿಕೆ ಬೆಳೆಯ ಕುರಿತು ವಿವಿಧ ರೀತಿಯ ವರದಿಗಳು ಬಂದರೂ ಅಡಿಕೆ ಬೆಳಗಾರರ ಹಿತ ಕಾಯಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಶ್ವಾಸನೆ ನೀಡಿದ್ದಾರೆ.

Advertisement

ಅಖೀಲ ಹವ್ಯಕ ಮಹಾಸಭಾ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಅಡಿಕೆ ಬೆಳೆಗೆ ಸಂಬಂಧಿಸಿ ಹವ್ಯಕ ಸಮುದಾಯದ ಹಲವರು ತಮ್ಮನ್ನು ಭೇಟಿಯಾಗಿ ಅಡಿಕೆ ಬಗ್ಗೆ ವಿವಿಧ ರೀತಿಯ ವರದಿಗಳು ಬರುವ ಕುರಿತು ಚರ್ಚಿಸಿದ್ದಾರೆ. ಆದರೆ ಅಡಿಕೆ ಕೇವಲ ತಿನ್ನಲು ಮಾತ್ರ ಸೀಮಿತವಾಗಿಲ್ಲ. ಅಡಿಕೆ ಇಲ್ಲದೆ ವಿವಾಹ ನಡೆಯುವುದಿಲ್ಲ, ಶ್ರಾದ್ಧವೂ ಆಗುವುದಿಲ್ಲ. ಕೇಂದ್ರ ಸರಕಾರವು ಅಡಿಕೆ ಬೆಳೆಗಾರರ ಹಿತ ಕಾಪಾಡಲು ಬದ್ಧವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next