ಪಾಲಕ್ಕಾಡ್: ಇಡ್ಲಿ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಆಘಾತಕಾರಿ ಘಟನೆ ಕೇರಳದ ವಲ್ಯಾರ್‌ನಲ್ಲಿ ಶನಿವಾರ (ಸೆ.೧೪) ರಂದು ನಡೆದಿದೆ.
ಮೃತ ವ್ಯಕ್ತಿಯನ್ನು ಕಂಜಿಕೋಡು ಗ್ರಾಮದ ಸುರೇಶ್ (50) ಎನ್ನಲಾಗಿದೆ.
ಸೆಪ್ಟೆಂಬರ್ 15 ರಂದು ಕೇರಳದಾದ್ಯಂತ ಓಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ, ಅದರಂತೆ ಆಯಾಯ ಪ್ರದೇಶದಲ್ಲಿ ಮಕ್ಕಳಿಗೆ, ಯುವಕ, ಯುವತಿತರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ ಅದರಂತೆ ಕೇರಳದ ವಲ್ಯಾರ್‌ನಲ್ಲಿ ವಿವಿಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ಹಾಗೆ ಕೊನೆಗೆ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಅದೂ ಚಟ್ನಿ, ಸಾಂಬಾರ್ ಇಲ್ಲದೆ ಬರೇ ಇಡ್ಲಿ ಮಾತ್ರ ತಿನ್ನುವ ಸ್ಪರ್ಧೆ.
ಈ ಸ್ಪರ್ಧೆಗೆ 50 ವರ್ಷದ ಲಾರಿ ಚಾಲಕ ಸುರೇಶ್ ಕೂಡ ಭಾವಹಿಸಿದ್ದರು, ಸ್ಪರ್ಧೆ ಶುರು ಆಯಿತು ಎಲ್ಲರು ಇಡ್ಲಿ ತಿನ್ನಲು ಶುರು ಮಾಡಿದ್ದಾರೆ ಸುರೇಶ್ ಕೂಡಾ ಇಡ್ಲಿ ತಿನ್ನಲು ಶುರು ಹಚ್ಚಿಕೊಂಡಿದ್ದಾರೆ ಆದರೆ ಸ್ಪರ್ಧೆಯಲ್ಲಿ ಮೊದಲು ಬರಬೇಕು ಎನ್ನುವ ತವಕದಲ್ಲಿ ಒಮ್ಮೆಲೇ ಮೂರೂ ಇಡ್ಲಿಯನ್ನು ಬಾಯಿಗೆ ಹಾಕಿದ್ದಾರೆ ಈ ವೇಳೆ ಇಡ್ಲಿ ಸುರೇಶ್ ಅವರ ಗಂಟಲಲ್ಲಿ ಸಿಲುಕಿ ಉಸಿರಾಡಲು ಕಷ್ಟವಾಗಿದೆ ಕೂಡಲೇ ಅವರ ಸಮಸ್ಯೆಯನ್ನು ಆಲಿಸಿದ ಅಲ್ಲಿದ್ದ ಜನ ಕೂಡಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಸುರೇಶ್ ಅವರ ದುರಾದೃಷ್ಟ ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.
ತಿನ್ನುವ ಸ್ಪರ್ಧೆಯಲ್ಲಿ 50 ವರ್ಷದ ವ್ಯಕ್ತಿಯೂ ಭಾಗವಹಿಸುತ್ತಿದ್ದ. ಆದರೆ ಇಡ್ಲಿ ತಿನ್ನುವ ಪೈಪೋಟಿಯೇ ಅವರ ಬದುಕಿನ ಶಾಪ. ಈ ವ್ಯಕ್ತಿಯು ಸ್ಪರ್ಧೆಯಲ್ಲಿ ಗೆಲ್ಲಲು ಬಯಸಿದ ಕಾರಣ ಒಂದೇ ಬಾರಿಗೆ ಒಂದು ಇಡ್ಲಿಯನ್ನು ತಿನ್ನುತ್ತಾನೆ. ಆದರೆ ಇದ್ದಕ್ಕಿದ್ದಂತೆ ಒಂದು ಇಡ್ಲಿ ಅವನ ಗಂಟಲಿಗೆ ಸಿಕ್ಕಿಕೊಂಡಿತು. ಇದರಿಂದ ಅವರಿಗೆ ಉಸಿರಾಟದ ತೊಂದರೆ ಶುರುವಾಗಿದೆ. ತಕ್ಷಣ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Udupi: ‘ಕಲ್ಜಿಗ’ ಸಿನೆಮಾದಲ್ಲಿ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ