Advertisement

ವಿಮಾನದ ಟಾಯ್ಲೆಟ್‌ ತ್ಯಾಜ್ಯ ಮನೆಗಳ ಮೇಲೆ!

06:25 AM Dec 06, 2017 | Team Udayavani |

ನವದೆಹಲಿ: ವಿಮಾನ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುತ್ತಿದ್ದಂತೆ ಶೌಚಾಲಯ ಖಾಲಿ ಮಾಡಲಾಗುತ್ತಿದ್ದು, ತ್ಯಾಜ್ಯ ಮನೆಯ ಮೇಲೆ ಬೀಳುತ್ತಿದೆ ಎಂದು ಆರೋಪಿಸಿ ನಿವೃತ್ತ ಲೆ.ಜ.ಸತ್ವಂತ್‌ ಸಿಂಗ್‌ ದಹಿಯಾ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ದೂರು ನೀಡಿದ್ದಾರೆ. ದೂರು ಪರಿಶೀಲನೆ ನಡೆಸಿದ ಎನ್‌ಜಿಟಿ, ಮನೆ ಮೇಲೆ ಬಿದ್ದಿರುವ ತ್ಯಾಜ್ಯವು ಮಾನವರದ್ದೇ ಅಥವಾ ಹಕ್ಕಿಯದ್ದೇ ಎಂದು ಖಚಿತಪಡಿಸಲು ಹೈದರಾಬಾದ್‌ನ ಲ್ಯಾಬ್‌ಗ ಕಳುಹಿಸಿದೆ. 

Advertisement

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಇದರಲ್ಲಿ ಮಾನವ ತ್ಯಾಜ್ಯವೂ ಇದೆ ಎಂದು ಹೇಳಿಕೆ ನೀಡಿದೆ. ಇನ್ನೊಂದೆಡೆ, ವಿಮಾನ ಚಲಿಸುತ್ತಿರುವಾಗ ಶೌಚಾಲಯ ಖಾಲಿ ಮಾಡುವುದು ಸಾಧ್ಯವೇ ಇಲ್ಲ ಎಂದು ನಾಗರಿಕ ವಿಮಾನಯಾನ ನಿಯಂ ತ್ರಣಾ ಪ್ರಾಧಿಕಾರ ಹೇಳಿದೆ. ನಿಲ್ದಾಣದಲ್ಲೇ ತ್ಯಾಜ್ಯ ತೆರವುಗೊಳಿಸಬೇಕು, ಇದನ್ನು ಉಲ್ಲಂ ಸಿದರೆ 50 ಸಾವಿರ ರೂ. ದಂಡ ವಿಧಿಸಬೇಕು ಎಂದು ಡಿಜಿಸಿಎಗೆ ಹಸಿರು ನ್ಯಾಯಾಧಿಕರಣ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next