Advertisement
ಇದರಲ್ಲಿ ಮೊದಲಿಬ್ಬರೆಂದರೆ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್. ಇವರಿಬ್ಬರೂ 1996ರ ಇಂಗ್ಲೆಂಡ್ ಪ್ರವಾಸದ ವೇಳೆ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಒಟ್ಟಿಗೇ ಟೆಸ್ಟ್‌ಕ್ಯಾಪ್ ಧರಿಸಿದರು. ಸರಿಯಾಗಿ 15 ವರ್ಷಗಳ ಬಳಿಕ, 2011ರ ಜೂ. 20ರಂದು ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಆಡಲಿಳಿದರು. ಈಗ ಅವರು “ಕ್ರಿಕೆಟ್ ಕಿಂಗ್’ ಆಗಿ ಮೆರೆಯುತ್ತಿದ್ದಾರೆ. ದ್ರಾವಿಡ್ ಮತ್ತು ಗಂಗೂಲಿ ಅವರನ್ನು ಈ ದಿನದಂದು ನೆನೆಯಲು ವಿಶೇಷ ಕಾರಣವಿದೆ. ಇವರಿಬ್ಬರ ಟೆಸ್ಟ್ ಪ್ರವೇಶಕ್ಕೆ ಶನಿವಾರ 24 ವರ್ಷ ಪೂರ್ತಿಗೊಂಡಿದೆ.
ಕ್ರಿಕೆಟ್ ವೈಭವಕ್ಕೆ ಮುನ್ನುಡಿ ಅದು ಇಂಗ್ಲೆಂಡ್ ಪ್ರವಾಸದ ದ್ವಿತೀಯ ಟೆಸ್ಟ್. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 8 ವಿಕೆಟ್‌ಗಳಿಂದ ಸೋತಿದ್ದ ಅಜರುದ್ದೀನ್ ಪಡೆ 0-1 ಹಿನ್ನಡೆಯಲ್ಲಿತ್ತು. ಲಾರ್ಡ್ಸ್ ಟೆಸ್ಟ್ ವೇಳೆ 2 ಪ್ರಮುಖ ಬದಲಾವಣೆಗಳೊಂದಿಗೆ ಭಾರತ ತಂಡ ಕಣಕ್ಕಿಳಿಯಿತು. ಸಂಜಯ್ ಮಾಂಜ್ರೆàಕರ್ ಮತ್ತು ಸುನೀಲ್ ಜೋಶಿ ಬದಲು ಗಂಗೂಲಿ ಮತ್ತು ದ್ರಾವಿಡ್ ಅವರನ್ನು ಸೇರಿಸಿಕೊಳ್ಳಲಾಯಿತು. ಯುವ ಆಟಗಾರರಿಬ್ಬರೂ ಈ ಅವಕಾಶವನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡರು. ಭಾರತೀಯ ಕ್ರಿಕೆಟಿನ ವೈಭವದ ದಿನಗಳಿಗೆ ಮುನ್ನುಡಿ ಬರೆದದ್ದು, ಮುಂದೆ “ಫ್ಯಾಬ್ ಫೈವ್’ ಪಟ್ಟಿ ಅಲಂಕರಿಸಿದ್ದು ಇತಿಹಾಸ. ದ್ರಾವಿಡ್ ಕೆಳ ಕ್ರಮಾಂಕ
ಅಂದು ಗಂಗೂಲಿ ವನ್‌ಡೌನ್‌ನಲ್ಲಿ ಕ್ರೀಸ್ ಇಳಿದು ಭರ್ಜರಿ 131 ರನ್ ಬಾರಿಸಿ “ಕ್ರಿಕೆಟ್ ಕಾಶಿ’ಯಲ್ಲಿ ಮೆರೆದಾಡಿದರು. ಚೊಚ್ಚಲ ಟೆಸ್ಟ್ ನಲ್ಲೇ ಸೆಂಚುರಿ ಹೊಡೆದ ಭಾರತದ 10ನೇ ಕ್ರಿಕೆಟಿಗನೆಂಬ ಹೆಗ್ಗಳಿಕೆ ಇವರದಾಗಿತ್ತು. ಆದರೆ ದ್ರಾವಿಡ್ ಶತಕದ ಅವಕಾಶವನ್ನು ಕೇವಲ 5 ರನ್ನಿನಿಂದ ಕಳೆದುಕೊಂಡು ನಿರಾಸೆ ಅನುಭವಿಸಬೇಕಾಯಿತು. ಮುಂದೆ “ಗೋಡೆ’ಯಾಗಿ ನಿಂತು ಭಾರತೀಯ ಕ್ರಿಕೆಟನ್ನು ಗಟ್ಟಿಗೊಳಿಸಿದ ದ್ರಾವಿಡ್ ಅಂದು ಬ್ಯಾಟ್ ಹಿಡಿದು ಬಂದದ್ದು 7ನೇ ಕ್ರಮಾಂಕದಲ್ಲಿ ಎಂಬುದನ್ನು ಮರೆಯಬಾರದು!
Related Articles
Advertisement